ನವದೆಹಲಿ: 2019ರ ಕ್ರಿಕೇಟ್ ವಿಶ್ವಕಪ್ ಸೋಲಿಗೆ ಅನುಷ್ಕಾವೂ ಪರೋಕ್ಷವಾಗಿ ಕಾರಣ ಎಂದ ಫಾರೂಕ್ ಭಾರೀ ಟ್ರೋಲ್ ಆಗಿದ್ದರು. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಭಾರತ ತಂಡದ ಮಾಜಿ ಕ್ರಿಕೆಟರ್ ಫಾರೂಖ್ ಇಂಜಿನಿಯರ್ ತಮ್ಮ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.


ವಿಶ್ವಕಪ್ ಟೂರ್ನಿಯಲ್ಲಿ ಭಾರತ ಬಹುತೇಕ ಪಂದ್ಯಗಳನ್ನು ಗೆದ್ದು ಬೀಗಿತ್ತು.  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯ ಅನುಷ್ಕಾ ಶರ್ಮಾ ಅವರಿಗೆ ಟೀ ತಂದುಕೊಟ್ಟಿದ್ದು ನಿಜ. ಆದರೆ ಅನುಷ್ಕಾರನ್ನು ನೋಯಿಸಲು ಉದ್ದೇಶ ಪೂರ್ವಕವಾಗಿ ಹಾಗೆ ಮಾತನಾಡಿಲ್ಲ ಎಂದು ಫಾರೂಖ್ ಇಂಜಿನಿಯರ್ ಇದೀಗ ಎರಡು ಮಾತುಗಳನ್ನಾಡಿದ್ದಾರೆ. ಇದಕ್ಕು ಮುಂಚೆ ಅನುಷ್ಕಾ ಶರ್ಮಾ ಖಡಕ್ ಆಗಿ ಈ ವಿಚಾರವಾಗಿ ಟ್ವೀಟ್ ಮಾಡಿದ್ದರು.

ಬಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶರ್ಮಾ ಅವರು ಪ್ರೀತಿಯ ಹುಡುಗಿ. ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಉತ್ತಮ ನಾಯಕ ಹಾಗೂ ರವಿಶಾಸ್ತ್ರಿ ಕೂಡ ಅತ್ಯುತ್ತಮ ಕೋಚ್ ಆಗಿದ್ದಾರೆ. ಈ ಪ್ರಕರಣವನ್ನು ಇಲ್ಲೆ ಬಿಟ್ಟು ಬಿಡೋಣ ಎಂದು ಫಾರೂಖ್ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಫಾರೂಖ್ ಅವರು,ಭಾರತ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿದ್ದರು.

ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ನೇತೃತ್ವದ ಸಮಿತಿಯನ್ನು `ಮಿಕ್ಕಿ ಮೌಸ್ ಸೆಲೆಕ್ಷನ್ ಕಮಿಟಿ` ಎಂದು ಹೀಯಾಳಿಸಿದ್ದರು. ಇದೇ ವೇಳೆ ವಿವಾತಾತ್ಮಕ ಹೇಳಿಕೆಯೊಂದನ್ನು ನೀಡಿ ಭಾರೀ ಟೀಕೆಗೆ ಈ ಹಿಂದೆ ಗುರಿಯಾಗಿದ್ದರು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ 2019ರವಿಶ್ವಕಪ್ ವೇಳೆ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಟೀ ಸರ್ವ್ ಮಾಡಿದ್ದನ್ನು ನಾನು ನೋಡಿದ್ದೆ. ಸೂಟ್ ಧರಿಸಿದ್ದ ಟೀ ತಂದುಕೊಟ್ಟ ವ್ಯಕ್ತಿ ಯಾರೆಂದು ಕೇಳಿದ್ದೆ. ಆಗ ಆ ವ್ಯಕ್ತಿ ಆಯ್ಕೆ ಸಮಿತಿಯಲ್ಲಿ ಇರುವ ಓರ್ವ ವ್ಯಕ್ತಿ ಎನ್ನುವ ವಿಚಾರ ತಿಳಿಯಿತು ಎಂದು ವಿವಾದಾತ್ಮಕವಾಗಿ ಹೇಳಿದ್ದರು.


మరింత సమాచారం తెలుసుకోండి: