ಶಿವಮೊಗ್ಗದ ಬಿಜೆಪಿಯ ಸಂಸದ ಹಾಗೂ ಯಡಿಯೂರಪ್ಪ ಅವರ ಮಗ ಬಿ.ವೈ ರಾಘವೇಂದ್ರ ಅವರು ರಾಜ್ಯ ಜಲ ಸಂಪನ್ಮೂಲ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅಲ್ಲದ ಈ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಅಷ್ಟಕ್ಕೂ ಈ ಭೇಟಿ ಕುತೂಹಲ ಮೂಡಿಸಲು ಕಾರಣವಾದ್ರೂ ಏನು ಅಂದ್ರೆ, ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಜೆಡಿಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಚಾರ ನಡೆಸಿದ್ದರು. ಆಗ ರಾಘವೇಂದ್ರ ಅವರ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಹೀಗಾಗಿ ಇದೀಗ ಇಬ್ಬರ ಭೇಟಿ ಕುತೂಹಲ ಕೆರಳಿಸಿದೆ.
(ಮಧು ಬಂಗಾರಪ್ಪ)
ಹಾಗಾದರೆ, ರಾಘವೇಂದ್ರ ಅವರು ಡಿಕೆಶಿ ಅವರನ್ನು ಭೇಟಿ ಮಾಡಿದ್ದಾದ್ರೂ ಯಾಕೆ? ಶಿವಮೊಗ್ಗ ಲೋಕಸಭಾ ವ್ಯಾಪ್ತಿಗೆ ಬಜೆಟ್ ನಲ್ಲಿ ಒಟ್ಟು 6 ನೀರಾವರಿ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಹೀಗಾಗಿ ಆ ಯೋಜನೆಗಳ ಅನುದಾನವನ್ನು ಬಿಡುಗಡೆ ಮಾಡಿ ಎಂದಹ ಸಂಸದ ರಾಘವೇಂದ್ರ ಅವರು ಕೇಳಿಕೊಂಡಿದ್ದಾರೆ.
click and follow Indiaherald WhatsApp channel