ಕನ್ನಡ ಚಿತ್ರರಂಗವನ್ನು ಕೊರೋನಾ ವೈರಸ್ ಕಾಡಿದಂತೆ ಇಂದು ಡ್ರಗ್ಸ್ ವ್ಯವಹಾರದ ಕಳಂಕ ಕಾಡುತ್ತಿದೆ. ಈ ಡ್ರಗ್ಸ್ ವ್ಯವಹಾರ ಕಳಂಕ ಕನ್ನಡ ಚಿತ್ರರಂಗದ ಮೇಲೆ ಕರೀ ನೆರಳಿನಂತೆ ಆವರಿಸಿದೆ. ಇದರ ಜೊತೆಗೆ ಈ ಡ್ರಕ್ಸ್ ನ ವ್ಯವಹಾರದ ಆರೋಪ ಕೆಲವು ನಟರ ಮೇಲೆ ಬಿದ್ದಿದೆ. ಈ ಕುರಿತು ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಮಾತನಾಡುತ್ತಿದ್ದಾರೆ ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ದರ್ಶನ್ ನೀಡಿದ ಪ್ರತಿಕ್ರಿಯೆ ಏನು..?

 

 

ಕನ್ನಡ ಚಿತ್ರರಂಗದಲ್ಲಿ ಡ್ರಗ್ ವ್ಯವಹಾರ ನಡೆಯುತ್ತಿದೆ ಎಂದು ಕೇಳಿಬರುತ್ತಿರುವ ಆರೋಪ ಕುರಿತಂತೆ ಪ್ರತಿಕ್ರಿಯಿಸಿರುವ ನಟ ದರ್ಶನ್ ಅಂತಹ ಆರೋಪ ಕೇಳಿ ಬರುತ್ತಿರುವುದು ಸ್ಯಾಂಡಲ್ ವುಡ್ ಮಾತ್ರವಲ್ಲ ಕರ್ನಾಟಕಕ್ಕೆ ಕಳಂಕ ಎಂದಿದ್ದಾರೆ. ‌



ನಿರ್ದೇಶಕ ಇಂದ್ರಜಿತ್ ಲಂಕೇಶ್ ರವರ ಆರೋಪ ಕುರಿತಂತೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಪೊಲೀಸ್ ತನಿಖೆ ನಡೆಯುತ್ತಿದೆ. ಒಂದು ವಾರದಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದರು.



ಚಿರಂಜೀವಿ ಸರ್ಜಾ ಹೆಸರು ಕೇಳಿ ಬರುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ದರ್ಶನ್, ಚಿರಂಜೀವಿ ಸರ್ಜಾ ನಿಧನರಾಗಿ ಮೂರು ತಿಂಗಳು ಕಳೆದಿದೆ. ‌ ನಮ್ಮ ತಂದೆ ಸತ್ತವರು ಯಾರೇ ಆಗಿರಲಿ ಅವರ ಬಗ್ಗೆ ಕೆಟ್ಟದ್ದು ಮಾತನಾಡಬಾರದು ಎಂದು ಹೇಳುತ್ತಿದ್ದರು. ಯಾರೇ ಆಗಿರಲಿ ಸತ್ತ ಮೇಲೆ ಕೆಟ್ಟದ್ದಾಗಿ ಮಾತನಾಡಬಾರದು. ಒಂದೊಮ್ಮೆ ಆರೋಪ ಪ್ರೂವ್ ಆದರೆ ಕರೆದುಕೊಂಡು ಬಂದು ಶಿಕ್ಷೆ ಕೊಡಲಿಕ್ಕಾಗುತ್ತದೆಯೇ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.




ಒಂದು ಕ್ಲಾಸ್ ಎಂದರೆ ರ್ಯಾಂಕ್ ಸ್ಟೂಡೆಂಟ್ ಇರ್ತಾನೆ. ಇನ್ನೊಬ್ಬ ಝೀರೋ ತೆಗೆಯೋ ಸ್ಟೂಡೆಂಟ್ ಇರ್ತಾನೆ. ಇಡೀ ಕ್ಲಾಸ್ ಅನ್ನು ಝೀರೋ ಅನ್ನಲಿಕ್ಕಾಗುತ್ತದೆಯೇ. ಅದೇ ರೀತಿ ಇಡೀ ಸ್ಯಾಂಡಲ್ ವುಡ್ ಅನ್ನಬೇಡಿ ಎಂದು ಮನವಿ ಮಾಡಿದರು. ಲಾಕ್ ಡೌನ್ ನಿಂದ ‌ನಂಗೆ ಒಂದು ವರ್ಷ ಕೆಲಸ ಇಲ್ಲ. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಒಳ್ಳೆಯ ಕುದುರೆ ಸಾಕಿರುವುದು ಗೊತ್ತಾಯಿತು. ಕೇಳಿದೆ ಬಂದು ತಗೊಂಡು ಅಂದರು. ಅದಕ್ಕೆ ಎರಡು ಕುದುರೆ ತೆಗೆದುಕೊಂಡು ಹೋಗಲು ದಾವಣಗೆರೆಗೆ ಬಂದಿದ್ದೇನೆ ಎಂದು ದಾವಣಗೆರೆ ಭೇಟಿ ಕುರಿತು ಮಾಹಿತಿ ನೀಡಿದರು.




ಅಂಬರೀಶ್ ಮತ್ತು ಮಲ್ಲಣ್ಣ ಇಬ್ಬರು ಭಾರೀ ಸ್ನೇಹಿತರು. ಇದೀಗ ಮಲ್ಲಣ್ಣ ಪ್ರೀತಿಯಿಂದ ನನಗೆ ಕುದುರೆ ಕೊಟ್ಟಿದ್ದಾರೆ. ಅವರಿಗೆ ದುಡ್ಡು ಕೊಡಲಿಕ್ಕಾಗುತ್ತದೆಯೇ ಎಂದರು. ಕಾಂಗ್ರೆಸ್ ಸೇರುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಸಲಿಲ್ಲ.

మరింత సమాచారం తెలుసుకోండి: