ಈಗಾಗಲೇ ಕಿಸ್ಸಿಂಗ್ ಸ್ಪಾಟ್ ಆಗಿರುವ ಬಿಗ್ ಬಾಸ್ ಮನೆಯಲ್ಲಿ ಇದೀಗ  ಎರಡು ಲವ್ ಸ್ಟೋರಿ. ಹೌದು, ಡ್ಯಾನ್ಸರ್ ಕಿಶನ್ ಗಿಂತ ಒಂದು ಹೆಜ್ಜೆ ಮುಂದಿಟ್ಟರೋ ಶೈನ್ ಶೆಟ್ಟಿ.  ಕೊಟ್ಟೂರು ಮನೆಗೆ ವಾಪಸ್ ಬಂದ ಮೇಲೆ ಪರಿಸ್ಥಿತಿಗಳೆ ಬದಲಾಗಿದೆ. ಎಲ್ಲವೂ ದೈವಿಚ್ಛೆ ಎಂಬ ಡೈಲಾಗ್ ನಿಂದಲೇ ಫೇಮಸ್ ಆಗಿರುವ ಚೈತ್ರಾ ಹೊಸ ಆಟ ಶುರುಮಾಡಿದ್ದಾರೆ. ಇದನ್ನು ಕೇಳಿದ್ರೆ ನಿಜನಾ ಎಂದು ನಿಮಗೂ ಶಾಕ್ ಆಗಬಹುದು. 
 
ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸಿಕ್ರೇಟ್ ಟಾಸ್ಕ್ ನೀಡಿದ್ದ ಕಾರಣಕ್ಕೆ ದೀಪಿಕಾ ದಾಸ್  ಅಂತೂ ಇಂತೂ  ಬಿಗ್ ಬಾಸ್ ಮನೆಯಲ್ಲಿ 45 ದಿನಗಳಿಂದ, ಏಳು ತಿಂಗಳಿನಿಂದ ಕಾಪಾಡಿಕೊಂಡು ಬಂದಿದ್ದ ಗಡ್ಡವನ್ನು ತೆಗೆದಿದ್ದಾರೆ. ಮನೆಗೆ ಏನೋ ಒಂದಿಷ್ಟು ಅಂಕಗಳು ಬಂದಿವೆ.  ಆದರೆ ಹೊಸ ಹೊಸ ಪ್ರೇಮ ಕತೆಗಳು ಹುಟ್ಟಿಕೊಂಡಿವೆ. ಶೈನ್  ಶೆಟ್ಟಿ ಎಲ್ಲ ಟಾಸ್ಕ್ ಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಕಿಚ್ಚ ಸುದೀಪ್ ಸಹ ಎರಡು ವಾರದ ಚಪ್ಪಾಳೆಯನ್ನು ನೀಡಿದ್ದಾರೆ. ಈ ನಡುವೆ ಗಡ್ಡ ತೆಗೆದ ಕತೆ ದೀಪಿಕಾ ಮತ್ತು ಶೈನ್ ನಡುವೆ ಕುಚ್ ಕುಚ್ ಹೋತಾ ಹೈ ಎಂಬ ಸ್ಥಿತಿಯನ್ನು ತಂದಿದೆ. ಮನೆಯಲ್ಲಿ ಲಕ್ಷುರಿ ಟಾಸ್ಕ್ ಗಾಗಿ ಎರಡು ತಂಡಗಳನ್ನು ಮಾಡಿದ್ದು ಶೈನ್ ಮತ್ತು ದೀಪಿಕಾ ಒಂದೇ ತಂಡದಲ್ಲಿ ಇದ್ದಾರೆ.  ಒಗ್ಗಟ್ಟಿನ ಬಾಕ್ಸ್ ಟಾಸ್ಕ್ ನಲ್ಲಿ ಕೊನೆಯವರೆಗೂ ಪೆಟ್ಟಿಗೆಗಳನ್ನು ಹಿಡಿದೇ ನಿಂತಿದ್ದಾರೆ. ಆದರೆ ಅದರಲ್ಲಿ ಏನಾಗುತ್ತಿದೆ ಎಂಬುದು ಕುತೂಹಲಕಾರಿಯಾಗಿದೆ. 
 
ಬಿಗ್ ಬಾಸ್ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವಾಗ ಒಂದೇ ಕಡೆ ನಿಂತಿದ್ದ ಶೈನ್, ದೀಪಿಕಾ ಮತ್ತು ವಾಸುಕಿ ವೈಭವ್ ಮಾತನಾಡುತ್ತಿದ್ದ ರೀತಿ ನೋಡಿ ಇತ್ತ ದೂರಲ್ಲಿ ಕುಳಿತಿದ್ದ ಚೈತ್ರಾ ಅದು ಹೇಗೆ ಜೊಲ್ಲು ಸುರಿಸುತ್ತಾರೆ ನೋಡಿ, ಏನೂ ವರ್ಕ್ ಔಟ್ ಆಗಲ್ಲ ಎಂದು ರಾಜು ತಾಳಿಕೋಟೆ ಬಳಿಕ ಹೇಳಿಕೊಂಡರು. ಒಟ್ಟಿನಲ್ಲಿ ಗೊತ್ತೋ ಗೊತ್ತಿಲ್ಲದೇ ಶೈನ್ ಮತ್ತು ದೀಪಿಕಾ ನಡುವೆ ಒಂದು ಕೆಮೆಸ್ಟ್ರಿ ಶುರುವಾಗಿದೆ. ಈ ಕೆಮಿಸ್ಟ್ರಿ ಎಲ್ಲಿಯವರೆಗೂ ಸಾಗುತ್ತೆ ಕಾದುನೋಡಬೇಕಾಗಿದೆ. 

మరింత సమాచారం తెలుసుకోండి: