ನವದೆಹಲಿ: ಸುಪ್ರೀಂಕೋರ್ಟ್‌ನ ಸೂಚನೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕವನ್ನು ಚುನಾವಣಾ ಆಯೋಗ ಮರುನಿಗದಿ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗವು ಶಾಸಕರ ಅನರ್ಹತೆಯಿಂದ ತೆರವಾಗಿರುವ 17ಕ್ಷೇತ್ರಗಳ ಪೈಕಿ 15ಕ್ಷೇತ್ರಗಳಿಗೆ ನೂತನ ಚುನಾವಣಾ ದಿನವನ್ನು ಶುಕ್ರವಾರ ಪ್ರಕಟಿಸಿದೆ. ಈ ಹಿಂದೆ ಅಕ್ಟೋಬರ್ 21ರಂದು ಚುನಾವಣಾ ಮತದಾನ ದಿನಾಂಕ ನಿಗದಿ ಪಡಿಸಲಾಗಿತ್ತು. 

ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿ, ಅನರ್ಹ ಶಾಸಕರ ಪ್ರಕರಣ ಇತ್ಯರ್ಥ ಆಗುವವರೆಗೂ ಚುನಾವಣೆಗೆ ಬ್ರೇಕ್ ನೀಡಿತ್ತು . ಇದಕ್ಕೆ ಚುನಾವಣಾ ಆಯೋಗ ಸಹ ಒಪ್ಪಿಗೆ ನೀಡಿತ್ತು. ಆದರೆ ಇದೀಗ ಚುನಾವಣಾ ಆಯೋಗವೇ ಚುನಾವಣಾ ದಿನಾಂಕವನ್ನು ಮರು ಪ್ರಕಟಣೆ ಮಾಡಿದ್ದು, ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. 


ಪ್ರಸ್ತುತ ಚುನಾವಣಾ ಆಯೋಗ ದಿಂದ ನವೆಂಬರ್ 11 ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದೆ. ನವೆಂಬರ್ 18 ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 21 ನಾಮಪತ್ರ ಹಿಪಡೆಯಲು ಕೊನೆಯ ದಿನವಾಗಿದ್ದು, ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಡಿಸೆಂಬರ್ 11ರೊಳಗೆ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.


ಚುನಾವಣಾ ಆಯೋಗದಿಂದ ಮತ್ತೊಂದು ದಿನಾಂಕ ಅಂದರೆ ಡಿಸೆಂಬರ್ 05ಕ್ಕೆ ಮತದಾನ ಎಂದು ಘೋಷಣೆ ಆಗುತ್ತಿದ್ದಂತೆಯೇ ಅನರ್ಹ ರಿಗೆ ಹೈ ಟೆನ್ಷನ್ ಶುರುವಾಗಿದೆ. ಏಕೆಂದರೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸ ಬಹುದ ಅಥವಾ ಇಲ್ಲವಾ?! ಎಂಬುದೇ ಇನ್ನು ತೀರ್ಪು ಬಂದಿಲ್ಲ.  ಆದ್ದರಿಂದ ಅನರ್ಹರು ಫುಲ್ ಅಲರ್ಟ್ ಆಗಿದ್ದಾರೆ. ನಾವೇ ಚುನಾವಣೆಗೆ ನಿಲ್ಲಬೇಕಾ ಅಥವಾ ನಮ್ಮ ಮಕ್ಕಳು, ಸಂಬಂಧಿಕರನ್ನು ನಿಲ್ಲಿಸಬೇಕಾ ಎಂದು ಚಿಂತನೆ ನಡೆಸಿದ್ದಾರೆ. 


ಬಿ.ಜೆ.ಪಿಯನ್ನು ನಂಬಿಕೊಂಡು 17 ಶಾಸಕರು ರಾಜೀನಾಮೆ ನೀಡಿದ್ದರು. ಪ್ರಸ್ತುತ ನಡೆಯುವ ಉಪ ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕು ಎಂಬುದು ಅವರ ಲೆಕ್ಕಾಚಾರವಾಗಿದೆ. ಆದರೆ  ಮತ್ತೊಂದು ಕಡೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರಿಗೆ ಪಕ್ಷದಲ್ಲಿ ಭುಗಿಲೆದ್ದ ಅಸಮಾಧಾನವನ್ನು ಸಮಾಧಾನ ಗೊಳಿಸುವುದೇ  ದೊಡ್ಡ ತಲೆ ನೋವಾಗಿದೆ.


మరింత సమాచారం తెలుసుకోండి: