ಕರುನಾಡಿನ ಕಿಚ್ಚ ಸುದೀಪ್‌ ಅಭಿನಯಕ್ಕೆ ಇದೀಗ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. 2020ನೇ ಸಾಲಿನ “ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ ಅವಾರ್ಡ್‌’ ಘೋಷಣೆಯಾಗಿದ್ದು, “ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ ಅವಾರ್ಡ್‌-2020’ ರಲ್ಲಿ ಅವಾರ್ಡ್ ಒಲಿದು ಬಂದಿದೆ. ಹಾಗಾದರೆ ಪ್ರಶಸ್ತಿ ಯಾವುದು ಅಂತ ಇಲ್ನೋಡಿ. 
 
ಕಳೆದ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ತೆರೆಕಂಡ ಸಲ್ಮಾನ್‌ ಖಾನ್‌ ನಾಯಕನಾಗಿದ್ದ “ದಬಾಂಗ್‌-3′ ಸಿನಿಮಾದ ಸುದೀಪ್‌  ಖಳನಾಯಕನಾಗಿ ಬಲ್ಲಿ ಸಿಂಗ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. “ದಬಾಂಗ್‌-3′ ಚಿತ್ರದಲ್ಲಿ ಸುದೀಪ್‌ ನಿರ್ವಹಿಸಿದ್ದ ಬಲ್ಲಿ ಸಿಂಗ್‌ ಪಾತ್ರ ಪೋಷಣೆಗಾಗಿ ಈ ಪ್ರಶಸ್ತಿ ಒಲಿದು ಬಂದಿದೆ. ಈ ಬಾರಿ ದಾದಾ ಸಾಹೇಬ್‌ ಫಾಲ್ಕೆ ಹಾಗೂ ಮಹಾತ್ಮ ಗಾಂಧೀಜಿಯವರ 150ನೇ ವರ್ಷದ ಜನ್ಮದಿನೋತ್ಸವದ ಪ್ರಯುಕ್ತ “ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಅವಾರ್ಡ್‌’ ಕಾರ್ಯಕ್ರಮ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಫೆಬ್ರವರಿ 20ರಂದು ಮುಂಬೈನ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಡೆಯಲಿದೆ.
 
ಮಹಾರಾಷ್ಟ್ರದ ರಾಜ್ಯಪಾಲರು ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ಸಾಲಿನ “ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಅವಾರ್ಡ್‌’ “ಮೋಸ್ಟ್‌ ಪ್ರಾಮಿಸಿಂಗ್‌ ಆ್ಯಕ್ಟರ್‌’ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಷಯವನ್ನು ದಾದಾ ಸಾಹೇಬ್‌ ಫಾಲ್ಕೆಯವರ ಮೊಮ್ಮಗ ಹಾಗೂ “ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ ಅವಾರ್ಡ್‌’ನ ತೀರ್ಪುಗಾರ ಸಮಿಯ ಅಧ್ಯಕ್ಷರೂ ಆಗಿರುವ ಚಂದ್ರಶೇಖರ್‌ ಪುಸಲ್ಕರ್‌ ಇದೀಗ ಖಚಿತಪಡಿಸಿದ್ದು ಅಭಿಮಾನಿಗಳು ದಿಲ್ ಕುಶ್ ಆಗಿದ್ದಾರೆ. 
 
ಕಳೆದ ಬಾರಿ ಆಲ್ ಇಂಡಿಯಾ ಸ್ಟಾರ್ ನಟ ರಾಕಿಂಗ್‌ ಸ್ಟಾರ್‌ ಯಶ್‌ ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ ಅವಾರ್ಡ್‌ ’ಗೆ ಬಾಜನರಾಗಿದ್ದರು. ಈ ಬಾರಿ ಪ್ರಶಸ್ತಿ ಕನ್ನಡದ ಮತ್ತೂಬ್ಬ ಸ್ಟಾರ್‌ ನಟ ಸುದೀಪ್‌ಗೆ ಒಲಿದು ಬಂದಿದ್ದು, ಕನ್ನಡ ಚಿತ್ರ ಪ್ರೇಮಿಗಳು ಅದರಲ್ಲೂ ಸುದೀಪ್‌ ಅಭಿಮಾನಿಗಳು ಜೋರಾಗಿ ಸಂಭ್ರಮಿಸುತ್ತಿದ್ದಾರೆ. ಸೋಶಿಯಲ್‌ ಮೀಡಿಯಾಗಳಲ್ಲೂ ಸುದೀಪ್‌ ಅಭಿಮಾನಿಗಳು, ನಟ ನಟಿಯರಿಂದ ಶುಭಾಶಯಗಳ ಸುರಿಮಳೆಯೇ ಬಂದಿದೆ.

మరింత సమాచారం తెలుసుకోండి: