ತಿರುವನಂತಪುರ: ಟೀಂ ಇಂಡಿಯಾದ ನಾಯಕ ಮತ್ತು ಉಪ ನಾಯಕನ ನಡುವೆ ಇದೀಗ ಸ್ಪರ್ಧೆ ಯೊಂದು ನಡೆಯುತ್ತಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ದಾಖಲೆ ಮುರಿಯಲು ಕ್ಯಾಪ್ಟನ್ ವಿರಾಟ್ ಕೊಹ್ಲಿ ಗೆ ಇನ್ನು 3 ರನ್ ಅವಶ್ಯಕತೆಯಿದೆ. ಹೌದು, ಅದು ಯಾವ ದಾಖಲೆಯಂತ  ನೀವೆ ನೋಡಿ. 
 
ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರೋಹಿತ್ ದಾಖಲೆ ಮುರಿಯಲು ಕೊಹ್ಲಿಗಿನ್ನು ಕೇವಲ 3 ರನ್‌ಗಳ ಅವಶ್ಯಕತೆಯಿದೆ.ಹೈದರಾಬಾದ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಬ್ಯಾಟಿಂಗ್ ವೈಭವದ ನೆರವಿನೊಂದಿಗೆ ಟೀಮ್ ಇಂಡಿಯಾ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ಬಾರಿಸಿತ್ತು. ದಾಖಲೆಯ 208 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು ಇನ್ನು ಎಂಟು ಎಸೆತಗಳು ಬಾಕಿ ಉಳಿದಿರುವಂತೆಯೇ ನಾಲ್ಕು ವಿಕೆಟ್ ಅಂತರಕ್ಕೆ ಗುರಿ ತಲುಪಿತ್ತು. 50 ಎಸೆತಗಳನ್ನು ಎದುರಿಸಿದ ಕೊಹ್ಲಿ ತಲಾ ಆರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 94 ರನ್ ಗಳಿಸಿ ಅಜೇಯರಾಗುಳಿದರು. ಇನ್ನೊಂದೆಡೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರೋಹಿತ್ 10 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 8 ರನ್ ಗಳಿಸಿದ್ದರು.
 
102 ಪಂದ್ಯಗಳನ್ನು ಆಡಿರುವ (94 ಇನ್ನಿಂಗ್ಸ್) ರೋಹಿತ್ ಶರ್ಮಾ 31.83ರ ಸರಾಸರಿಯಲ್ಲಿ 2547 ರನ್ ಗಳಿಸಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿ 73 ಪಂದ್ಯಗಳಲ್ಲೇ (68 ಇನ್ನಿಂಗ್ಸ್) 51.91ರ ಸರಾಸರಿಯಲ್ಲಿ 2544 ರನ್ ಪೇರಿಸಿದ್ದಾರೆ. ಹಾಗೆಯೇ ರೋಹಿತ್ ರೋಹಿತ್ ಶರ್ಮಾ 137.45 ಮತ್ತು ವಿರಾಟ್ ಕೊಹ್ಲಿ 136.70ರ ಸ್ಟ್ರೇಕ್‌ರೇಟ್ ಕಾಯ್ದುಕೊಂಡಿರುವುದು ಇದೀಗ ಮುಂದಿನ ಪಂದ್ಯದಲ್ಲಿ 
ಸ್ಕೋರ್ ಅನ್ನು ಯಾರು ಲೀಡ್ ಮಾಡ್ತಾರೆ ಎಂಬುದು ಕುತೂಹಲ ಕೆರಳಿಸಿದೆ.  
 
ಒಂದು ದಾಖಲೆ ಬ್ರೇಕ್:- ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರೋಹಿತ್‌ರನ್ನು ವಿರಾಟ್ ಹಿಂದಿಕ್ಕಿದ್ದಾರೆ. ವಿಂಡೀಸ್ ಸರಣಿಗೂ ಮುನ್ನ ಇಬ್ಬರು ತಲಾ 22 ಬಾರಿ 50 ಪ್ಲಸ್ ರನ್ ಸಾಧನೆಯನ್ನು ಮಾಡಿದ್ದರು. ವಿರಾಟ್ 23 ಬಾರಿ 50+ ಸಿಡಿಸಿದ್ದಾರೆ.

మరింత సమాచారం తెలుసుకోండి: