ರಾಜ್ಯವನ್ನು ಕೊರೋನಾ ಭಾಧಿಸುತ್ತಿರುವ ಹೊತ್ತಿನಲ್ಲಿ  ರಾಜ್ಯದಲ್ಲಿ ಮಳೆ ಹೆಚ್ಚಾಗಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳು ಕೋವಿಡ್ ನಿಂದಾಗಿ ಆಸ್ಪತ್ರೆಗೆ  ದಾಖಲಾಗಿದ್ದಾರೆ. ಈಗ ಈ ಎಲ್ಲಾ ಜವಾಬ್ದಾರಿಗಳು ಮಾನ್ಯ ಉಪಮುಖ್ಯಮಂತ್ರಿಗಳ ಎಗಲ ಮೇಲೆ ಬಿದ್ದಿದೆ. ಈ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಡಾ. ಅಶ್ವತ್ ನಾರಾಯಣ್  ಮಳೆ ಪ್ರವಾಹದ ಕುರಿತು ಸರ್ಕಾರ  ಕೈಗೊಂಡಿರುವ ಕ್ರಮದ ಕುರಿತು ಏನು ಹೇಳಿದ್ದಾರೆ ಗೊತ್ತಾ?




ಈ ಬಾರಿ ಮಳೆ ಅನಾಹುತ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಭೀತಿ ಇರೋ ಕಡೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತದೆ.  ಮಾಡಲಾಗಿದೆ ನೆರೆ ನಿರ್ವಹಣೆ, ಜನರ ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ. ಅಗತ್ಯವಿರುವಷ್ಟು ಹಣ ಬಿಡುಗಡೆ. ಕೇಂದ್ರದಿಂದಲೂ ಸಹಕಾರ ಸಿಗುತ್ತಿದೆ. ಪ್ರಕೃತಿ ವಿಕೋಪಗಳ ವೇಳೆ ಸಿಗಬೇಕಾದ ಅನುದಾನ ಸಿಗುತ್ತದೆ. ಕೇಂದ್ರ ಪ್ರಕೃತಿ ವಿಕೋಪ ಬಂದಾಗಲೆಲ್ಲ ನೆರವು ಕೊಟ್ಟಿದೆ ಎಂದು ಹೇಳಿದರು. ಸರ್ಕಾರ ನೆರೆ ನಿರ್ವಹಣೆಯಲ್ಲಿ ವಿಫಲವೆಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಹಿಂದೆ ಕೂಡ ನೆರೆ ಬಂದಿತ್ತು. ಆಗಲೂ ನಮ್ಮ ಸರ್ಕಾರ ಎಲ್ಲ ಪರಿಹಾರ ನೆರವೇರಿಸಿತ್ತು.




ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನಿಜಲಿಂಗಪ್ಪ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದರು. ಎಂದು ಉಪ ಮುಖ್ಯಮಂತ್ರಡಾ.ಅಶ್ವತ್ಥನಾರಾಯಣ ತಿಳಿಸಿದರು. 


ಪ್ರಕೃತಿ ವಿಕೋಪ ಹೇಳಿ ಕೇಳಿ ಬರಲ್ಲ. ಈಗಾಗಲೇ ಕೆಲವು ಕಡೆ ಪ್ರವಾಹ ಬರುತ್ತಿದೆ. ಜನರ ಕಷ್ಟದ ಬಗ್ಗೆ ಅವರು ಸಲಹೆ ಕೊಡಬೇಕು ಎಂದರು.ಸರ್ಕಾರವನ್ನು ಡಮ್ಮಿಮಾಡುವಂತಹ ಪ್ರಯತ್ನ ಅಷ್ಟೇ. ಅದಕ್ಕೆ ಅವರು ಆರೋಪಗಳನ್ನು ಮಾಡುತ್ತಿದ್ದಾರೆ. ಸಚಿವರು ಜಿಲ್ಲಾಗಳಿಗೆ ಹೋಗ್ತಿಲ್ಲವೆನ್ನುವುದು ಸರಿಯಲ್ಲ. ಜನರ ಮಧ್ಯೆಯೇ ಇದ್ದು ನಮ್ಮ ಸಚಿವರು ಕೆಲಸ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಚರ್ಚೆ ಮಾಡಬೇಕೆಂದರೆ, ಕಾಂಗ್ರೆಸ್ ನಾಯಕರು ಅವೇಶನದಲ್ಲಿ ಚರ್ಚೆ ಮಾಡಲಿ. ಕಾಂಗ್ರೆಸ್ ನಾಯಕರ ವಿರುದ್ಧ ಡಿಸಿಎಂ ಅಶ್ವಥ ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.




ಕಾನೂನಾತ್ಮಕ ಕ್ರಮ: ಕೋವಿಡ್ ನಿರ್ವಹಣಾ ಕಾರ್ಯಕ್ಕೆ ಬರದೇ ಇರೋ ನೌಕರರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಕೊರೋನಾಗೆ ಭಯ ಪಟ್ಟು ಕೆಲವರು ಬರುತ್ತಿಲ್ಲ. ಅಂಥೋರಿಗೆಲ್ಲ ನೊಟೀಸ್ ಕೊಡಲಾಗಿದೆ ನೊಟೀಸ್‍ಗೆ ಏನು ಉತ್ತರ ಕೊಡುತ್ತಾರೆ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ಕೊರೋನಾ ನಿರ್ವಹಣೆ ಕರ್ತವ್ಯ ಮಾಡದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತೇವೆ . ಕೊರೋನಾಗೆ ಭಯ ಪಡುವ ಅಗತ್ಯ ಇಲ್ಲ.ವೈರಸ್‍ಗೆ ಆತಂಕ ಬೇಕಾಗಿಲ್ಲ ಎಂದರು  




ಕೆಲ ಕೊರೋನಾ ವಾರಿಯರ್ಸ್ ಭಯದಿಂದ ಬರುತ್ತಿಲ್ಲ. ಅವರು ಕರ್ತವ್ಯದಿಂದ ದೂರ ಹೋದರೆ ಖಂಡಿತಾ ಕ್ರಮ ತೆಗೆದುಕೊಳ್ಳುತೇವೆ ಎಂದು ಹೇಳಿದರು. ಕನ್ನಡವನ್ನು ಸಧೃಡಗೊಳಿಸಿದವರು ನಿಜಲಿಂಗಪ್ಪ. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದವರು. ನೀರಾವರಿ, ರಾಜ್ಯದ ಸಮಗ್ರ ಸುಧಾರಣೆಯನ್ನ ಮಾಡಿದವರು. ಸಂವಿಧಾನ ರಚನಾ ಸಮಿತಿಯಲ್ಲಿಯೂ ಇದ್ದವರು. ಗಾಂೀಜಿಯವರ ಜೊತೆ ಓಡಾಡಿದ್ದವರು. ಅವರ ಪುಣ್ಯತಿಥಿ ಅಂಗವಾಗಿ ಮಾಲಾರ್ಪಣೆ ಮಾಡಿದ್ದೇವೆ ಎಂದರು.

మరింత సమాచారం తెలుసుకోండి: