ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ತನಕ ಹವಾ ಕ್ರಿಯೆಟ್ ಮಾಡಿದ್ದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ ಅವರ ಅಭಿನಯದ ರುಸ್ತುಂ ಚಿತ್ರ ಇದೀಗ ಭರ್ಜರಿಯಾಗಿಯೇ ಬಿಡುಗಡೆ ಆಗಿದೆ. ಅಷ್ಟೇ ಅಲ್ಲದೇ ಎಲ್ಲೆಡೆಯೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಹೌದು, ರುಸ್ತುಂ ಸಿನಿಮಾ ಮೊದಲಿನಿಂದಲೂ ಭಾರೀ ನಿರೀಕ್ಷೆ ಮೂಡಿಸಿತ್ತು. ಹೀಗಾಗಿ ಈ ಚಿತ್ರಕ್ಕೆ ಇದೀಗ ಭರ್ಜರಿ ಓಪನಿಂಗ್ ಸಿಕ್ಕಿದೆ. ಅಲ್ಲದೇ, ಶಿವರಾಜ್ ಕುಮಾರ ಅವರ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಈ ಚಿತ್ರ ಜಯಣ್ಣ ಫಿಲಂಸ್ ಬ್ಯಾನರ್ ನಡಿ ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ.
ಇನ್ನು ರುಸ್ತುಂ ಮತ್ತೊಂದು ಕಾರಣಕ್ಕೆ ಸದ್ದು ಮಾಡಿತ್ತು. ಅದೇನು ಅಂದರೆ, ರುಸ್ತುಂ ಚಿತ್ರವನ್ನು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಿಸಿದ್ದಾರೆ. ರವಿವರ್ಮಾ ಬಾಲಿವುಡ್ ದಿಗ್ಗಜರಿಗೆಲ್ಲ ಸಾಹಸ ನಿರ್ದೇಶನ ಮಾಡಿದವರು. ಹೀಗಾಗಿ ಬಾಲಿವುಡ್ ಬಾದ್ ಶಾ ಗಳೂ ಈ ಸಿನಿಮಾ ನೋಡ್ತೀವಿ ಎಂದು ಹೇಳಿದ್ದರು. ಇದು ರವಿವರ್ಮ ಅವರ ಮೊದಲ ನಿರ್ದೇಶನದ ಚಿತ್ರ ಅನ್ನೋದು ಮತ್ತೊಂದು ವಿಶೇಷ.
click and follow Indiaherald WhatsApp channel