ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರ ಬೆಳಗ್ಗೆಯೇ ತೆರೆಗಪ್ಪಳಿಸೋ ಈ ಚಿತ್ರ ಹೊಚ್ಚ ಹೊಸದೊಂದು ಪ್ರಯತ್ನ ಮಾಡಿದ್ದು, ಅದನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೋ  ಎಂಬುದು ನೋಡಬೇಕು. 


ಚಿತ್ರ ಮೆಗಾ ಹಿಟ್ ಪಡೆಯುತ್ತದೆ ಎಂಬುದು ನಿರ್ದೇಶಕರ ಮಾತಾಡಿದರೆ. ಅಷ್ಟರಮಟ್ಟಿಗೆ ಹೀಗಾಗಲೆ  ಚಿತ್ರದ ಲಿರಿಕಲ್ ಸಾಂಗ್ ಮತ್ತು ಟೀಸರ್ ಸದ್ದು ಮಾಡುತ್ತಿದೆ. ಕೆಜಿ ಎಫ್ ಸ್ಟಾರ್ ಯಶ್ ಮತ್ತು ಬ್ಯೂಟಿ ನಟಿ ರಾಧಿಕ ಪಂಡಿತ್ ಈಗಾಗಲೇ ಚಿತ್ರಕ್ಕೆ ಧ್ವನಿ ನೀಡಿ, ಚಿತ್ರದ ಪ್ರಚಾರಕ್ಕೆ ಮತ್ತಷ್ಟು ಮೆರಗು ನೀಡಿದ್ದರು. ಕೆಲವು ಡೈಲಾಗ್ಸ್ ಗಳಿಗೆ ಸ್ಯಾಂಡಲ್ ವುಡ್ ನ ಈ ಮುದ್ದಿನ ಜೋಡಿಯ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಸಂಗೀತ ಸಂಯೋಜಕ ಹಾಗೂ ಚಿತ್ರ ನಿರ್ದೇಶಕ ರವಿ ಬಸ್ರೂರ್​ ನಿರ್ದೇಶನದಲ್ಲಿ ಮೂಡಿಬಂದಿರುವ ಗಿರ್ಮಿಟ್ ಚಿತ್ರವು ಶುಕ್ರವಾರ  ತೆರೆ ಕಾಣಲಿದೆ. ಚಿತ್ರದಲ್ಲಿ ಮಕ್ಕಳು ಯುವಕರಂತೆ ನಟಿಸಿರುವುದರಿಂದ ಚಿತ್ರದ ತುಂಬಾ ಕುತೂಹಲ ಮೂಡಿದೆ.


ನಾಳೆ ಚಿತ್ರ ತೆರೆ ಕಾಣುವ ಮುಂಚೆಯೇ ಇಂದು ಚಿತ್ರತಂಡ ಲಿರಿಕಲ್​ ಸಾಂಗ್​ವೊಂದನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಆಶ್ಲೇಶ್​ ರಾಜ್​ ಎಂಬ ಬಾಲ ನಟ ಯುವಕನಂತೆ ಅಭಿನಯಿಸಿದ್ದಾರೆ. ಕಿನ್ನಾಳ್​ ರಾಜ್​ ಸಾಹಿತ್ಯ ಹಾಗೂ ಸಂತೋಷ್​ ವೆಂಕಿ ಕಂಠದಲ್ಲಿ ಮೂಡಿಬಂದಿರುವ ಆಶ್ಲೇಶ್​ ರಾಜ್​ ಗ್ರ್ಯಾಂಡ್​ ಎಂಟ್ರಿ ಕೊಡುವ ‘ಎಂಟ್ರಿ ಕೊಟ್ರೆ ಮಾಸು’ ಎಂಬ ಹಾಡು ಕೇಳುಗರಿಗೆ ಭರಪೂರ ಮನರಂಜನೆ ನೀಡುವುದು ಖಚಿತವಾಗಿದೆ.ಸಾಂಗ್​ ಅಪ್​ಲೋಡ್​ ಮಾಡಿದ ಕೆಲವೇ ನಿಮಿಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಗಿರ್ಮಿಟ್​ ಪಡೆದುಕೊಂಡಿದೆ. ನಾಳೆ ಚಿತ್ರ ತೆರೆಗೆ ಬರುತ್ತಿರುವ ಕಾರಣ ಎಲ್ಲರೂ ಶುಭಕೋರುತ್ತಿದ್ದಾರೆ.


ಇನ್ನು ಚಿತ್ರಕ್ಕೆ ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿಯಾದ ನಟ ಯಶ್​ ಹಾಗೂ ರಾಧಿಕಾ ಪಂಡಿತ್​ ಧ್ವನಿ ನೀಡಿರುವುದರಿಂದ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರವನ್ನು ರವಿ ಬಸ್ರೂರ್​ ನಿರ್ದೇಶಿಸಿದ್ದು, ಎನ್​.ಎಸ್​.ರಾಜಕುಮಾರ್​ ಅವರು ಬಂಡವಾಳ ಹೂಡಿದ್ದಾರೆ. ಚಿತ್ರ ಹೇಗಿರಲಿದೆ, ಕಥೆಯಾದರೂ ಏನು ಎಂಬ ಕುತೂಹಲ ಗಳಿಗೆ ಶುಕ್ರವಾರ ಚಿತ್ರಮಂದಿರದಲ್ಲಿ ಉತ್ತರ ಸಿಗಲಿದೆ.


మరింత సమాచారం తెలుసుకోండి: