ಪಾಕಿಸ್ತಾನದ ಮಾಧ್ಯಮ ಭಾರತವನ್ನು ಹೀಯಾಳಿಸುವಂತೆ ಜಾಹೀರಾತು ಪ್ರಸಾರ ಮಾಡಿತ್ತು. ವಿಂಗ್ ಕಮಾಂಡರ್ ಅವರನ್ನು ಹೋಲುವ ವ್ಯಕ್ತಿಯನ್ನು ಬಳಸಿಕೊಂಡು ಭಾರತವನ್ನು ಹೀಯಾಳಿಸುವ ರೀತಿಯಲ್ಲಿ ಜಾಹೀರಾತಿನಲ್ಲಿ ಬಿಂಭಿಸಲಾಗಿತ್ತು. ಇದೀಗ ಪಾಕ್ ಗೆ ನಟಿ ಪರೂಲ್ ಯಾದವ್ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
ಕಳೆದ ಸೋಮವಾರ ನಡೆದ ಕ್ರಿಕೆಟ್ ವರ್ಲ್ಡ್ ಕಪ್ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಇದಧ ಸಮಯದಲ್ಲಿ ನಟಿ ಪರೂಲ್ ಯಾದವ್ ಅವರು ಪಾಕಿಸ್ತಾನಕ್ಕೆ ಸರಿಯಾದ ಪಂಚ್ ನೀಡಿದ್ದಾರೆ.
ಭಾರತ ಪಂದ್ಯ ಗೆದ್ದಿದ್ದನ್ನು ಎಂಜಾಯ್ ಮಾಡಿದ ನಟಿ ಪರೂಲ್ ಯಾದವ್, 'ಟೀ ಕಪ್ ನೀವೇ ಇಟ್ಕೊಳ್ಳಿ, ನಾವು ವರ್ಲ್ಡ್ ಕಪ್ ಗೆಲ್ಲುತ್ತೇವೆ' ಎಂದು ಅಭಿನಂದನ್ ಅವರ ರೀತಿಯಲ್ಲಿ ಮೀಸೆ ಧರಿಸಿ ಅದೇ ಜಾಹೀರಾತಿನ ಮೂಲಕ ಪಾಕಿಸ್ತಾನದ ಕಾಲೆಳೆದಿದ್ದಾರೆ.
click and follow Indiaherald WhatsApp channel