ಬೆಂಗಳೂರು: ಕೊರೊನಾ, ಸದ್ಯದ ಸ್ಥಿತಿಯಲ್ಲಿ ಈ ಹೆಸರು ಕೇಳಿದರೆ ಅಂತಿಮ ಶವಯಾತ್ರೆ ನೆನಪಾಗುತ್ತದೆ. ಹೌದು, ಚೀನಾದಲ್ಲಿ ಮರಣ ಮೃದಂಗ ಭಾರಿಸಿದ ‘ಕೊರೊನಾ ವೈರಸ್’ ವಿಶ್ವದ ಜನರನ್ನು ಸಾವಿನ ಭಯದಲ್ಲಿ ನಡುಗಿಸಿದೆ. ಇತ್ತೀಚೆಗಷ್ಟೇ ಕೇರಳದಲ್ಲಿ ಪತ್ತೆಯಾಗಿದ್ದ ಕೊರೊನಾ ವೈರಸ್ ಜನರನ್ನು ಭಯಭೀತರನ್ನಾಗಿ ಮಾಡಿತ್ತು. ಇದೀಗ ರಾಜ್ಯದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನದ ‘ರಾಬರ್ಟ್’ ಸಿನಿಮಾಗೂ ಕೊರೊನಾ ವೈರಸ್ ಭೀತಿ ಉಂಟಾಗಿದೆ. ಹೌದು, ಇದಕ್ಕೆ ಅಸಲೀ ಕಾರಣವೇನು ಗೊತ್ತಾ! ಮುಂದೆ ಓದಿ.... 
 
ಸ್ಯಾಂಡಲ್ ವುಡ್ ನ ಒಡೆಯ ಡಿ ಬಾಸ್ ‘ರಾಬರ್ಟ್’ ಸಿನಿಮಾದ ಚಿತ್ರೀಕರಣ ಇನ್ನೂ ಕಂಪ್ಲೀಟ್ ಆಗಿಲ್ಲ. ಕೆಲದಿನಗಳ ಹಿಂದೆ ಚಿತ್ರತಂಡ ವಾರಣಾಸಿಗೆ ಹೋಗಿ ಶೂಟಿಂಗ್ ಮಾಡಿಕೊಂಡು ಬಂದಿತ್ತು. ಇನ್ನೂ ಕೆಲ ಹಾಡುಗಳ ಚಿತ್ರೀಕರಣ ಇನ್ನು ಬಾಕಿಯಿದೆ. ಆ ಹಾಡಿನ ಶೂಟಿಂಗ್‍ ಗಾಗಿ ಚಿತ್ರತಂಡ ವಿದೇಶಗಳಿಗೆ ಹೋಗಬೇಕಾಗಿತ್ತು. ಆದರೆ ವಿದೇಶದಲ್ಲಿ ಕೊರೊನಾ ವೈರಸ್ ಆರ್ಭಟಿಸುತ್ತಿರುವುದರಿಂದ ‘ರಾಬರ್ಟ್’ ಚಿತ್ರತಂಡ ಶೂಟಿಂಗ್ ಕ್ಯಾನ್ಸಲ್ ಮಾಡಿದೆ. ಹೌದು, ಇದರಿಂದ ಚಿತ್ರ ಬಿಡುಗಡೆ ಮತ್ತಷ್ಟು ವಿಳಂಬವಾಗಿ ಸಾಧ್ಯತೆಗಳು ಹೆಚ್ಚಿವೆ. 
 
ಸ್ಪೇನ್‍ ನಲ್ಲಿ ಈ ಸಿನಿಮಾದ ಹಾಡುಗಳ ಶೂಟಿಂಗ್ ನಡೆಯಬೇಕಾಗಿತ್ತು. ಈಗ ಸ್ಪೇನ್ ಬದಲು ಬೇರೆಡೆ ಚಿತ್ರೀಕರಣ ಮಾಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ. ಆದಷ್ಟು ಬೇಗ ಶೂಟಿಂಗ್ ಕಂಪ್ಲೀಟ್ ಮಾಡಿ ಏಪ್ರಿಲ್ 9 ಕ್ಕೆ ತೆರೆಗೆ ಬರಲು ಸಿದ್ಧವಾಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಏಪ್ರಿಲ್ 9ಕ್ಕೆ ಏಕಕಾಲಕ್ಕೆ ರಿಲೀಸ್ ಆಗಲಿದೆ ಎಂಬುದು ತಿಳಿದುಬಂದಿದೆ. 
 
ಉಮಾಪತಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ ರಾಬರ್ಟ್ ಚಿತ್ರ ರೆಡಿಯಾಗಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದು, ಶೀಘ್ರದಲ್ಲೇ ಸಿನಿಮಾದ ಆಡಿಯೋ ರಿಲೀಸ್ ಮಾಡಲಾಗುತ್ತದೆ ಎಂದಿದ್ದಾರೆ. ‘ರಾಬರ್ಟ್’ ಚಿತ್ರದಲ್ಲಿ ದರ್ಶನ್‍ ಗೆ ಜೋಡಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಕನ್ನಡದಲ್ಲಿ ಇದು ಚೊಚ್ಚಲ ಸಿನಿಮಾವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಲುಕ್, ಟೀಸರ್ ಮತ್ತು ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಿವೆ.
 
 
 
 
 

మరింత సమాచారం తెలుసుకోండి: