ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ. ಹೌದು ಕೃಷ್ಣಾ ನದಿ ಪ್ರವಾಹದಿಂದ ಈ ಪ್ರವಾಹ ಉಂಟಾಗಿದೆ. ಹೀಗಾಗಿ ಈ ಪರಿಸ್ಥಿತಿಯನ್ನು ನಿಭಾಯಿಸೋಕೆ ಮುಖ್ಯಮಂತ್ರಿ ಯಡಡಿಯೂರಪ್ಪ ಅವರು ಇಂದು ರವಿವಾರ ರಜೆಯ ದಿನವಾದರೂ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆ ನಡೆದಿದ್ದು ವಿಡಿಯೋ ಕಾನ್ಫರನ್ಸ್ ಮೂಲಕ ಸಂವಾದ ಮಾಡಿ ಅವರಿಗೆ ಸೂಚನೆ ನೀಡಿದರು. 


ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ಈ ಐದು ಜಿಲ್ಲೆಗಳಲ್ಲಿ ಪ್ರವಾಹ ಎದುರಾಗಿದೆ. ಈ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳೋಕೆ ಯಡಿಯೂರಪ್ಪ ಅವರು ನಿರ್ದೇಶನ ನೀಡಿದ್ದಾರೆ. ಇಷ್ಟೇ ಅಲ್ಲದೇ ನೆರೆ ಪೀಡಿತ ಪ್ರದೇಶಗಳಿಂದ ಸರಕ್ಷಿತ ಸ್ಥಳಕ್ಕೆ ಜನರನ್ನು ಸ್ಥಳಾಂತರ ಮಾಡುವಂತೆಯೂ ಸೂಚನೆ ನೀಡಿದ್ದಾರೆ. 


ಕೇವಲ ಜನರಷ್ಟೇ ಅಲ್ಲದೇ, ಇಲ್ಲಿನ ಪ್ರವಾಹ ಪಿಡೀತ ಪ್ರದೇಶಗಳಲ್ಲಿನ ಜಾನುವಾರುಗಳನ್ನು ಸಹ ರಕ್ಷಣೆ ಮಾಡಬೇಕು. ಅವು ಮೂಕಪ್ರಾಣಿಗಳು ಅವುಗಳನ್ನು ರಕ್ಷಣೆ ಮಾಡೋದು ನಮ್ಮ ಕರ್ತವ್ಯ ಎಂದರು. ಅಲ್ಲದೇ ಈ ರಕ್ಷಣಾ ಕಾರ್ಯದಲ್ಲಿ ಹಣಕಾಸಿನ ಕೊರತೆ ಎನ್ನುವ ನೆಪವನ್ನು ಒಡ್ಡಬಾರದು ಎಂದು ಸೂಚನೆ ನೀಡಿದರು. ಇನ್ನು ನೆರೆ ಸಂತೃಸ್ತರಿಗೆ ಶಿಬಿರಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಲು ಸೂಚನೆ ನೀಡಿದ್ದಾರೆ. 


ಇನ್ನು ತಮ್ಮ ದೆಹಲಿ ಬೇಟಿಯನ್ನು ರದ್ದುಗೊಳಿಸಿರುವ ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳ ಪ್ರದೇಶಗಳಿಗೆ ಸೋಮವಾರ ಖುದ್ದು ಭೇಟಿ ನೀಡಿ, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿಯೇ ಪರಿಹಾರ ಕಾರ್ಯಗಳು ನಡೆಯಬೇಕು. ಅಲ್ಲಿಯನ ಪ್ರತಿಯೊಂದು ಬೆಳವಣಿಗೆಯನ್ನು ಕಳುಹಿಸಿಕೊಡಬೇಕು ಎಂದು ತಾಕೀತು ಮಾಡಿದ್ದಾರೆ. 
 
ಉತ್ತರ ಕರ್ನಾಟಕ ಐದು ರಾಜ್ಯಗಳ ಜನಜೀವನ ಅಸ್ತವ್ಯಸ್ತವಾಗಿದೆ. ಇದಕ್ಕೆ ಕಾರಣ ಕೃಷ್ಣಾ ನದಿಯಿಂದ ಬಂದಂತಹ ಪ್ರವಾಹ. ಹೀಗಾಗಿ ಐದು ರಾಜ್ಯಗಳಿಗೆ ಹಣಕಾಸಿನ ನೆರವು ನೀಡಲಾಗಿದೆ. ಅದು ಹೀಗಿದೆ.  ಬೆಳಗಾವಿ-11.42 ಕೋಟಿ, ವಿಜಯಪುರ- 9.10 ಕೋಟಿ, ಬಾಗಲಕೋಟೆ- 10.55 ಕೋಟಿ, ರಾಯಚೂರು- 13.02 ಕೋಟಿ, ಯಾದಗಿರಿ- 10.29 ಕೋಟಿ ರೂ. ಅನುದಾನ ಲಭ್ಯವಿದೆ.



మరింత సమాచారం తెలుసుకోండి: