ಐಎಂಎ ಜ್ಯುವೆಲರಿ ಹಗರಣದಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಹೆಸರು ಕೇಳಿ ಬಂದಿದೆ. ಹೀಗಾಗಿ ಈ ಕುರಿತು ರೋಷನ್ ಬೇಗ್ ಸುದ್ದಿ ಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದರು. ಹಾಗಾದರೆ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ್ದು ಏನು? ಇಲ್ಲಿದ ನೋಡಿ.
'ನನಗೂ ನನ್ನ ಕುಟುಂಬಕ್ಕೂ ಹಾಗೂ ನನ್ನ ಸಂಬಂಧಿಗಳಿಗೂ ಈ ಐಎಂಎ ಜ್ಯುವೆಲರಿ ಜೊತೆಗೆ ಯವುದೇ ಸಂಬಂಧ ಇಲ್ಲ. ಹಾಗೇನಾದರೂ ಇದ್ದರೆ ಸಾಕ್ಷ್ಯ ನೀಡಿ' ಎಂದು ರೋಷನ್ ಬೇಗ್ ಹೇಳಿದ್ದಾರೆ.
'ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್.ಐ.ಟಿ ಗೆ ಒಪ್ಪಿಸಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ಇನ್ನೂ ಉತ್ತಮ. ಮನ್ಸೂರ್ ಒಬ್ಬ ವಂಚಕ. ಆತ ನನಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿ ತಲೆ ಮರೆಸಿಕೊಂಡಿದ್ದಾನೆ. ಅವನು ಹಣ ನೀಡಿದ ಬಗ್ಗೆ ಸಾಕ್ಷ್ಯ ಇದ್ದರೆ ನೀಡಿ' ಎಂದರು.
ಮನ್ಸೂರ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಿರಿ. ಕಾಣೆಯಾಗುವ 48 ಗಂಟೆಗಳ ಮೊದಲು ಆತ ಯಾರನ್ನು ಸಂಪರ್ಕಿಸಿದ್ದಾನೆ. ಆತನಿಗೆ ಯಾರು ಸಹಾಯ ಮಾಡಿದ್ದಾರೆ. ಆತನಿಗೆ ಯಾರೆಲ್ಲ ಮೆಸೇಜ್ ಮಾಡಿದ್ದಾರೆ ಎಂದು ಮಾಹಿತಿ ಪಡೆಯಿರಿ ಆಗ ಎಲ್ಲವೂ ಗೊತ್ತಾಗುತ್ತೆ ಎಂದಿದ್ದಾರೆ.
click and follow Indiaherald WhatsApp channel