ದಸರಾ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಆದರೆ ದಸರಾ ಹಬ್ಬದಲ್ಲಿ ಸಿನಿ ಹಬ್ಬವೂ ನಡೆಯುತ್ತದೆ. ಸಿನಿ ರಸಿಕರಿಗೆ ಈ ಸಮಯದಲ್ಲಿ ಸಾಳು ಸಾಲು ಸಿನಿಮಗಳು ರಿಲೀಸ್ ಆಗುತ್ತವೆ. ಅದಲ್ಲಿಯೂ ಈ ಸಮಯದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾ ರಿಲೀಸ್ ಆಗ್ತಾ ಇವೆ. ಅವುಗಳ ಪೈಕಿ ಎರಡು ದೊಡ್ಡ ಚಿತ್ರಗಳು ತೆರೆ ಮೇಲೆ ಅಪ್ಪಳಿಸೋಕೆ ರೆಡಿ ಆಗಿವೆ ನೋಡಿ.


ಹಾಗಾದರೆ ಆ ಸಿನಿಮಾಗಳು ಯಾವುವು? ಅಂದರೆ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಹಾಗೂ ಟೈಗರ್ ಶ್ರಾಫ್ ಮತ್ತು ಹೃತಿಕ್ ರೋಷನ್ ಅಭಿನಯದ ವಾರ್ ಸಿನಿಮಾ ಅಕ್ಟೋಬರ್ 2 ರಂದು ಜಗತ್ತಿನನದಾದ್ಯಂತ ರಿಲೀಸ್ ಆಗಲಿವೆ. ಇವು ಏನಿಲ್ಲವೆಂದರೆ, 8000 ಥೀಯಟರ್ ನಲ್ಲಿ ರಿಲೀಸ್ ಆಗಲಿವೆ. ಅಲ್ಲದೇ ಈ ಚಿತ್ರ ಈಗಾಗಲೇ ಭಾರೀ ನಿರೀಕ್ಷೆ ಹಹುಟ್ಟಿ ಹಾಕಿವೆ. ಈ ನಡುವೆ ಈ ಎರಡು ಸಿನಿಮಾಗಳಿಗೆ ಸೆಡ್ಡು ಹೊಡೆದು ನಿಲ್ಲೋಕೆ ರೆಡಿ ಆಗಿದೆ. 


ಹೌದು ಸೈರಾ ನರಸಿಂಹ ರೆಡ್ಡಿ, ವಾರ್ ಚಿತ್ರಗಳ ನಡುವೆ ವಾರ್ ನಡೆಸೋಕೆ ಕನ್ನಡದ ಸಿನಿಮಾ ಒಂದು ಸಜ್ಜಾಗಿದೆ. ಹೌದು ಕನ್ನಡದ ಸವರ್ಣ ದೀರ್ಘ ಸಂಧಿ ಸಿಇನಿಮಾ ಈ ಎರಡು ಸಿನಿಮಾಗಳ ನಡುವೆ ಫೈಟ್ ಮಾಡೋಕೆ ರೆಡಿ ಆಗಿದೆ. ಈಗಾಗಲೇ ಟ್ರೇಲರ್ ಮುಖಾಂತರ ಸೌಂಡ್ ಮಾಡಿರೋ ಈ ಸಿನಿಮಾ ಸದ್ಯಕ್ಕೆ ನಿರೀಕ್ಷೆ ಹಟ್ಟು ಹಾಕಿರುವುದು ಸುಳ್ಳಲ್ಲ. 


ಸವರ್ಣ ದೀರ್ಘ ಸಂಧಿ ಚಿತ್ರಕ್ಕೆ ತುಳು ಸಿನಿಮಾದಲ್ಲಿ ಸೂಪರ್ ಡೂಪರ್ ಹಿಟ್ ಸಿನಿಮಾ ಕೊಟ್ಟ ಚಾಲಿಲು ಪೋಲಿಲು' ಖ್ಯಾತಿ ವೀರೆಂದ್ರ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಈ ಸಿನಿಮಾಗೆ, ಮನೋಮೂರ್ತಿ ಸಂಗೀತ ನೀಡಿದ್ದಾರೆ. ಇನ್ನು ಈಗಾಗ್ಲೇ ಮನೋಮೂರ್ತಿ ಮತ್ತು ಶ್ರೇಯಾ ಘೋಷಲ್ ಕಾಂಭೀನೇಷನ್‍ನ ಹಾಡುಗಳು 


ಸಿನಿ ರಸಿಕರ ಮನವನ್ನು ಗೆದ್ದಿವೆ ಎಂದು ಹೇಳಬಹುದು. ಸವರ್ಣ ದೀರ್ಘ ಸಂಧಿ ಸಿನಿಮಾ ಇನ್ನು ಅಕ್ಟೋಬರ್ ಮೊದಲನೇ ವಾರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರೋದಕ್ಕೆ ರೆಡಿ ಆಗಿದೆ. ಅಪ್ಪಟ ಕನ್ನಡದ ಸಿನಿಮಾ ಸವರ್ಣ ಧೀರ್ಘ ಸಂಧಿ. ಈ ಹಿಂದೆ ಆಪರೇಶನ್ ಅಲಮೇಲಮ್ಮ ಚಿತ್ರದಲ್ಲಿ ನಾಯಕನಾದ ನಟನೇ ಇಲ್ಲಿಯೂ ಅಭಿನಯ ಮಾಡಿದ್ದಾರೆ. ಸೈರಾ ಜೊತೆ ವಾರ್ ನಡೆಸಿ ಕನ್ನಡ ಚಿತ್ರ ಗೆಲ್ಲುತ್ತಾ ಕಾದುನೋಡಬೇಕಿದೆ.


మరింత సమాచారం తెలుసుకోండి: