ಕೊರೋನಾ ವೈರಸ್ ದೇಶದಲ್ಲಿ ದಿನದಿಮದ ದಿನಕ್ಕೆ ಹೆಚ್ಚಾಗುದ್ದು ಆಸ್ಪತ್ರೆಗಳಲ್ಲಿ ಬೆಡ್ ಗಳಿಲ್ಲದೆ ಒದ್ದಾಡುತ್ತಿದ್ದರೆ ಮತ್ತೊಂದೆಡೆ ಕೊರೋನಾ ವೈರಸ್ ನಿಂದ ಗುಣಮುಖರಾದವರ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದುವರೆಗೂ ದೇಶದಲ್ಲಿ ಲಕ್ಷಾಂತರ ಕೊರೋನಾ ಸೋಂಕಿತರು ಗುಣ ಮುಖರಾಗಿದ್ದಾರೆ.
ಹೌದು ದೇಶದಾದ್ಯಂತ ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆಯು ಭಾನುವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ 11 ಲಕ್ಷ ದಾಟಿದೆ. ಬೆಳಗ್ಗೆ 8 ಗಂಟೆ ವರೆಗಿನ 24 ತಾಸುಗಳಲ್ಲಿ 51 ಸಾವಿರ ರೋಗಿಗಳು ಗುಣಮುಖರಾಗಿದ್ದಾರೆ. ಇದು ಈವರೆಗಿನ ದಾಖಲೆ. ಗುಣಮುಖ ಪ್ರಮಾಣವು ಶೇ 65.44ಕ್ಕೆ ಏರಿದೆ. ಗುಣಮುಖರಾದವರ ಒಟ್ಟು ಸಂಖ್ಯೆಯು 11.45 ಲಕ್ಷಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.
ಹೊಸ ಮಾರ್ಗಸೂಚಿ: ವಿದೇಶದಿಂದ ಬರುವವರಿಗೆ ಪರಿಷ್ಕೃತ ಕೋವಿಡ್ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಪ್ರಕಟಿಸಿದೆ. ಇದು ಇದೇ 8ರಿಂದ ಅನ್ವಯ ಆಗಲಿದೆ.14 ದಿನಗಳ ಕಡ್ಡಾಯ ಪ್ರತ್ಯೇಕ ವಾಸಕ್ಕೆ ಸಿದ್ಧ ಎಂಬ ಮುಚ್ಚಳಿಕೆಯನ್ನು ಎಲ್ಲ ಪ್ರಯಾಣಿಕರು www.newdelhiairport.in ವೆಬ್‌ಸೈಟ್‌ಗೆ ಸಲ್ಲಿಸಬೇಕು ಎಂದು ಈ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಗರ್ಭಿಣಿಯರು, ಕುಟುಂಬದಲ್ಲಿ ಸಾವಿನ ಕಾರಣಕ್ಕೆ ದೇಶಕ್ಕೆ ಬಂದವರು, ಗಂಭೀರ ಕಾಯಿಲೆ ಇರುವವರು, 10 ವರ್ಷಕ್ಕಿಂತ ಒಳಗಿನ ಮಕ್ಕಳ ಪೋಷಕರು 14 ದಿನಗಳ ಮನೆ ಪ್ರತ್ಯೇಕವಾಸಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ. ಅಂತಹ ಅವಕಾಶ ಬೇಕಿದ್ದರೆ ಪ್ರಯಾಣಕ್ಕೆ 72 ತಾಸು ಮುಂಚಿತವಾಗಿ ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಹಾಕಬೇಕು.
ಸಾಂಸ್ಥಿಕ ಪ್ರತ್ಯೇಕವಾಸದಿಂದ ವಿನಾಯಿತಿ ಬಯಸುವವರು ಕೋವಿಡ್ ಇಲ್ಲ ಎಂಬುದು ದೃಢಪಟ್ಟ ಪರೀಕ್ಷೆಯ ವರದಿಯನ್ನು ಸಲ್ಲಿಸಬೇಕು.ಪ್ರಯಾಣಕ್ಕೆ 96 ತಾಸು ಮುಂಚಿತವಾಗಿ ಈ ಪರೀಕ್ಷೆ ನಡೆಸಿರಬೇಕು. ಪರೀಕ್ಷೆಯ ವರದಿಯನ್ನು ಪೋರ್ಟಲ್‌ಗೆ ಸಲ್ಲಿಸಬೇಕು. ಭಾರತಕ್ಕೆ ಬಂದಾಗ ವಿಮಾನ ನಿಲ್ದಾಣದಲ್ಲಿ ಅಥವಾ ಬಂದರಿನಲ್ಲಿ ವರದಿಯನ್ನು ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
click and follow Indiaherald WhatsApp channel