ಜ್ಞಾನವೇ ಸಂಪತ್ತು ಅಂತ ನಾವು ಹೇಳಬೇಕಿರುವುದು ಕನ್ನಡದ ಕೋಟ್ಯಾಧಿಪತಿ ಚಿತ್ರಕ್ಕೆ. ಹೌದು, ಇಲ್ಲಿ ಜ್ಞಾನ ಇದ್ದರೆ ಸಾಕು, ಕೋಟಿ ಕೋಟಿ ಗೆಲ್ಲಬಹುದು. ಈಗಾಗಲೇ ಎಲ್ಲರ ಮನಸ್ಸನ್ನು ಸೆರೆ ಹಿಡಿದಿರುವ ಕನ್ನಡದ ಕೋಟ್ಯಾಧಿಪತಿ ಗೇಮ್ ಶೋವನ್ನು ಈ ಬಾರಿ ಪುನೀತ್ ಅವರು ನಡೆಸಿಕೊಡಲಿದ್ದಾರೆ.
ಹೌದು, ಐದು ವರ್ಷಗಳ ಬಳಿಕ ಪುನೀತ್ ರಾಜಕುಮಾರ್ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಈ ಹಿಂದೆ ಕನ್ನಡದ ಕೋಟ್ಯಾಧಿಪತಿ ಚೆನ್ನೈ ನಲ್ಲಿ ಶೂಟಿಂಗ್ ಆಗ್ತಾ ಇತ್ತು. ಇದೀಗ ಬೆಂಗಳೂರಿನಲ್ಲಿ ಕಲರ್ಸ್ ಕನ್ನಡ ವಾಹಿನಿ, ಅದ್ಧೂರಿ ಸೆಟ್ ಹಾಕಿ ವರ್ಣರಂಜಿತ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸುತ್ತಿದೆ.
ಕನ್ನಡದ ಕೋಟ್ಯಾಧಿಪತಿ ಗೇಮ್ ಇದೇ ಜೂನ್ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಆರಂಭ ಆಗಲಿದೆ. ಅಲ್ಲದ ನಟ ಪುನೀತ್ ಅವರು ನಡಿಸಿಕೊಡುತ್ತಿರುವ ಈ ಬಾರಿಯ ಕನ್ನಡದ ಕೋಟ್ಯಾಧಿಪತಿ ಸಾಕಷ್ಟು ಕುತೂಹಲ ಕೆರಳಿಸಿದೆ.
click and follow Indiaherald WhatsApp channel