ಕೊರೋನ ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸಿ ಸಾಕಷ್ಟು ಜನರನ್ನು ಪ್ರಾಣವನ್ನು ತಬಲಿತೆಗೆದುಕೊಂಡಿದ್ದು ಆಯಿತು ಸಾಕಷ್ಟು ಜನರು ಕೊರೋನಾ ವೈರಸ್ ನಿಂದಾಗಿ ನರಳುವಂತಹ ಯಾತನೆ ದೂರವಾಯ್ತು ಇನ್ನೇನಿದ್ದರೂ ಕೊರೋನಾದ ಕೊನೇ ಅಧ್ಯಾಯ ಶುರುವಾಗಿದೆ. ಇನ್ನೇನಿದ್ದರೂ ಕೂಡ ಕೊರೋನಾ ದಿಂದ ಮುಕ್ತಿಯನ್ನು ಹೊಂದುವಂತಹ ದಿನಗಳು ನಮ್ಮ ಎದುರು ನಿಂತಿದೆ. ಯಾಕೆ ಇವೆಲ್ಲಾ ಹೇಳುತ್ತಿದ್ದೇನೆಂದರೆ ಕೊರೋನಾ ವೈರಸ್ ಗೆ ಔಷಧಿ ಈಗಾಗಲೇ ಸಿದ್ದವಾಗಿದೆ. ಈ ಔಷಧಿ ಮಾರುಕಟ್ಟೆಗೆ ತರಲು ತಯಾರಿಯನ್ನು ಮಾಡಲಾಗುತ್ತಿದೆ.

ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊರೋನಾವೈರಸ್ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗವಾಗುವ ಹಂತದಲ್ಲಿದೆ. ಹೀಗಾಗಲೇ, ಎರಡು ಹಂತದ ಟ್ರಯಲ್​ಗಳು ನಡೆದಿವೆ. ಪ್ರಯೋಗ ಮಾಡಲಾದ ವ್ಯಕ್ತಿಗಳ ದೇಹ ಈ ಲಸಿಕೆಗೆ ಉತ್ತಮ ಸ್ಪಂದನೆ ನೀಡಿದೆ. ಯಾವುದೇ ಪ್ರಮುಖ ಅಡ್ಡಪರಿಣಾಮ ಉಂಟಾಗಿದ್ದು ಬೆಳಕಿಗೆ ಬಂದಿಲ್ಲ.

ಈ ಲಸಿಕೆಯು ಪ್ರಯೋಗವಾದ ವ್ಯಕ್ತಿಗಳ ದೇಹದಲ್ಲಿ ಪ್ರಬಲ ಪ್ರತಿಕಾಯ (Antibody) ಮತ್ತು ಟಿ ಸೆಲ್​ಗಳನ್ನ ಸೃಷ್ಟಿಯಾಗಿದೆ. ಲಸಿಕೆಯನ್ನು ಹಾಕಿದ 14 ದಿನದೊಳಗೆ ಟಿ ಸೆಲ್​ಗಳ ಸ್ಪಂದನೆಯಾಗಿದೆ. ಹಾಗೆಯೇ, 28 ದಿನದೊಳಗೆ ಪ್ರತಿಕಾಯ ಸ್ಪಂದನೆಯಾಗಿದೆ ಎಂದು ದಿ ಲ್ಯಾನ್ಸೆಟ್ ಎಂಬ ಜರ್ನಲ್​ನಲ್ಲಿ ವಿವರ ಪ್ರಕಟವಾಗಿದೆ. ಏನಿದು ಟಿ ಸೆಲ್?

ನಮ್ಮ ದೇಹಕ್ಕೆ ಸೋಂಕು ತಗುಲಿದಾಗ ರಚನೆಯಾಗುವ ಪ್ರತಿರೋಧಕ ಶಕ್ತಿಯ ಭಾಗವಾಗಿ ಟಿ ಸೆಲ್ ಮತ್ತು ಆಯಂಟಿಬಾಡಿ ಇವೆ. ಟಿ ಸೆಲ್ ಎಂಬುದು ಬಿಳಿ ರಕ್ತ ಕಣಗಳಾಗಿದ್ದು, ವೈರಸ್​ನಿಂದ ಸೋಂಕಿತವಾದ ಕೋಶಗಳನ್ನ ಇದು ನೇರವಾಗಿ ನಾಶ ಮಾಡುತ್ತದೆ.

Coronavirus Update: ಭಾರತದಲ್ಲಿ ಒಂದೇ ದಿನ 37 ಸಾವಿರ ಕೊರೋನಾ ಕೇಸ್​ ಪತ್ತೆ; 28 ಸಾವಿರ ದಾಟಿದ ಮೃತರ ಸಂಖ್ಯೆ ಈವರೆಗಿನ ಕ್ಲಿನಿಕಲ್ ಟ್ರಯಲ್​ನಲ್ಲಿ ಯಾವುದೇ ಋಣಾತ್ಮಕ ಸ್ಪಂದನೆ ಸಿಕ್ಕಿಲ್ಲ. ಪ್ರಯೋಗ ಮಾಡಲಾದ ಎಲ್ಲಾ ವ್ಯಕ್ತಿಗಳ ದೇಹದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಇನ್ನಷ್ಟು ತೀವ್ರ ತರದಲ್ಲಿ ಪ್ರಯೋಗಗಳನ್ನ ಮಾಡಲಾಗುವುದು ಎಂದು ಆಕ್ಸ್​ಫರ್ಡ್ ವಿವಿ ಹೇಳಿದೆ.

ಅಂದಹಾಗೆ, ಆಕ್ಸ್​ಫರ್ಡ್ ವಿವಿಯ ಈ ಲಸಿಕೆ ಸೇರಿದಂತೆ ವಿಶ್ವದೆಲ್ಲೆಡೆ 20ಕ್ಕೂ ಹೆಚ್ಚು ಲಸಿಕೆಗಳು ಮಾನವ ಪ್ರಯೋಗದ ಹಂತಗಳಲ್ಲಿವೆ. ಆಕ್ಸ್​ಫರ್ಡ್ ವಿಶ್ವ ವಿದ್ಯಾಲಯ ತಯಾರಿಸಿರುವ ಈ ವ್ಯಾಕ್ಸಿನ್ ಅನ್ನು ChAdOx1 nCoV-19 ಎಂದು ಹೆಸರಿಲಾಗಿದೆ. ಇದು ಚಿಂಪಾಂಜಿಗಳಲ್ಲಿ ನೆಗಡಿ ಸೃಷ್ಟಿಸುವ ವೈರಸ್​ನ ಮತ್ತೊಂದು ರೂಪವಾಗಿದೆ. ಮಾನವರಲ್ಲಿ ಇದು ವ್ಯಾಪಿಸದ ರೀತಿಯಲ್ಲಿ ಈ ವೈರಸ್ ಅನ್ನು ಜೆನಿಟಿಕ್ ಆಗಿ ತಿದ್ದು ಮಾರ್ಪಾಡು ಮಾಡಿ ವ್ಯಾಕ್ಸಿನ್​ಗೆ ಉಪಯೋಗಿಸಲಾಗಿದೆ. ಈ ವೈರಸನ್ನು ವ್ಯಾಕ್ಸಿನ್ ರೂಪದಲ್ಲಿ ಮಾನವರ ಮೇಲೆ ಪ್ರಯೋಗಿಸಿದಾಗ ಅದು ಯಾವುದೇ ಅಪಾಯ ಮಾಡುವ ಶಕ್ತಿ ಹೊಂದಿರುವುದಿಲ್ಲ. ಆದರೆ, ವ್ಯಕ್ತಿಯ ದೇಹದೊಳಗೆ ರೋಗ ಪ್ರತಿರೋಧಕ ಶಕ್ತಿ ಹೊರಹೊಮ್ಮುವಂತೆ ಮಾಡಬಲ್ಲುದು. ಮನುಷ್ಯರ ಮೇಲೆ ಇದರ ಪ್ರಯೋಗ ಆಗುವುದಕ್ಕೆ ಮೊದಲು ಮಂಗಗಳ ಮೇಲೆ ಪ್ರಯೋಗ ಮಾಡಲಾಗಿತ್ತು. ಇದರ ಪ್ರಯೋಗವಾದ ಮಂಗಗಳಿಗೆ ನ್ಯುಮೋನಿಯಾ ಸೋಂಕಿಗೆ ರಕ್ಷಾಕವಚವಾಗಿತ್ತು.

మరింత సమాచారం తెలుసుకోండి: