ಇಡೀ ವಿಶ್ವದ ನಿದ್ದೆಯನ್ನು ಹಾಳುಮಾಡಿರುವ, ಸದಾ ಆತಂಕವನ್ನು ಹುಟ್ಟಿಸಿರುವ ಅನೇಕರನ್ನು ನರಳ ನರಳಿ ಸಾಯುವಂತೆ ಮಾಡಿರುವ, ಹಲವರನ್ನು ನಿರ್ಗತಿಕರನ್ನಾಗಿ ಮಾಡಿರುವ ಕೊರೋನಾ ವೈರಸ್ ನ ನಾಶ ಅಗತ್ಯವಾಗಿರುವುದರಿಂದ ವಿಶ್ವದ ಅನೇಕ ರಾಷ್ಟ್ರಗಳು ಕೊರೋನಾ ವೈರಸ್ ಗೆ ಔಷಧಿಯನ್ನು ಸಂಶೋಧಿಸುತ್ತಲೇ ಇದೆ, ನೆನ್ನೆಯವರೆಗೂ ರಷ್ಯಾದಲ್ಲಿ ಸಂಶೋಧಿಸಿರುವ ಔಷಧಿಯ ಬಗ್ಗೆ ಮಾತುಗಳಾದರೆ ಇಂದು ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಸಂಶೋಧಿಸಿರುವ ಔಷಧಿಯ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತಿದೆ,
ಹೌದು ಲಂಡನ್ನ್ನಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಸೇರಿ ಅಭಿವೃದ್ಧಿಪಡಿಸುತ್ತಿರುವ ಕರೊನಾ ಲಸಿಕೆ ಕೋವಿಡ್ ವಿರುದ್ಧ ಭಾರಿ ಪರಿಣಾಮಕಾರಿಯಾಗಲಿದೆ ಕೋವಿಡ್ ರೋಗಿಗಳಲ್ಲಿ ಪ್ರತಿರೋಧ ಶಕ್ತಿ ಉಂಟು ಮಾಡುವುದಲ್ಲದೇ, ವೈರಸ್ಅನ್ನು ಕೊಲ್ಲುವ ಜೀವಕಣಗಳನ್ನು ಉತ್ಪಾದಿಸುತ್ತಿದೆ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ಹೀಗಾಗಿ ಇದು ಕೋವಿಡ್ ವಿರುದ್ಧ ದುಪ್ಪಟ್ಟು ಸುರಕ್ಷತೆ ನೀಡಲಿದೆ ಎಂದು ತಜ್ಞರು ಹೇಳಿದ್ದಾರೆ.
ಆಕ್ಸ್ಫರ್ಡ್ ವಿವಿ ತಂಡ ಮಾನವರ ಮೇಲೆ ಮೂರನೇ ಹಂತದ ಪ್ರಯೋಗ ನಡೆಸುತ್ತಿದೆ. ಲಸಿಕೆಯ ಮೊದಲ ಹಂತದ ಪರೀಕ್ಷೆ ವರದಿಗಳನ್ನು ಒಂದೆರಡು ದಿನಗಳಲ್ಲಿಯೇ ಪ್ರಕಟಿಸಲಿದೆ. ಇದರ ಪ್ರಕಾರ ಲಸಿಕೆ ಪಡೆದವರ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕಣಗಳು ಉತ್ಪಾದನೆಯಾಗುತ್ತಿವೆ. ಜತೆಗೆ, ವೈರಸ್ಅನ್ನು ಕೊಲ್ಲುವ ಟಿ-ಸೆಲ್ಗಳು ಕೂಡ ಸೃಷ್ಟಿಯಾಗುತ್ತಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಬ್ರೆಜಿಲ್ನಲ್ಲಿ ಸಾವಿರಾರು ಜನರ ಮೇಲೆ ಲಸಿಕೆಯ ಮೂರನೇ ಹಂತದ ಪರೀಕ್ಷೆ ಕಳೆದ ತಿಂಗಳಿನಿಂದ ನಡೆಸಲಾಗುತ್ತಿದೆ. ಈ ಬಗ್ಗೆ ಶುಭಸುದ್ದಿ ಪ್ರಕಟವಾಗಲಿದೆ ಎಂದು ಐಟಿವಿ ಸುದ್ದಿ ಸಂಸ್ಥೆಯ ರಾಜಕೀಯ ವಿಶ್ಲೇಷಕ ರಾಬರ್ಟ್ ಪೆಸ್ಟೋನ್ ಮಾಹಿತಿ ನೀಡಿದ್ದಾರೆ. ಲಸಿಕೆಯಿಂದಾಗಿ ಮಾನವ ದೇಹದಲ್ಲಿ ಪ್ರತಿರೋಧಕ ಶಕ್ತು ಉಂಟಾಘುತ್ತಿದೆ. ಜತೆಗೆ, ವೈರಸ್ಅನ್ನು ನಾಶಪಡಿಸುತ್ತಿರುವ ಅಂಶ (ಟಿ-ಸೆಲ್) ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಅವರು ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.ಒಂದು ವೇಳೆ ಈ ಪ್ರಯೋಗ ಯಶಸ್ವಿಯಾಗಿದ್ದೇ ಆದಲ್ಲಿ, ನಿರೀಕ್ಷೆಗಿಂತಲೂ ಮುನ್ನವೇ ಕರೊನಾ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಹತ್ತಕ್ಕೂ ಅಧಿಕ ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ಇದು ಪೂರ್ಣಗೊಂಡಲ್ಲಿ ಸೆಪ್ಟಂಬರ್ ಹೊತ್ತಿಗೆ ಲಸಿಕೆ ದೊರೆಯಲಿದೆ. ಆದರೆ, ಆಗಸ್ಟ್ ಮಧ್ಯಭಾಗದಲ್ಲಿಯೇ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ಹೇಳಿಕೊಂಡಿವೆ. ಈ ನಡುವೆ ಭಾರತದ ಎರಡು ಲಸಿಕೆಗಳು ಕ್ಲಿನಿಕಲ್ ಟ್ರಯಲ್ ನಡೆಸುತ್ತಿವೆ.
ಆಕ್ಸ್ಫರ್ಡ್ ಲಸಿಕೆ ಯಶಸ್ವಿಯಾದರೆ ಅದು ಭಾರತದಲ್ಲಿಯೂ ಉತ್ಪಾದನೆಯಾಗಲಿದೆ ಎಂಬುದು ಆಶಾದಾಯಕ ಸಂಗತಿಯಾಗಿದೆ. ಪ್ರತಿರೋಧಕ ಶಕ್ತಿ ಬಹುಕಾಲದವರೆಗೆ ರಕ್ಷಣೆ ನೀಡುವುದಿಲ್ಲ. ಆದರೆ, ಟಿ-ಸೆಲ್ಗಳು ವರ್ಷಗಳ ಕಾಲ ವೈರಸ್ನಿಂದ ಕಾಪಾಡಬಲ್ಲವು. ಆದರೆ, ಇದು ಶಾಶ್ವತವಾಗಿ ಕೋವಿಡ್ನಿಂದ ರಕ್ಷಣೆ ನೀಡಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಸೆಪ್ಟಂಬರ್ ವೇಳೆಗೆ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಇಡೀ ತಂಡ ಶ್ರಮಿಸುತ್ತಿದೆ ಎಂದು ವಿವಿ ಅಧಿಕಾರಿಗಳು ಹೇಳಿದ್ದಾರೆ. ಇದಲ್ಲದೇ, ಮಾನವರ ಮೇಲಿನ ಮೊದಲ ಹಂತದ ಪ್ರಯೋಗ ಈಗಾಗಲೇ ಪೂರ್ಣಗೊಂಡಿದ್ದು, ಇದರ ಫಲಿತಾಂಶ ಪ್ರಕಟನೆಗೆ ವಿವಿ ಸಜ್ಜಾಗಿದೆ.
click and follow Indiaherald WhatsApp channel