ಬೆಂಗಳೂರು ಭೂಗತ ಲೋಕದ ಮೊದಲ ಡಾನ್ ಎಂದೇ ಕರೆಯಲ್ಪಡುವ ಎಂಪಿ ಜಯರಾಜ್ ಕುರಿತು ತಯಾರಾಗಲಿರುವ ಸಿನಿಮಾದಲ್ಲಿ ಡಾಲಿ ಧನಂಜಯ್ ಮುಖ್ಯ ಪಾತ್ರ ನಿಭಾಯಿಸುತ್ತಾರೆ ಎಂಬ ಸುದ್ದಿ ಬಹಳ ಹಿಂದೆಯೇ ಕೇಳಿಬಂದಿತ್ತು. ಹೊಸ ನಿರ್ದೇಶಕ ಶೂನ್ಯ ಎಂಬುವವರು ಅದಕ್ಕೆ ನಿರ್ದೇಶನ ಮಾಡಲಿದ್ದಾರೆ. ಬಹಳ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಶೀರ್ಷಿಕೆ ಏನು ಎಂಬುದು ಇದುವರೆಗೂ ಗೊತ್ತಿರಲಿಲ್ಲ. ಈಗ ಅದು ಬಹಿರಂಗ ಆಗಿದೆ.
ಸ್ವಾತಂತ್ರೋತ್ಸವದ ಪ್ರಯುಕ್ತ ಡಾಲಿಯ ಹೊಸ ಸಿನಿಮಾ ಶೀರ್ಷಿಕೆಯನ್ನು ಘೋಷಣೆ ಮಾಡಲಾಗಿದೆ. ಅದನ್ನು ಅನೌನ್ಸ್ ಮಾಡಿರುವುದು 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್. ಭೂಗತ ಲೋಕದ ನೈಜ ಘಟನೆಗಳನ್ನು ಆಧರಿಸಿ ತಯಾರಾಗಲಿರುವ ಈ ಸಿನಿಮಾಗೆ '“ಹೆಡ್ ಬುಷ್ ಎಂದು ಟೈಟಲ್ ಇಡಲಾಗಿದೆ. ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಪುನೀತ್ ಇದನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಜಯರಾಜ್ ಪಾತ್ರಕ್ಕಾಗಿ ಧನಂಜಯ ಅವರು ಈಗಾಗಲೇ ಸಖತ್ ತಯಾರಿ ಮಾಡಿಕೊಂಡಿದ್ದಾರೆ. 'ಹೆಡ್ ಬುಷ್'ಗೆ ಅಶುಬೆದ್ರ ಬಂಡವಾಳ ಹೂಡಲಿದ್ದಾರೆ.
ಅಗ್ನಿ ಶ್ರೀಧರ್ ಬರೆದ 'ದಾದಾಗಿರಿಯ ದಿನಗಳು' ಕೃತಿ ಆಧರಿಸಿ 'ಹೆಡ್ ಬುಷ್' ತಯಾರಾಗಲಿದೆ. ವಿಶೇಷ ಏನೆಂದರೆ, ಕನ್ನಡ ಮಾತ್ರವಲ್ಲದೆ, ಹಲವು ಭಾಷೆಯಲ್ಲಿ ಚಿತ್ರ ಮೂಡಿಬರಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್ ಸೇರಿ ಒಟ್ಟು 6 ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬುದು ಪುನೀತ್ ಬಿಡುಗಡೆ ಮಾಡಿರುವ ಪೋಸ್ಟರ್ ಮೂಲಕ ಬಹಿರಂಗ ಆಗಿದೆ. ಅಲ್ಲದೆ, ಎರಡು ಪಾರ್ಟ್‌ಗಳಲ್ಲಿ ಚಿತ್ರ ತಯಾರಾಗಲಿದ್ದು ಮೊದಲ ಭಾಗಕ್ಕೆ 'VOL-1' ಎಂಬ ಅಡಿಬರಹ ಇದೆ. ಈ ಎರಡು ಹೊಸ ವಿಚಾರಗಳು ಈ ಟೈಟಲ್ ಪೋಸ್ಟರ್‌ನಿಂದ ಗೊತ್ತಾಗಿದೆ.
click and follow Indiaherald WhatsApp channel