ಪುನಿತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಖ್ಯಾತಿಯ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರ ಪುನಿತ್ ರಾಜ್ ಕುಮಾರ್ ಅವರ  ಅಭಿಮಾನಿಗಳು ತುಂಬಾ ಕುತೂಹಲದಿಂದ ಕಾಯುತ್ತಿದ್ದ ಸಿನಿಮಾ. ಕೊರೋನಾ ಕಾರಣದಿಂದಾಗಿ ಚಿತ್ರೀಕರಣವೆಲ್ಲವೂ ನಿಲ್ಲಿಸಿದ ಪ್ರಯುತ್ಕ ಯುವರತ್ನದ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ಚಿತ್ರ ತೆರೆಗೆ ಬರುವುದು ತಡವಾಗುವುದರಿಂದ ಚಿತ್ರದ ಹಾಡುಗಳನ್ನಾದರೂ ಕೂಡ ರಿಲೀಸ್ ಮಾಡುತ್ತೇವೆ ಎಂದು ಚಿತ್ರ ತಂಡ ಹೇಳಿತ್ತು ಆದರೆ ಈಗ ಅದೂ ಕೂಡ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ.

 

ಹೌದು ಯುವರತ್ನ. ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಡೆಡ್​ ಸಿನಿಮಾ. ಎಲ್ಲವೂ ಸರಿಯಿದ್ದಿದ್ರೆ, ಇಷ್ಟು ಹೊತ್ತಿಗೆ ಚಿತ್ರೀಕರಣ ಕಂಪ್ಲೀಟ್ ಆಗಿ, ಆಗಸ್ಟ್​ಗೆ ಸಿನಿಮಾ ತೆರೆಗೆ ಬರ್ಬೇಕಿತ್ತು. ಆದರೆ, ಈ ಕೊರೊನಾ ಮತ್ತು ಲಾಕ್​ಡೌನ್​ನಿಂದ ಎಲ್ಲವೂ ತಲೆಕೆಳಗಾಗಿ ಹೋಯ್ತು.

 

ಯುವರತ್ನ ಚಿತ್ರದ ಇನ್ನು 2 ಹಾಡಿನ ಚಿತ್ರೀಕರಣ ಬಾಕಿಯಿದೆ. ಶೂಟಿಂಗ್ ಕಂಪ್ಲೀಟ್ ಆಗಿ, ಪೋಸ್ಟ್ ಪ್ರೊಡಕ್ಷನ್ ಆಗಿ,ಥಿಯೇಟರ್​ಗಳು ಓಪನ್​ ಆಗಿ ಸಿನಿಮಾ ತೆರೆಗೆ ಬರೋದಕ್ಕೆ ಇನ್ನು ಬಹಳ ಸಮಯ ಬೇಕಾಗಿದೆ. ಅಲ್ಲಿವರೆಗೂ ಅಪ್ಪು ಫ್ಯಾನ್ಸ್​ ಯುವರತ್ನನ ಹಾಡುಗಳನ್ನ ಕೇಳಿ ಎಂಜಾಯ್​ ಮಾಡ್ಲಿ ಅಂತ ಪ್ಲಾನ್​ ಮಾಡಿತ್ತು ಚಿತ್ರತಂಡ. ಕೆಲ ದಿನಗಳ ಹಿಂದಷ್ಟೇ ಸದ್ಯದಲ್ಲೇ ಯುವರತ್ನನ ಗಾನಬಜಾನ ಶುರುವಾಗಲಿದೆ ಅಂತ ಸ್ವತಃ ನಿರ್ದೆಶಕ ಸಂತೋಷ್ ಆನಂದ್​ ರಾಮ್​ ಕೂಡ ಹೇಳಿದರು.

 

ಆದರೆ, ಇದೀಗ ಯುವರತ್ನ ಗಾನ ಬಜಾನಕ್ಕೂ ಕೊರೊನಾ ಕಾಟ ಶುರುವಾಗಿದೆ. ಚೆನ್ನೈ ಮತ್ತು ಹೈದ್ರಾಬಾದ್, ಮುಂಬೈನಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಈ ಮೂರು ನಗರಗಳು ಲಾಕ್​ಡೌನ್​ ಆಗಿವೆ. ಇತ್ತ ಯುವರತ್ನ ಸಂಗೀತ ನಿರ್ದೇಶಕ ​ ಎಸ್​ ತಮನ್​ ಕೂಡ ಚೆನ್ನೈನಲ್ಲಿ ಲಾಕ್​ ಆಗಿದ್ದು, ಯಾವುದೇ ರೀತಿಯ ಕೆಲಸ ಕಾರ್ಯಗಳನ್ನ ನಡೆಸೋಕ್ಕೆ ಅವಕಾಶ ಇಲ್ಲ ಹಾಗಾಗಿ ಯುವರತ್ನ ಹಾಡುಗಳು ರಿಲೀಸ್ ಆಗೋದು ಕೊಂಚ ತಡವಾಗ್ಲಿದೆ ಅಂತ ಸ್ವತಃ ನಿರ್ದೆಶಕ ಸಂತೋಷ್ ಆನಂದ್​ರಾಮ್​ ಟ್ವೀಟ್ ಮಾಡಿದ್ದಾರೆ.

 

ನಿರ್ದೆಶಕ ಸಂತೋಷ್​ ಆನಂದ್ ರಾಮ್​ ಟ್ವೀಟ್​ ಬೆನ್ನಲ್ಲೇ ಸಂಗೀತ ನಿರ್ದೆಶಕ ತಮನ್​ ಕೂಡ, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಶೇಷ ಅಂದ್ರೆ ಕನ್ನಡದಲ್ಲೇ ಟ್ವೀಟ್ ಮಾಡಿರೋ ಎಸ್​ ತಮನ್, ಎಲ್ಲರಿಗೂ ನಮಸ್ಕಾರ. ನಾನು ಚೆನ್ನೈ ಅಲ್ಲಿ ಲಾಕ್​ಡೌನ್​ನಲ್ಲಿ ಇರುವ ಕಾರಣ ಕೆಲಸಗಳು ನಡೆಯುತ್ತಿಲ್ಲ, ಹಾಡುಗಾರರು ಮತ್ತು ಸಂಗೀತಗಾರರು ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಕಾರಣ ಯುವರತ್ನ ಚಿತ್ರದ ಹಾಡುಗಳು ತಡವಾಗಲಿದೆ. ನಿಮಗೆ ಪವರ್ ಫುಲ್ ಆಲ್ಬಮ್ ಕೊಡುವ ಜವಾಬ್ದಾರಿ ನಮ್ಮದು. ದಯವಿಟ್ಟು ಅಭಿಮಾನಿಗಳು ಸಹಕರಿಸಿ"ಅಂತ ಬರೆದುಕೊಂಡಿದ್ದಾರೆ.

 

ಯುವರತ್ನ ಸಿನಿಮಾಗಾಗಿ ಕಾಯ್ತಿದ್ದ ಅಪ್ಪು ಫ್ಯಾನ್ಸ್​, ನಿರಾಸೆಯಾಗಿದೆ. ಸಿನಿಮಾ ರಿಲೀಸ್​ ಯಾವಾಗ ಗೊತ್ತಿಲ್ಲ. ಅಟ್ಲಿಸ್ಟ್ ಹಾಡುಗಳನ್ನಾದ್ರೂ ಕೇಳೋಣ ಅಂದ್ರೆ ಸದ್ಯಕ್ಕೆ ಆ ಅದೃಷ್ಟವೂ ಇಲ್ಲ. ಒಟ್ನಲ್ಲಿ ಕೊರೊನಾ ಹಾವಳಿಯಿಂದ ಇತ್ತ ಸಿನಿಮಾ ಶೂಟಿಂಗ್​ ಮಾಡೋದಕ್ಕೂ ಕಷ್ಟವಾಗಿದೆ. ಅತ್ತ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳಿಗೂ ಬ್ರೇಕ್​ ಬೀಳ್ತಿದೆ. ಒಂದು ವೇಳೆ ಸಿನಿಮಾ ತಯಾರಾದ್ರೂ ಥಿಯೇಟರ್​ಗಳು ಯಾವಾಗ ಓಪನ್​ ಆಗುತ್ತೆ ಅಂತ ಕಾಯ್ಬೇಕಿದೆ. ಥಿಯೇಟರ್​ಗಳು ಓಪನ್​ ಆದರೆ, ಸಿನಿಪ್ರಿಯರು ಥಿಯೇಟರ್​ಗೆ ಬರ್ತಾರಾ ಅನ್ನೋದು ಕೂಡ ಪ್ರಶ್ನೆಯಾಗಿದೆ.

 

మరింత సమాచారం తెలుసుకోండి: