ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯ ತಂತ್ರಗಳ ವೈಫಲ್ಯಗಳ ಬಗ್ಗೆ ಮಾತನಾಡಿದ್ದ ರೋಷನ್ ಬೇಗ್ ಅವರು ನೀಡಿದ್ದ ಹೇಳಿಕೆಗಳು ಇದೀಗ ದುಬಾರಿ ಆಗೋ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಬೇಗ್ ವಿರುದ್ಧ ದೂರು ನೀಡಿದ್ದಾರೆ.
ಹೌದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರೋಷನ್ ಬೇಗ್ ವಿರುದ್ಧ ಎಐಸಿಸಿಗೆ ವರದಿ ಸಲ್ಲಿಸಿದ್ದಾರೆ. ರೋಷನ್ ಬೇಗ್ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಲು ಕೇಳಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬೇಗ್ ಮೋದಿಯವರನ್ನು ಹೊಗಳೋಕೆ ಶುರು ಮಾಡಿದರು. ನಂತರ ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್ ವಿರುದ್ಧವೂ ಕಿಡಿ ಕಾರಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ವರದಿ ಸಲ್ಲಿಸಲಾಯಿತು.
click and follow Indiaherald WhatsApp channel