ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಹಣವನ್ನು ಆದಷ್ಟು ಬೇಗ ಕಬ್ಬು ಬೆಳೆಗಾರರಿಂದ ಕೊಡಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಇದರಿಂದ ಕಬ್ಬು ಬೆಳೆಗಾರರಲ್ಲಿ ಒಂದು ಮಟ್ಟಿಗಿನ ಆತಂಕ ಕಡಿಮೆ ಆಗಿದೆ. ಆದರೆ ಕುಮಾರಸ್ವಾಮಿ ತಮಾ ಮಾತಿಗೆ ಬದ್ಧರಾಗಿ ನಡೆದುಕೊಳ್ಳದಿದ್ದರೆ, ಜುನ್ 4ರಂದು ವಿಧಾನ ಸೌಧದ ಎದುರಿಗೆ ಪ್ರತಿಭಟನೆ ಮಾಡೋದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರಿಗೆ ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ 4,000 ಕೋಟಿ ರೂ. ಬಾಕಿ ಬರಬೇಕಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. 2018-19ರ ಸಾಲಿನ ಬಾಕಿಯನ್ನು ಸಕ್ಕರೆ ಕಾರ್ಖಾನೆ ಮಾಲೀಕರು ನೀಡಿಲ್ಲ. ಹೀಗಾಗಿ ಇನ್ನುಳಿದ 15 ದಿನಗಳ ಒಳಗೆ ಈ ಹಣವನ್ನು ರೈತರಿಗೆ ಕೊಡಿಸಬೇಕು ಆಗ್ರಹ ವ್ಯಕ್ತವಾಗಿದೆ. ಜೊತೆಗೆ ಕಬ್ಬು ಬೆಳೆಗಾರರ ಮೇಲೆ ದಾಖಲಾಗಿರುವ ಪ್ರಕರಣ ಹಿಂಪಡೆಯಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
click and follow Indiaherald WhatsApp channel