ಗೌರಿ ಲಂಕೇಶ್ ಅವರ ಹೆಸರಿನಲ್ಲಿ ನೀಡುವ ಗೌರಿ ಲಂಕೇಶ್ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಆಯ್ಕೆ ಆಗಿದ್ದಾರೆ. ಗೌರಿ ಲಂಕೇಶ್ ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಕಟುವಾದ ಪದಗಳಿಂದ ಬರೆಯುತ್ತಿದ್ದರು. ಇದಕ್ಕೆ ಬೇಸತ್ತ ಸನಾತನ ಸಂಸ್ಥೆಯ ಸದಸ್ಯರು ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.


ಈ ಕುರಿತು ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ದೊರೆಸ್ವಾಮಿ ಮತ್ತು ಕಾರ್ಯದರ್ಶಿ ಕೆ.ಎಲ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಜೊತೆಗೆ ರವೀಶ್ ಕುಮಾರ್ ಅವರನ್ನು ಆಯ್ಕೆ ಮಾಡಿದ್ದನ್ನೂ ಅವರು ಘೋಷಣೆ ಮಾಡಿದ್ದಾರೆ. ಅಷ್ಟಕ್ಕೂ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾದ್ರೂ ಏನು ಅನ್ನೋದು ಇಲ್ಲಿದೆ ನೋಡಿ.


ಗೌರಿ ಲಂಕೇಶ್ ಅವರಂತೆ ರವೀಶ್ ಕುಮಾರ್ ಸಹ ನಿರ್ಭೀತ ಪತ್ರಕರ್ತರು. ಅಲ್ಲದೇ ಸೆಕ್ಯೂಲರ್ ಮೌಲ್ಯಗಳ ಮೇಲೆಯೇ ಅವರು ತಮ್ಮ ವೃತ್ತಿಗೆ ಬದ್ಧರಾಗಿರೋದೇ ಅವರಿಗೆ ಈ ಪ್ರಶಸ್ತಿ ಒಲಿದಜು ಬರೋಕೆ ಕಾರಣ ಆಗಿದೆ. 


ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಿಷ್ಟು..


ಕಳೆದ ಬಾರಿಯಂತೆ ಈ ಸಾರಿಯೂ ಗೌರಿ ಸ್ಮಾರಕ ಟ್ರಸ್ಟ್ ಗೌರಿ ನೆನಪಿನ ದಿನವನ್ನು ಸಾಂವಿಧಾನಿಕ ಮೌಲ್ಯಗಳಾದ ವಾಕ್ ಸ್ವಾತಂತ್ಯ ಮತ್ತು ಭಿನ್ನಮತದ ಹಕ್ಕನ್ನು ಎತ್ತಿಹಿಡಿಯುವ, ತನ್ಮೂಲಕ ಪ್ರಜಾತಂತ್ರವನ್ನು ಪೊರೆಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ ಎಂದು ತಿಳಸಿದರು. ಹೀಗಾಗಿ ಪ್ರಭುತ್ವಕ್ಕೆ ಎದಿರಾಗಿ ಸತ್ಯವನ್ನು ಸಾರಿ ಹೇಳುವುದರ ಪ್ರಾಮುಖ್ಯತೆಯನ್ನೂ, ಅನಿವಾರ್ಯತೆಯನ್ನೂ ಈ ದಿನ ಪ್ರತಿನಿಧಿಸುತ್ತದೆ. ಈ ಆಶಯಕ್ಕೆ ಅನುಗುಣವಾಗಿ ಟ್ರಸ್ಟ್ ಗೌರಿ ಲಂಕೇಶ್ ಹೆಸರಿನಲ್ಲಿ ಒಂದು ವಾರ್ಷಿಕ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ ಎಂದು ಅವರು ಹೇಳಿದರು. 


ಮುಂದುವರೆದು ಮಾತನಾಡಿದ ಅವರು, ಪತ್ರಿಕೋದ್ಯಮಕ್ಕೆ ಘನತೆ ತರುವಂಥ, ಸಂಕಷ್ಟದ ಸಮಯದಲ್ಲೂ ತಮ್ಮ ವೃತ್ತಿಗೆ ಬದ್ಧತೆಯಿಂದ ದುಡಿವ, ನಿರ್ಭಿಡೆಯಿಂದ ವರದಿಮಾಡುವ ಪತ್ರಕರ್ತರಿಗೆ ಗೌರಿ ಲಂಕೇಶ್ ಪ್ರಶಸ್ತಿಯನ್ನು ನೀಡಬೇಕೆಂಬುದು ಟ್ರಸ್ಟಿನ ಆಶಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ರವೀಶ್ ಕುಮಾರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮೊದಲ ಬಾರಿಗೆ ಈ ಪ್ರಶ್ತಿಯನ್ನು ನೀಡಲಾಗುತ್ತಿದದೆ. ಅದರಲ್ಲೂ ರವೀಶ್ ಕುಮರ್ ಅವರಿಗೆ ಇತ್ತೀಚೆಗಷ್ಟೇ ಮ್ಯಾಗ್ಸಸ್ಸೆ ಪ್ರಶಸ್ತಿ ಒಲಿದು ಬಂದಿತ್ತು. ಹೀಗಾಗಿ ಗೌರಿ ಲಂಕೇಶ್ ಪ್ರಶಸ್ತಿಯ ಇನ್ನೂ ಹೆಚ್ಚಾಗಿದೆ ಎನ್ನಲಾಗಿದೆ.


మరింత సమాచారం తెలుసుకోండి: