ವೇಣುಗೋಪಾಲ್ ಅವರಿಗೆ ಬಫೂನ್ ಎಂದು, ಸಿದ್ದರಾಮಯ್ಯ ಅವರಿಗೆ ಅಹಂಕಾರಿ ಎಂದು, ದಿನೇಶ್ ಗುಂಡೂರಾವ್ ಅವರಿಗೆ ಫ್ಲಾಪ್ ಅಧ್ಯಕ್ಷರೆಂದು ಕರೆದ ರೋಷನ್ ಬೇಗ ಇದೀಗ ಸಿದ್ದು ಪಾಳೆಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರೋಚನ್ ಬೇಗ ಹೇಳಿ ತೀವ್ರ ಸಂಚಲನವನ್ನು ಸೃಷ್ಟಿಸಿದೆ.
ಅಲ್ಲದೇ ರೋಚನ್ ಬೇಗ ಅವರಿಗೆ ಇದೀಗ ಶೋಕಾಸ್ ನೋಟಿಸ್ ನೀಡಿದ್ದು, ಅವರ ಹೇಳಿಕೆ ಬಗ್ಗೆ ವಿವರಣೆ ನೀಡುಂತೆ ಕೇಳಲಾಗಿದೆ. ಜೊತೆಗೆ ಕಾಂಗ್ರೆಸ್ನ ಪ್ರಮುಖ ನಾಯಕರ ರೋಷನ್ ಬೇಗ ವಿರುದ್ಧ ಕಿಡಿಕಾರಿದ್ದಾರೆ. ರೋಷನ್ ಬೇಗ್ ಅವರ ಮಾತಿಗೆ ದಿನೇಶ್ ಗುಂಡೂರಾವ್ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕೋಳಿನೇ ಹುಟ್ಟದೇ, ಕಬಾಬ್ ಮಾಡಲು ಹೊರಟಿದ್ದಾರೆ ರೋಶನ್ ಬೇಗ್. ಅಲ್ಲದೇ ಚುನಾವಣೋತ್ತರ ಸಮೀಕ್ಷೆ ಬಗ್ಗೆಯೇ ಇಷ್ಟೊಂದು ಆತುರ ಪಡುತ್ತಿರುವುದು ಸಮಂಜಸವಲ್ಲ. ಒಟ್ಟಾರೆ ಮೇ 23ರಂದು ಪ್ರಕಟವಾಗುವ ಲೋಕಸಭಾ ಚುನಾವಣೆಯ ಫಲಿತಾಂಶವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದಿದ್ದಾರೆ. ಇದರ ಜೊತೆಗೆ ತಪ್ಪು ಮಾಡಿದವರ ವಿರುದ್ಧ ಕಾಂಗ್ರೆಸ್ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
click and follow Indiaherald WhatsApp channel