ಕೊರೋನಾ ವೈರಸ್  ಲಾಕ್ ಡೌನ್ ಸಮಯದಲ್ಲಿ ಕಾಣಿಸಿಕೊಂಡ ಪ್ರಮಾಣಕ್ಕಿಂತ ಅನ್ ಲಾಕ್ ಆದ ಸಮಯದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ಪ್ರಮಾಣ ಬಹಳ ಜಾಸ್ತಿ ಇದೆ. ಇದರಿಂದಾಗಿ ರಾಜ್ಯದ ಜನರು ಆತಂಕದಲ್ಲಿ ಬದುಕುವಂತಾಗಿದೆ. ಅದರಲ್ಲೂ ಮಹಾನಗರಗಳಲ್ಲಿ ಕೊರೊನಾ ಸೋಂಖು ಹೆಚ್ಚಾಗುತ್ತಿದ್ದು ಜಗರದ ಜನತೆಯಲ್ಲಿ  ಮತ್ತಷ್ಟು ಆತಂಕ ಹೆಚ್ಚಾಗಿದೆ. ಅಷ್ಟಕ್ಕೂ ಇಡೀ ರಾಜ್ಯದಲ್ಲಿ 24ಗಂಟೆಯೊಳಗೆ ಕಾಣಿಸಿಕೊಂಡ ಕೊರೋನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?

 

 ಮಹಾಮಾರಿ ಕೊರೊನಾ ವೈರಸ್​​ ದಿನದಿಂದ ದಿನಕ್ಕೆ ಹೆಚ್ಚು ಜನರಿಗೆ ಹರಡುತ್ತಿದ್ದು, ರಾಜ್ಯದಲ್ಲಿ ಇಂದು ಕೂಡ 120 ಹೊಸ ಕೋವಿಡ್​ ಪ್ರಕರಣ ಕಾಣಿಸಿಕೊಂಡಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6041ಕ್ಕೆ ಏರಿಕೆಯಾಗಿದೆ.

 

ಇಂದು ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 42 ಪಾಸಿಟಿವ್ ಬಂದಿದ್ದರೆ, ಯಾದಗಿರಿಯಲ್ಲಿ 27, ವಿಜಯಪುರ 13, ಕಲಬರುಗಿ 11 ಮಂದಿಗೆ ಸೋಂಕು ಬಂದಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 6,041ಕ್ಕೆ ಏರಿಕೆಯಾಗಿದ್ದು, ಒಟ್ಟು 2,862 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಈಗ 3,108 ಸಕ್ರಿಯ ಪ್ರಕರಣಗಳಿವೆ. ಉಳಿದಂತೆ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಧಾರವಾಡದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನು ಉಡುಪಿಯಲ್ಲಿ ಇಂದು ಕೂಡ ಯಾವುದೇ ಹೊಸ ಪ್ರಕರಣ ಕಾಣಿಸಿಕೊಂಡಿಲ್ಲ. ಇಂದಿನ 120 ಸೋಂಕಿತರ ಪೈಕಿ 68 ಹೊರ ರಾಜ್ಯದದಿಂದ ಆಗಮಿಸಿದ್ದರೆ, 3 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಮಹಾರಾಷ್ಟ್ರದಿಂದ ಮರಳಿದ 58 ವರ್ಷದ ವ್ಯಕ್ತಿ ಮೇ 23 ರಂದು ಹುಬ್ಬಳ್ಳಿ -ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 9 ರಂದು ಮೃತಪಟ್ಟಿದ್ದಾರೆ.

 

32 ವರ್ಷದ ಬೆಂಗಳೂರಿನ ವ್ಯಕ್ತಿ ಜೂನ್ 10 ರಂದು ಮೃತಪಟ್ಟಿದ್ದು, ನಂತರ ಕೋವಿಡ್ ಪರೀಕ್ಷೆಯಲ್ಲಿ ಫಲಿತಾಂಶ ಪಾಸಿಟಿವ್ ಬಂದಿದೆ. ಜ್ವರ, ಕೆಮ್ಮುವಿನಿಂದ ಬಳಲುತ್ತಿದ್ದ 57 ವರ್ಷದ ಬೆಂಗಳೂರಿನ ವ್ಯಕ್ತಿ ಜೂನ್ 8 ರಂದು ಆಸ್ಪತ್ರೆಗೆ ದಾಖಲಾಗಿದ್ದು ಅಂದೇ ನಿಧನರಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಏಕಾಏಕಿ ಕೊರೋನಸ ಸೋಂಕು ಸ್ಫೋಟಿಸಿದೆ. ಒಂದೇ ದಿನದಲ್ಲಿ 42 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.ಇದರಲ್ಲಿ ಬಹುಪಾಲು ಮಂದಿ ಇನ್‌ಫ್ಲೂಯೆಂಜಾ ಮಾದರಿ ಖಾಯಿಲೆಯಿಂದ ಬಳಲುತ್ತಿರುವವರೇ ಆಗಿದ್ದಾರೆ. ಎಲ್ಲರೂ ಉಸಿರಾಟದ ತೊಂದರೆ ಹಾಗೂ ಜ್ವರಭಾದೆಯಿಂದ ಬಳಲುತ್ತಿದ್ದಾರೆ.

 

ಕಳೆದ ಮೂರು ದಿನಗಳಲ್ಲಿ ಬೆಂಗಳುರಿನಲ್ಲಿ ಗುಣ ಹೊಂದಿದವರ ಸಂಖ್ಯೆ ತೀರ ನಿಕೃಷ್ಟ ಅಥವಾ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಈ ಅವಧಿಯಲ್ಲಿ ಹೆಚ್ಚು ಪ್ರದೇಶಗಳು ನಿರ್ಬಂಧಕ್ಕೆ ಒಳಪಟ್ಟಿವೆ. ಈ ಮಧ್ಯೆ ರಾಜ್ಯದಲ್ಲಿ ಸತತ ಮೂರನೇ ದಿನ ಸೋಂಕಿತರ ಸಂಖ್ಯೆಯನ್ನು ಮೀರಿ ಗುಣ ಹೊಂದಿದವರ ಸಂಖ್ಯೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಒಟ್ಟು 257 ಜನರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.ರಾಜ್ಯದಲ್ಲಿ ಸದ್ಯ 3108 ಸಕ್ರಿಯ ಪ್ರಕರಣಗಳಿದ್ದು, 2862 ಜನರು ಡಿಸ್ಚಾರ್ಜ್​​ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

 

ಉಡುಪಿ 93, ಕಲಬುರಗಿ 66, ಬೀದರ್ 19, ಯಾದಗಿರಿ 17, ಮಂಡ್ಯ 11, ಉತ್ತರ ಕನ್ನಡ 10, ದಕ್ಷಿಣ ಕನ್ನಡ 10, ದಾವಣಗೆರೆ 8, ಕೋಲಾರ 8, ಧಾರವಾಡ 6, ಬೆಳಗಾವಿ 4, ಹಾವೇರಿ 3, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಒಬ್ಬರು ಬಿಡುಗಡೆಯಾಗಿದ್ದಾರೆ.

 

ಬೆಂಗಳೂರು ನಗರ 42, ಯಾದಗಿರಿ 27, ವಿಜಯಪುರ 13, ಕಲಬುರಗಿ 11, ಬೀದರ್ 5, ದಕ್ಷಿಣ ಕನ್ನಡ 4, ಧಾರವಾಡ 4, ದಾವಣಗೆರೆ 3, ಹಾಸನ 3, ಬಳ್ಳಾರಿ 3, ಬಾಗಲಕೋಟೆ 2, ರಾಮನಗರ 2, ಬೆಳಗಾವಿ 1. ಬೆಂಗಳೂರು ನಗರ 4, ಕಲಬುರಗಿ 4, ಬೀದರ್ 2, ಮಂಡ್ಯ, ದಕ್ಷಿಣ ಕನ್ನಡ, ಚಾಮರಾಜನಗರ, ಧಾರವಾಡದಲ್ಲಿ ತಲಾ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

మరింత సమాచారం తెలుసుకోండి: