ಸ್ಯಾಂಡಲ್ ವುಡ್ ನಲ್ಲಿ ಇದೀಗ ಆಯುಷ್ಮಾನ್ ಹವಾ ಶುರುವಾಗಲಿದೆ.  ಈ ಸೂಪರ್​ ಹಿಟ್ ಚಿತ್ರಕ್ಕೆ ಕುಳ್ಳ ದ್ವಾರಕೀಶ್​ ಸಾಥ್​ ಸಿಕ್ಕಿರುವುದು ಮತ್ತೊಂದು ವಿಶೇಷತೆ. ಆಯುಷ್ಮಾನ್ ಭವ ಚಿತ್ರವು ದ್ವಾರಕೀಶ್​ ಚಿತ್ರ ಸಂಸ್ಥೆಯ 52ನೇ ಸಿನಿಮಾ. 1969ರಲ್ಲಿ ದ್ವಾರಕೀಶ್​​ ಮೊದಲ ಬಾರಿಗೆ ನಿರ್ಮಿಸಿದ್ದ ಮೇಯರ್​​ ಮುತ್ತಣ್ಣ ಚಿತ್ರದಲ್ಲಿ ಡಾ. ರಾಜ್​ಕುಮಾರ್​ ನಟಿಸಿದ್ರು.

ಸರಿಯಾಗಿ 50 ವರ್ಷಗಳ ನಂತ್ರ ಅದೇ ಬ್ಯಾನರ್​​ನಲ್ಲಿ ಅಣ್ಣಾವ್ರ ಮಗ ಡಾ. ಶಿವರಾಜ್​ಕುಮಾರ್​ ನಟಿಸಿದ್ದಾರೆ. ದ್ವಾರಕೀಶ್​ ಸಂಸ್ಥೆಗೆ ಆಪ್ತಮಿತ್ರ ರೀತಿಯ ಹಿಟ್​ ಕೊಟ್ಟ ಪಿ. ವಾಸು ಆಯುಷ್ಮಾಭವ ಚಿತ್ರದ ಸಾರಥ್ಯ ವಹಿಸಿದ್ದಾರೆ. ಈಗಾಗ್ಲೇ ಶಿವಣ್ಣ, ಪಿ. ವಾಸು ಕಾಂಬಿನೇಷನ್​​ನಲ್ಲಿ ಶಿವಲಿಂಗ ಸಿನಿಮಾ ಹಿಟ್​ ಆಗಿದೆ. ಆದ್ದರಿಂದ ಆಯುಷ್ಮಾನ್ ಭವದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಮ್ಯೂಸಿಕಲ್​ ಸಸ್ಪೆನ್ಸ್​​ ಥ್ರಿಲ್ಲರ್ ಆಯುಷ್ಮಾನ್​​​ಭವ ಟೀಸರ್ ಔಟ್
ಹೇಗಿದೆ ಗೊತ್ತಾ. 


ಲಿರಿಕಲ್​ ವೀಡಿಯೋ ಸಾಂಗ್ಸ್​ ಮೂಲಕ ಪ್ರಮೋಷನ್ ಸ್ಟಾರ್ಟ್​ ಮಾಡಿರೋ ಆಯುಷ್ಮಾನ್​ಭವ ಟೀಂ, ಚಿತ್ರದ ಫಸ್ಟ್​ ಲುಕ್​ ಟೀಸರ್​ ರಿವೀಲ್​ ಮಾಡಿದೆ. ಚಿತ್ರದಲ್ಲಿ ಹಿರಿಯ ನಟ ಅನಂತ್​ ನಾಗ್​, ಸುಹಾಸಿನಿ, ಅವಿನಾಶ್​ ಮುಖ್ಯಭೂಮಿಕೆಯಲ್ಲಿದ್ದು, ಡಿಂಪಲ್​ ಕ್ವೀನ್​ ರಚಿತಾ ರಾಮ್,​ ಶಿವಣ್ಣನಿಗೆ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ. ಪಿ. ವಾಸು ಅವರ ರೆಗ್ಯುಲರ್​ ಸ್ಟೈಲ್​ ಸಸ್ಪೆನ್ಸ್​​ ಥ್ರಿಲ್ಲರ್​ ಫ್ಲೆವರ್​ ಟೀಸರ್​ನಲ್ಲಿ ಕಾಣ್ತಿದೆ. ಆಪ್ತಮಿತ್ರ, ಆಪ್ತರಕ್ಷಕ, ಶಿವಲಿಂಗ ಸಿನಿಮಾಗಳಲ್ಲಿ ಇಂತದ್ದೇ ಪ್ರಯತ್ನ ಮಾಡಿ ನಿರ್ದೇಶಕ ಪಿ. ವಾಸು ಸಕ್ಸಸ್​ ಕಂಡಿದ್ದಾರೆ.

ಆದ್ರೆ ಈ ಬಾರಿ ಸಸ್ಪೆನ್ಸ್​​ ಥ್ರಿಲ್ಲರ್ ಆಯುಷ್ಮಾನ್​ಭವಗೆ ಮ್ಯೂಸಿಕ್​ ಟಚ್​ ಕೊಟ್ಟಿದ್ದಾರೆ. ಮ್ಯೂಸಿಕ್​ ಜೊತೆಗೆ ಆತ್ಮ, ಪ್ರೇತಾತ್ಮಗಳ ಜೊತೆ ನಿರ್ದೇಶಕರು ಅಸಲಿ ಆಟ ಆಡಿದ್ದಾರೆ. ಮ್ಯೂಸಿಕ್​​ ಡೈರೆಕ್ಟರ್​ ಆಗಿ ಗುರುಕಿರಣ್​ ಅದಕ್ಕೆ ಸಾಥ್​ ಕೊಟ್ಟಿದ್ದು, ಆಯುಷ್ಮಾನ್​​ಭವ ಗುರು, 100ನೇ ಸಿನಿಮಾ ಅನ್ನೋದು ಮತ್ತೊಂದು ವಿಶೇಷ. ಮ್ಯೂಸಿಕಲ್​ ಸಸ್ಪೆನ್ಸ್​​ ಥ್ರಿಲ್ಲರ್ ಚಿತ್ರಕ್ಕೆ ಅಡ್ವೆಂಚರಸ್​ ಟಚ್​ ಕೂಡ ಸಿಕ್ಕಿದೆ. ಎರಡು ಶೇಡ್​ಗಳಿರೋ ಪಾತ್ರದಲ್ಲಿ ರಚಿತಾ ರಾಮ್​ ಮಿಂಚು ಅಭಿಮಾನಿಗಳಲ್ಲಿ ರಸಿಕತೆ ಹೆಚ್ಚಿಸಿದೆ. 


మరింత సమాచారం తెలుసుకోండి: