ಆಪರೇಶನ್ ಅಲಮೇಲಮ್ಮ ಚಿತ್ರದ ಮೂಲಕ ಸಿನಿ ಪ್ರೇಮಿಗಳಿಗೆ ಪರಿಚಯವಾದ ನಟ ರಿಷಿ. ಆ ನಂತರ ಕವಲು ದಾರಿ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದರು. ಈ ಚಿತ್ರವನ್ನು ಪುನೀತ್ ರಾಜಕುಮಾರ್ ನಿರ್ಮಾಣ ಮಾಡಿದ್ದರು. ಇದೀಗ ಎರಡು ಚಿತ್ರಗಳಲ್ಲಿ ರಿಷಿ ಬ್ಯುಸಿ.
ಮತ್ತೊಂದು ಹೊಸ ವಿಷ್ಯ ಏನಂದ್ರೆ, ಕೈಯಲ್ಲಿರೋ 'ರಾಮನ ಅವತರ' ಹಾಗೂ 'ಸಾರ್ವಜನಿಕರಲ್ಲಿ ವಿನಂತಿ' ಜೊತೆಗೆ ಮತ್ತೊಂದು ಚಿತ್ರವನ್ನು ರಿಷಿ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಹೆಸರು ಸಕಲಕಲಾವಲ್ಲಭ.
ಹೌದು, ಈ ಚಿತ್ರವನ್ನು ಜೇಕಬ್ ವರ್ಗೀಸ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಕೂಡ ಮನೋರಂಜನಾ ಸಿನಿಮಾ ಎನ್ನಲಾಗಿದೆ. ಜೇಕಬ್ ವರ್ಗೀಸ್ ಅವರು ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದರ ಕಥೆ ಯಾವುದೇ ಮಾಹಿತಿಯನ್ನು ಅವರು ಇನ್ನೂ ಬಿಟ್ಟು ಕೊಟ್ಟಿಲ್ಲ.
click and follow Indiaherald WhatsApp channel