ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ವಿವಾದ ಇಂದು ನಿನ್ನೆಯದಲ್ಲ. ಆದರೆ ಇದಕ್ಕೆ ಇದೀಗ ಫುಲ್ ಸ್ಟಾಪ್ ಬಿದ್ದಿದೆ. ಹೌದು. ಯಶ್ ಕುಟುಂಬ ಬಾಡಿಗೆ ಮನೆಯನ್ನು ಮಾಲೀಕರಿಗೆ ಒಪ್ಪಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ಯಶ್ ಬಾಡಿಗೆ ಮನೆ ವಿವಾದ ಕೊನೆಗೂ ಪರಿಹಾರ ಆಗಿದೆ. ಇಂದು ಯಶ್ ಕುಟುಂಬ ಬಾಡಿಗೆ ಮನೆಯನ್ನು ಖಾಲಿಮಾಡಿ ಅದನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಇವತ್ತು ಯಶ್ ಪರ ವಕೀಲರು ಕೋರ್ಟ್ ಆದೇಶದ ಪ್ರಕಾರ ಎರಡು ತಿಂಗಳು ಬಾಡಿಗೆ ಅಂದರೆ ೮೦೦೦೦ ಹಣದ ಡಿಡಿಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿ, ಮನೆ ಕೀಯನ್ನು ಮಾಲೀಕರಿಗೆ ನೀಡಿದ್ದಾರೆ. ಇಲ್ಲಿಗೆ ಬಹಳ ಕಾಲದಿಂದ ಇದ್ದ ಈ ವಿವಾದಕ್ಕೆ ಅಂತ್ಯ ದೊರಕಿದೆ.
click and follow Indiaherald WhatsApp channel