ಬೆಂಗಳೂರು: ಮುಖ್ಯಮಂತ್ರಿ ಆದವರು ಪ್ರಧಾನಮಂತ್ರಿ ಗೆ ಸಮಾನ್ಯವಾಗಿ ಧನ್ಯವಾದಗಳು ಅರ್ಪಿಸುತ್ತಾರೆ. ಆದರೆ ಇಲ್ಲಿ ಮಾಜಿ ಪ್ರಧಾನ ಮಂತ್ರಿಯೇ  ಮುಖ್ಯಮಂತ್ರಿಗೆ ಥ್ಯಾಂಕ್ಸ್ ಹೇಳಿರುವ ಘಟನೆ ನಡೆದಿದೆ. ಏನಿದು ಸ್ಟೋರಿ ನೀವೆ ನೋಡಿ. 


ಉತ್ತರ ಕರ್ನಾಟಕದ ಯಾದಗಿರಿ ಜಿಲೆಯಲ್ಲಿ ಗುರುಮಿಟ್ಕಲ್ ಕ್ಷೇತ್ರದ ಜೆಡಿಎಸ್ ಮುಖಂಡನ ಮೇಲೆ ಹಲ್ಲೆ ಮಾಡಿದ್ದ ಸಬ್‍ಇನ್‍ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಂಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನುಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿ, ಸಬ್‍ಇನ್‍ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದೆ. ಕ್ರಮ ಕೈಗೊಳ್ಳದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿಯೂ ಹೇಳಿದ್ದೆ. ಈಗ ಅವರು ಕ್ರಮ ಕೈಗೊಂಡಿದ್ದಾರೆ ಎಂದರು.  ಗುರುಮಿಟ್ಕಲ್ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ನಮಗೆ ಜಯ ಸಿಕ್ಕಿದೆ ಎಂದು ಬೀಗುವುದು ಬೇಡ. ಕ್ಷೇತ್ರದಲ್ಲಿ ಶಾಂತಿ ಕಾಪಾಡಿಕೊಂಡು ಹೋಗಬೇಕು.


ಅಹಿತಕರ ಘಟನೆ ನಡೆಯದಂತೆ ಪಕ್ಷದ ಕಾರ್ಯಕರ್ತರು ಮುನ್ನೆಚ್ಚರಿಕೆ ವಹಿಸಬೇಕು. ಈಗ ಸಬ್‍ಇನ್‍ಸ್ಪೆಕ್ಟರ್ ಅವರಿಗೂ ತಮ್ಮ ತಪ್ಪಿನ ಅರಿವಾಗಿದೆ ಎಂದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ್ದಾರೆ ಎಂಬ ಆಡಿಯೋ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿದೆ. ಅನರ್ಹ ಶಾಸಕರ ಪ್ರಕರಣದ ತೀರ್ಪು ಕೊಡುವ ಹಂತದಲ್ಲಿ ಕೋರ್ಟ್ ಇದೆ. ಈ ಹಂತದಲ್ಲಿ ಆಡಿಯೋ ವಿಚಾರ ಪ್ರಸ್ತಾಪವಿದೆ. ಹೀಗಾಗಿ ಏನಾಗುತ್ತದೆ ಎಂಬುದನ್ನು ಹೇಳಲಾಗದು ಎಂದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತಮ್ಮ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. 


ಜೆ. ಡಿ. ಎಸ್ ಬಿಜೆಪಿ ದೋಸ್ತಿಯಾಗುತ್ತಾ  ಎಂಬ ಗೊಂದಲಗಳಿಗೆ ತೆರೆ ಎಳೆದರು. ಸಮಯ ಬಂದರೆ ಯಡಿಯೂರಪ್ಪ ಅವರೊಂದಿಗೆ ನೇರವಾಗಿ ಮಾತನಾಡುತ್ತೇನೆ. ಈಗ ಮಾತನಾಡಿದ್ದೇನೆ ಎಂಬುದರಲ್ಲಿ ಹುರುಳಿಲ್ಲ. ಅವರು ಈ ರಾಜ್ಯದ ಮುಖ್ಯಮಂತ್ರಿ ಅಲ್ಲವೆ.ನಾವೇನು ಅಜನ್ಮ ಶತ್ರುಗಳೇ ಎಂದು ಹೇಳಿದರು.  ಮುಖ್ಯಮಂತ್ರಿ ಜೊತೆ ಬೆಂಗಳೂರು ಬುಕ್‍ಹೌಸ್ ಕಾರ್ಯಕ್ರಮಕ್ಕೆ ಸ್ಥಳ ಕೊಡಿಸುವ ಸಂಬಂಧ ಮಾತನಾಡುವ ಪ್ರಯತ್ನ ಮಾಡಿದ್ದೆ. ಆದರೆ ಮುಖ್ಯಮಂತ್ರಿ ಸಿಗಲಿಲ್ಲ. ಅವರ ಅಧಿಕಾರಿ ಜೊತೆ ಮಾತನಾಡಿದ್ದೆಯಷ್ಟೇ ಎಂದರು.


మరింత సమాచారం తెలుసుకోండి: