ಕೊರೋನಾ ವೈರಸ್ ನ ಕೂಪದಲ್ಲಿ ಬಿದ್ದು ನರಳಾಡುತ್ತಿರುವ ಭಾರತದಲ್ಲಿ ಕೊರೋನಾ ತಡೆಯುವ ಉದ್ದೇಶದಿಂದ ಲಾಕ್ ಡೌನ್ ಮಾಡಲಾಗಿತ್ತು. ಇದರ ಹಿನ್ನಲೆಯಲ್ಲಿ  ದೇಶದಲ್ಲಿ ಉಂಟಾದ ಆರ್ಥಿಕ ವ್ಯವಸ್ಥೆಯಲ್ಲಿನ ಭಾರೀ ಇಳಿಮುಖ ವಾಗಿದ್ದರಿಂ ಲಾಕ್ ಡೌನ್ ಅನ್ನು ತೆಗೆಯುವಂತಹ ನಿರ್ಧಾರವನ್ನು ಮಾಡಲಾಗಿತ್ತು. ಆದರೆ ಪ್ರಸ್ತುತವಾಗಿ ಲಾಕ್ ಡೌನ್ ತೆಗೆದಿರುವುದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿಸಿದೆ.ಈ ಕುರಿತು ಜೂನ್ 28ರಂದು ನಡೆಯಲಿರುವ ಮನ್ ಕಿ ಬಾತ್ ನಲ್ಲಿ ಮೋದಿ ಮಾತನಾಡಲು ಜನರಿಂದ ಸಲಹೆಗಳನ್ನು ಕೇಳಿದ್ದಾರೆ.  

 

ಹೌದು ಜೂನ್ 28 ರಂದು ನಡೆಯಲಿರುವ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ.'ಈ ತಿಂಗಳ ಮನ್​​ ಕಿ ಬಾತ್ ಕಾರ್ಯಕ್ರಮ 28 ರಂದು ನಡೆಯಲಿದೆ. ಇನ್ನು 2 ವಾರ ಕಾಲಾವಕಾಶವಿದೆ. ಜನ ಸಾಮಾನ್ಯರು ಆಲೋಚನೆಗಳನ್ನು ಹಂಚಿಕೊಳ್ಳಿ! ಇದರಿಂದ ನನಗೆ ಹೆಚ್ಚು ಅಂಶಗಳನ್ನು ವಿಸ್ತಾರವಾಗಿ, ಬಹಳಷ್ಟ ಜನರೊಂದಿಗೆ ಚರ್ಚಿಸಲು, ವಿವಿಧ ವಿಚಾರಧಾರೆಗಳನ್ನು ಹೊಂದಲು ಸಹಾಯ ವಾಗುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

 

 

'COVID-19 ವಿರುದ್ಧ ಹೋರಾಟ ಕುರಿತು ಚರ್ಚಿಸಲು ನಿಮ್ಮಲ್ಲಿ ಹಲವಾರು ವಿಚಾರಗಳಿಗೆ ಎಂಬುದು ನನಗೆ ಗೊತ್ತು' ಎಂದಿದ್ದಾರೆ. ಜನರು ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡಲು ಮೋದಿಯವರು ಒಂದು ಸಂಖ್ಯೆ ನೀಡಿದ್ದಾರೆ ಮತ್ತು ತಮ್ಮ ಸಲಹೆಗಳನ್ನು NaMo ಅಪ್ಲಿಕೇಶನ್ ಮತ್ತು MyGov ನಂತಹ ಇತರ ವೇದಿಕೆಗಳಲ್ಲಿ ಪೋಸ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ.
ಮೇ 31ರಂದು ನಡೆದ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ, ಕರೊನಾವೈರಸ್​​ಅನ್ನು ನಿರ್ಲಕ್ಷಿಸದೆ ರಕ್ಷಣಾತ್ಮಕ ಅಂಶಗಳನ್ನು ಅನುಸರಿಸಬೇಕು. ಮತ್ತು ಸಾಮಾಜಿಕ ದೂರ, ಮಾಸ್ಕ್ ಬಳಕೆ, ಆಗಾಗ ಕೈ ತೊಳೆಯುವಿಕೆಯಂತಹ ರಕ್ಷಣಾ ಪ್ರೋಟೋಕಾಲ್‌ಗಳಿಗೆ ಬದ್ಧರಾಗಿರಬೇಕು ಎಂದು ಜನರಿಗೆ ಸೂಚಿಸಿದ್ದರು.

 

 

ಕರೋನವೈರಸ್ ವಿರುದ್ಧ ಭಾರತದ ಹೋರಾಟವನ್ನು ಉಲ್ಲೇಖಿಸಿ, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ದೇಶ ಸಮರ್ಥವಾಗಿದೆ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದರು.

ಸಮಾಜದ ಪ್ರತಿಯೊಂದು ವರ್ಗವೂ ಕರೊನಾ ಭಾದೆಗೊಳಗಾಗಿದೆಯಾದರೂ ಬಡವರು ಅನುಭವಿಸುವ ನೋವನ್ನು ಪದಗಳಲ್ಲಿ ಅಳೆಯಲಾಗುವುದಿಲ್ಲ ಎಂದು ಅವರು ಹೇಳಿದರು.

 

 

ಅಗತ್ಯವಿರುವವರಿಗೆ ಸಹಾಯ ಮಾಡುವ ಸ್ವಯಂಸೇವಕರು ಮತ್ತು ಸಂಸ್ಥೆಗಳು ಮಾಡುತ್ತಿರುವ ಕಾರ್ಯಗಳನ್ನು ಹಾಗೂ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು ಸಾಂಕ್ರಾಮಿಕ ರೋಗದಿಂದ ಉಂಟಾಗುವ ತೊಂದರೆಗಳಿಂದ ಬಾಧಿತರಾಗದ ಯಾವುದೇ ವರ್ಗ ದೇಶದಲ್ಲಿ ಇಲ್ಲ ಎಂದು ಹೇಳಿದರು.


ಹಲವಾರು ಅಂತಾರಾಷ್ಟ್ರೀಯ ನಾಯಕರು ಆಯುರ್ವೇದ ಮತ್ತು ಯೋಗದ ಕುರಿತು ತಿಳಿದುಕೊಳ್ಳುವಲ್ಲಿ ಆಸಕ್ತರಾಗಿದ್ದಾರೆ ಎಂದ ಅವರು ಯೋಗದ ಪ್ರಯೋಜನಗಳನ್ನು ಪಡೆದುಕೊಳ್ಳಲು ಜನರಿಗೆ ಒತ್ತಾಯಿಸಿದರು. ಏತನ್ಮಧ್ಯೆ, ಒಂದೇ ದಿನದಲ್ಲಿ ಭಾರತದಲ್ಲಿ 11 ಸಾವಿರ ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಶನಿವಾರ 3,08,993 ಲಕ್ಷ ತಲುಪಿದೆ. ಅಮೆರಿಕ (20 ಲಕ್ಷಕ್ಕೂ ಹೆಚ್ಚು), ಬ್ರೆಜಿಲ್ (8.3 ಲಕ್ಷ) ಹಾಗೂ ರಷ್ಯಾ (5.2 ಲಕ್ಷ) ದ ನಂತರ ಭಾರತ ನಾಲ್ಕನೇ ಸ್ಥಾನದಲ್ಲಿದೆ.

 

మరింత సమాచారం తెలుసుకోండి: