ಒಂದೇ ಒಂದು ಚಿತ್ರದ ಮೂಲಕ ಪಡ್ಡೆ ಹೈಕಳ ಮನಗೆದ್ದ ಪೈಲ್ವಾನ್ ಬೆಡಗಿ ಆಕಾಂಕ್ಷಾ ಗೆ ಇದೀಗ ಸ್ಯಾಂಡಲ್ ವುಡ್, ಟಾಲಿವುಡ್, ಸೇರಿದಂತೆ ಸೌತ್ ಇಂಡಿಯ ಪೂರ್ತಿ ಭಾರೀ ಬೇಡಿಕೆ ಹೆಚ್ಚಾಗಿದೆ. ಆಕಾಂಕ್ಷಾ ಅಂದ-ಅಭಿನಯ ಎರಡಕ್ಕೂ ಸೈ. ಕನ್ನಡಕ್ಕೆ ಪರಭಾಷೆ ಗಮನ ಸೆಳೆಯುವುದರ ಜೊತೆಗೆ ಭರವಸೆ ಮೂಡಿಸುವುದು ನಿಜಕ್ಕೂ ಹೊಸ ವಿಷಯ. ಸದ್ಯಕ್ಕೆ ಈಗ ಪೈಲ್ವಾನ್ ಬೆಡಗಿ ಆಕಾಂಕ್ಷಾ ಸಿಂಗ್ ಅಂಥದ್ದೊಂದು ಭರವಸೆ ಮೂಡಿಸಿದ್ದಾರೆ. ಹೌದು ಇತ್ತೀಚೆಗಷ್ಟೇ ತೆರೆಗೆ ಬಂದ ಪೈಲ್ವಾನ್ ಚಿತ್ರ ಮೆಚ್ಚುಗೆ ಪಡೆದಿದೆ. ಕನ್ನಡಿಗರ ಮನ ಗೆದ್ದಿದೆ. ಅಷ್ಟೇ ಅಲ್ಲ ಆ ಚಿತ್ರದಲ್ಲಿ ಸುದೀಪ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿರುವ ಆಕಾಂಕ್ಷಾ ಸಿಂಗ್ ಕೂಡ ನೋಡುಗರ ಗಮನ ಸೆಳೆದಿದ್ದಾರೆ.


ಪರಭಾಷೆಯಿಂದ ಬರುವ ಬಹುತೇಕ ನಟಿಯರು ಗ್ಲಾಮರ್ ಗಷ್ಟೇ ಸೀಮಿತವಾಗಿರುವುದನ್ನು ಇಲ್ಲಿ ಗಮನಿಸಬಹುದು ಹಾಗಂತ ನಟನೆ ಇಲ್ಲವೆಂದಲ್ಲ ಆದರೆ, ಆಕಾಂಕ್ಷಾ ಸಿಂಗ್ ಗ್ಲಾಮರಸ್ ಆಗಿರುವುದಷ್ಟೇ ಅಲ್ಲ ತಮ್ಮ ಪ್ರಬುದ್ದ ನಟನೆಯಲ್ಲೂ ಸೈ ಎನಿಸಿಕೊಳ್ಳುವ ಮೂಲಕ ಸುದೀಪ್ ಗೆ ಸರಿಯಾದ ಜೋಡಿ ಎನಿಸಿಕೊಂಡಿದ್ದಾರೆ. ಇದು ಸಹಜವಾಗಿಯೇ ಆಕಾಂಕ್ಷಾ ಸಿಂಗ್ ಅವರಿಗೂ ಖುಷಿ ಹೆಚ್ಚಿಸಿದೆ. ಸದ್ಯಕ್ಕೆ ಆಕಾಂಕ್ಷಾ ಸಿಂಗ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಕನ್ನಡ ಬೆರಳಣಿಕೆ ನಟಿಯರು ಪರಭಾಷೆಯತ್ತ ಮುಖ ಮಾಡಿ ಅಲ್ಲಿ ನೆಲೆಕಂಡುಕೊಳುತ್ತಿರುವ ಹೊತ್ತಲ್ಲಿ ಪರಭಾಷೆಯಿಂದ ಬಂದ ಆಕಾಂಕ್ಷಾ ಸಿಂಗ್, ಇಲ್ಲಿನ ಮಂದಿಯ ಮೆಚ್ಚುಗೆ ಗಳಿಸುವ ಮೂಲಕ ಮೆಲ್ಲನೆ ನೆಲೆಕಾಣುವ ಸೂಚನೆ ಕೊಡುತ್ತಿದ್ದಾರೆ. 


ಈಗಾಗಲೇ ಒಂದಷ್ಟು ಮಂದಿ ಆಕಾಂಕ್ಷಾ ಸಿಂಗ್ ಅವರನ್ನು ಸಂಪರ್ಕಿಸುವ ಪ್ರಯತ್ನದಲೂ ಇದ್ದಾರೆ. ರಾಜಸ್ಥಾನ ಮೂಲದ ಆಕಾಂಕ್ಷಾ ಸಿಂಗ್ ಗೆ ಪೈಲ್ವಾನ ಕನ್ನಡದ ಮೊದಲ ಚಿತ್ರ ಹಾಗಂತ, ಸಿನಿಮಾ ಅನುಭವ ಇಲ್ಲವೆಂದಲ್ಲ  ಹಿಂದಿ ಕಿರುತೆರೆಯಲ್ಲಿ ನಾಲ್ಕೈದು ವರ್ಷ ಮಿಂಚಿದವರು. ಆ ಬಳಿಕ ಬೆರಳೆಣಿಕೆಯಷ್ಟು ಹಿಂದಿ ತೆಲುಗು ಚಿತ್ರಗಳನ್ನೂ ನಟಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಕನ್ನಡದ ಪೈಲ್ವಾನ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಳಿದ ಅವರ ನಟನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. 


మరింత సమాచారం తెలుసుకోండి: