ಕೊರೋನಾ ವೈರಸ್ ಜಾಗತಿಕವಾಗಿ ಆಕ್ರಮಿಸಿ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿತಲ್ಲದೆ ,ಲಕ್ಷ ಲಕ್ಷ ಮಂದಿಯನ್ನು ನರಳುವಂತೆ ಮಾಡಿದೆ. ಈ ಕೊರೋನಾ ವೈರಸ್ ಅನ್ನು ಮೊದಲೆಯದಾಗಿ ತಡೆಯ ಬೇಕಾಗಿರುವ ಮೊದಲ ಅಸ್ತ್ರವೆಂದರೆ ಅದು ಮಾನವನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಈ ಶಕ್ತಿಯನ್ನು ಹೆಚ್ಚಿಸಿಕೊಂಡಾಗ ಮಾತ್ರ ಕೊರೋನಾ ವೈರಸ್ ಇಂದ ಯಶಸ್ಸನ್ನು ಸಾಧಿಸ ಬಹುದಾಗಿದೆ. ಆದರೆ ಭಾತರತದ ಜಮ್ಮು ಕಾಶ್ಮೀರ ಹಾಗೂ ಲಡಾಕ್ ನ ಜನರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೊರೋನಾ ವೈರಸ್ ಇವರನ್ನು ಹೆಚ್ಚಾಗಿ ಬಾಧಿಸುತ್ತದೆ ಎಂದು ವರದಿಯೊಂದು ತಿಳಿಸಿದೆ.

 

ಹೌದು  ಒಂದೆಡೆ ಭಯೋತ್ಪಾದನಾ ಕೃತ್ಯಗಳು, ಇನ್ನೊಂದೆಡೆ ಗಡಿ ವಿವಾದದ ಹಿನ್ನೆಲೆಯಲ್ಲಿ ಸದಾ ಯುದ್ಧದ ವಾತಾವರಣ. ಇದರ ಜತೆಗೆ ಈಗ ಕಾಶ್ಮೀರಿಗಳು ಅಗೋಚರವಾದ ಕರೊನಾ ವೈರಾಣು ಎಂಬ ಶತ್ರುವಿನೊಂದಿಗೂ ಬಡಿದಾಡುವ ಸ್ಥಿತಿ ಏರ್ಪಟ್ಟಿದೆ. ಈಗಾಗಲೆ ಜಾಗತಿಕವಾಗಿ ಲಕ್ಷಾಂತರ ಜನರನ್ನು ಬಾಧಿಸುತ್ತಾ, ಲಕ್ಷಾಂತರ ಜನರನ್ನು ಬಲಿ ಪಡೆದಿರುವ ಈ ಪಿಡುಗು ಬಂದ ವಕ್ಕರಿಸಿದರೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ನ ಶೇ.98 ಜನರನ್ನು ಬಾಧಿಸುವುದು ನಿಶ್ಚಿತವಂತೆ.

 

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ನಡೆಸಿರುವ ಸಮೀಕ್ಷೆಯ ಪ್ರಕಾರ ಕಾಶ್ಮೀರದ ಶೇ.98 ಜನರು ಕರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಕೇವಲ ಶೇ.2 ಜನರಲ್ಲಿ ಕರೊನಾ ಸೋಂಕು ನಿರೋಧಕ ಶಕ್ತಿ ಇದೆ ಎಂದು ಸಮೀಕ್ಷೆ ತಿಳಿಸಿದೆ.

 

ಸಾಮೂಹಿಕ ರೋಗನಿರೋಧಕ ಶಕ್ತಿ ಅಸಾಧ್ಯಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಐಸಿಎಂಆರ್​ ಮೇನಲ್ಲಿ 400 ಜನರ ರಕ್ತದ ಮಾದರಿ ಸಂಗ್ರಹಿಸಿ ಸೆರೋ ಸರ್ವಿಲೆನ್ಸ್​ ಅಧ್ಯಯನ ನಡೆಸಿತ್ತು. ಇದರ ಪ್ರಕಾರ ಇಲ್ಲಿನ ಶೇ.2 ಜನರಲ್ಲಿ ಅಂದರೆ 8 ಜನರ ದೇಹದಲ್ಲಿ ಮಾತ್ರ ಕರೊನಾ ವಿರುದ್ಧ ಹೋರಾಡುವ ರೋಗನಿರೋಧಕಗಳು ಪತ್ತೆಯಾದವು. ಪರೀಕ್ಷೆಗೆ ಒಳಪಟ್ಟವರ ದೇಹದಲ್ಲಿ ಕರೊನಾ ವಿರುದ್ಧ ಹೋರಾಡುವ ರೋಗನಿರೋಧಕಗಳು ಇವೆ ಎಂದರೆ, ಅವರು ಕೂಡ ಇತ್ತೀಚೆಗೆ ಸೋಂಕಿಗೆ ತುತ್ತಾಗಿದ್ದರೂ ತಮ್ಮ ದೇಹದಲ್ಲಿ ಬಿಡುಗಡೆಯಾದ ರೋಗನಿರೋಧಕಗಳಿಂದಾಗಿ ಬಾಧೆಯಿಂದ ಪಾರಾಗಿದ್ದಾರೆ ಎಂದರ್ಥ ಎಂದು ಕಾಶ್ಮೀರದ ವೈದ್ಯರ ಸಂಘದ ಅಧ್ಯಕ್ಷ ಡಾ. ನಿಸಾರ್​ ಉಲ್​ ಹಸನ್​ ವಿವರಿಸಿದ್ದಾರೆ.

 

ಇದನ್ನು ಗಮನಿಸಿದಾಗ ಕಾಶ್ಮೀರದ ಹೆಚ್ಚಿನ ಭಾಗದ ಜನರು ಕರೊನಾ ಸೋಂಕಿನಿಂದ ಪಾರಾಗುವ ಅವಕಾಶವನ್ನೇ ಹೊಂದಿಲ್ಲ. ಹೀಗಿರುವಾಗ ಸಾಮೂಹಿಕ ರೋಗನಿರೋಧಕ ಶಕ್ತಿ ಹೊಂದುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.

 

మరింత సమాచారం తెలుసుకోండి: