ಕೊರೋನಾ ವೈರಸ್ ರಾಜ್ಯದಲ್ಲಿ ಪ್ರತನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚುತ್ತಲೇ  ಇದೆ. ಅದರಲ್ಲೂ ಇಂದು ಕೊರೋನಾ ಸೋಂಕು ಹೆಚ್ಚಾಗಿರುವುದನ್ನು ನೋಡಿದರೆ ಎಂತವರನ್ನಾದರೂ ಭಯಭೀತಿಗೊಳಿಸದೇ ಇರದು, ಇಷ್ಟು ದಿನಗಳ ಕಾಲ 6 ಸಾವಿರದ ಗಡಿಯಲ್ಲಿದ್ದ ಕೊರೋನಾ ಸೋಂಕು ಇಂದು ಅದಕ್ಕೂ ಮುಂದೆ ಹೋಗಿ ಹತ್ತು ಸಾವಿರದ ಗಡಿಯನ್ನು ತಲುಪಿದೆ. ಅಷ್ಟಕ್ಕೂ ಇಂದು ರಾಜ್ಯದಲ್ಲಿ ದಾಖಲಾದ ಕೊರೋನಾ ಸೋಂಕು ಎಷ್ಟು ಗೊತ್ತಾ..?


ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಹೊಸ ದಾಖಲೆ ಸೃಷ್ಟಿಯಾಗಿದೆ. ಪ್ರತಿದಿನ ಐದಾರು ಸೋಂಕುಗಳು ಪತ್ತೆಯಾಗುತ್ತಿದ್ದವು. ಆದರೆ, ಈಗ ಒಂದೇ ದಿನಕ್ಕೆ ಹೊಸ ಸೋಂಕುಗಳ ಸಂಖ್ಯೆ 10 ಸಾವಿರ ಸಮೀಪಿಸಿದೆ.

 
 ಶನಿವಾರ ಬರೋಬ್ಬರಿ 8818 ಪ್ರಕರಣಗಳು ವರದಿಯಾಗಿವೆ. ಇದರ ಜತೆಗೆ ಇಂದು ಒಂದೇ ದಿನ 6629 ಸೋಂಕಿತರು ಗುಣವಾಗಿದ್ದಾರೆ. ಶನಿವಾರ 114 ಸಾವಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ ನಾಲ್ಕು ಸಾವಿರ ಸಮೀಪಿಸಿದೆ. ಈವರೆಗೆ ಸೋಂಕಿನಿಂದ 3831 ಜನ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,19,926ಕ್ಕೆ ಏರಿಕೆಯಾಗಿದೆ. ಈ ಪೈಕಿ 1,34,811 ಮಂದಿ ಈಗಾಗಲೇ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆಗಿದ್ದಾರೆ. ಶನಿವಾರ ಒಂದೇ ದಿನ 6629 ಮಂದಿ ಗುಣವಾಗಿದ್ದಾರೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 81276ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 716 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿವಾರ ಒಂದೇ ದಿನ 25731 ಆ್ಯಂಟಿಜೆನ್‌ ಟೆಸ್ವ್‌, ಆರ್‌ಟಿ-ಪಿಸಿಆರ್‌ ಮತ್ತು ಇತರ 29075 ಟೆಸ್ವ್‌ ಗಳು ಸೇರಿ ಒಟ್ಟು 54806 ಟೆಸ್ವ್‌ ಮಾಡಲಾಗಿದೆ. ಇದುವರೆಗೆ 490017 ಆ್ಯಂಟಿಜೆನ್‌ ಟೆಸ್ವ್‌ ಮಾಡಲಾಗಿದೆ. 1503743 ಆರ್‌ಟಿ-ಪಿಸಿಆರ್‌ ಮತ್ತು ಇತರ ಟೆಸ್ವ್‌ ಮಾಡಲಾಗಿದೆ.

 
 ಬೆಂಗಳೂರಲ್ಲಿ 3495 ಸೋಂಕು

ಬೆಂಗಳೂರಲ್ಲಿ ಶನಿವಾರ ಒಂದೇ ದಿನ 3495 ಕೇಸ್‌ ಗಳು ವರದಿಯಾಗಿವೆ. ಈ ಮೂಲಕ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 87680ಕ್ಕೆ ಏರಿಕೆಯಾಗಿದೆ. ಶನಿವಾರ 2034 ಮಂದಿ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇತ್ತೀಚೆಗೆ ಗುಣವಾಗುವವರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಇದುವರೆಗೆ 51426 ಜನ ಗುಣವಾಗಿದ್ದಾರೆ.
 

 ಪ್ರಸ್ತುತ ನಗರದಲ್ಲಿ ಒಟ್ಟು 34858 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಶನಿವಾರ 35 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಬೆಂಗಳೂರಿನಲ್ಲಿ ಒಟ್ಟು 1395 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ.

మరింత సమాచారం తెలుసుకోండి: