ಬೆಂಗಳೂರು: ರಾಜ್ಯಾದ್ಯಂತ ಇದೀಗ ಜಂಟಲ್ ಮ್ಯಾನ್ ಹವಾ ಶುರುವಾಗಿದೆ. ಹೌದು, ಜಂಟಲ್ ಮನ್. ಶುರುವಿನಿಂದ ತನ್ನದೆ ಕಂಟೆಂಟ್ ಮೂಲಕ ಸದ್ದು ಗದ್ದಲ್ಲ ಮಾಡುತ್ತ ಬಂದಿರುವ ಸಿನಿಮಾ. ಏನೋ ಮಾಡಿರ್ತಾರೆ ಎಂದು ಗೊಣಗುತ್ತ ಥಿಯೇಟರ್ ​​ನೊಳಗೆ ಬಲಗಾಲಿಡೋರಿಗೆ ಅಚ್ಚರಿ ಆಶ್ಚರ್ಯ ಮೂಡಿಸೋ ಸಿನಿಮಾ ಜಂಟಲ್​ ಮನ್. ಅಷ್ಟಕ್ಕೂ ಮೆಡಿಕಲ್ ಮಾಫಿಯಾಗೂ ಜಂಟಲ್ ಮ್ಯಾನ್ ಗೂ ಏನ್ ಸಂಬಂಧ ಅಂತೀರಾ! ಇಲ್ಲಿದೆ ನೋಡಿ ಉತ್ತರ. 
 
 ಈ ಚಿತ್ರದ ನಿರ್ದೇಶಕ ಜಡೇಶ್ ಕುಮಾರ್ ಅದ್ಭುತವಾಗಿಯೇ  ಕಥೆಯನ್ನು ಎಣೆದಿದ್ದಾರೆ. ಹೌದು, 18 ಗಂಟೆ ನಿದ್ಧೆ ಮಾಡೋ ನಾಯಕ. ಉಳಿದ ಆರು ಗಂಟೆ ಅದ್ಭುತವಾಗಿ ಕೆಲಸ ಮಾಡಿ ಬ್ರಿಲಿಯೆಂಟ್​. ಅಣ್ಣ ಅತ್ತಿಗೆ ಮತ್ತು ಅಣ್ಣನ ಮಗಳ ನೆಚ್ಚಿನ ಚಿಕ್ಕಪ್ಪ ನಾಗಿ ಮನ ಗೆಲ್ಲುತ್ತಾ , ಆಕಾಸ್ಮಿಕವಾಗಿ ಸಿಗೋ ಡೈಟಿಷಿಯನ್ ಡಾಕ್ಟರ್​ಗೆ ಕಾಳ್ ಹಾಕುತ್ತಾ , ಅವಳ ಮನ ಗೆದ್ದು ಶತ್ರುಗಳನ್ನು ಸದೇ ಬಡೇಯುತ್ತಾ ಸಾಗೋ ನಾಯಕ. ಇವುಗಳ ಮಧ್ಯ ಕುಂಬಕರ್ಣ ನಿದ್ರೆ ಜೊತೆಗೆ ಮೆಡಿಕಲ್ ಮಾಫಿಯಾ ಹೋರಾಟ , ಆ ಹೋರಾಟಕ್ಕೆ ಅವನ ಫ್ಯಾಮಿಲಿಯೇ ಕಾರಣ. ಅದು ಹೇಗೆ , ಯಾಕೆ ಮತ್ತು ಏನ್ ಅಸಲಿ ಕಥೆ ತಿಳಿಯೋಕೆ ನೀವು ಒಮ್ಮೆ ಥಿಯೇಟರ್ ಗೆ ಹೋಗಿಬಂದುಬಿಡಿ. 
 
ಟೈಮ್ ಟೂ ಟೈಮ್ ಟ್ವಿಸ್ಟ್ ಆಂಡ್ ಟರ್ನ್. ವಂಡರ್​​ಫುಲ್ ಮ್ಯೂಸಿಕ್ , ಖಡಕ್ ಡೈಲಾಗ್ಸ್ , ರಗಡ್ ಫೈಟ್ಸ್​ , ಲವ್ , ಸೆಂಟಿಮೆಂಟ್ಸ್​ ಈಗೆ ಎಲ್ಲವೂ ಅದ್ಭುತವಾಗಿದೆ. ಇನ್ನು ಪಾತ್ರವರ್ಗದಲ್ಲಿ ನಾಯಕಿ ನಿಶ್ವಿಕಾ , ಬೇಬಿ ಆರಾದ್ಯ ಎನ್ ಚಂದ್ರ , ಸಂಚಾರಿ ವಿಜಯ್, ಮಿಸ್ಟರ್ ಅರ್ಜುನ್, ಭರತ್ ಕಲ್ಯಾಣ್ ಹಾಗೂ ಪ್ರಶಾಂತ್ ಸಿದ್ದಿ , ಮುಂತಾದವರು ಅದ್ಭುತವಾಗಿ ನಟಿಸಿದ್ದಾರೆ. ಜಂಟಲ್ ಮನ್ ಪಾತ್ರವರ್ಗ ಎಂದಾಗಿ ಪ್ರಜ್ವಲ್ ದೇವರಾಜ್ ನಟನೆಯ ಬಗ್ಗೆ ಒನ್ ಲೈನ್ ಜಾಸ್ತಿ ಹೇಳಬೇಕು. ಸಖತ್ ಅದ್ಭುತವಾಗಿ ಅಮೋಘ ನಟನೆಯನ್ನು ಬೀರಿದ್ದಾರೆ ಪ್ರಜ್ವಲ್ ದೇವರಾಜ್. ಹಾಡುಗಳನ್ನು ಕೊಂಚ ಕತ್ತರಿಸಿಬಹುದಿತ್ತು. ಅಷ್ಟುಬಿಟ್ಚರೆ ಉಳಿದಿದ್ದೆಲ್ಲಾ ಸೂಪರ್.

మరింత సమాచారం తెలుసుకోండి: