ಉಪೇಂದ್ರ ಅಂದ್ರೆ ಯಾವಾಗಲೂ ವಿಭಿನ್ನತೆಗೆ ಹೆಸರುವಾಸಿ. ಇದೀಗ ಉಪ್ಪಿ ಅವರ ಸಿನಿಮಾ 'ಐ ಲವ್ ಯೂ' ಜೂನ್ 14 ರಂದು ಬಿಡುಗಡೆ ಆಗಿತ್ತು. ಚಿತ್ರ ತೆರೆ ಕಂಡ ಮರುದಿನವೇ ಚಿತ್ರದ ಸಕ್ಸಸ್ ಮೀಟ್ ಮಾಡಲಾಗಿದೆ. ಅಷ್ಟಕ್ಕೂ ಒಂದೇ ದಿನದಲ್ಲಿ ಸಕ್ಸಸ್ ಮೀಟ್ ಮಾಡಿದ್ದೇಕೆ? ಇಲ್ಲಿದೆ ನೋಡಿ.
ಸಕ್ಸಸ್ ಮೀಟ್ ನಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಆರ್. ಚಂದ್ರು 'ಐ ಲವ್ ಯೂ ' ಚಿತ್ರವನ್ನು ವಿತರಕರು ಉತ್ತಮ ಮೊತ್ತಕ್ಕೆ ಕೊಂಡುಕೊಂಡಿದ್ದಾರೆ. ಬಿಡುಗಡೆಗೂ ಮುನ್ನ ಹೂಡಿದ ಹಣ ವಾಪಾಸ್ ಬಂದಿದೆ ಎಂದರು.
ಸದ್ಯ ಉಪೇಂದ್ರ ಅವರು, ಬೇರೆ ಚಿತ್ರಗಳಲ್ಲಿ ಬ್ಯುಸಿ ಆಗಿರೋದರಿಂದ ಅವರ ಸಮಯ ನೋಡಿಕೊಂಡು ಬಿಡುಗಡೆ ಆದ ಮರುದನವೇ ಸಕ್ಸಸ್ ಮೀಟ್ ಆಯೋಜನೆ ಮಾಡಲಾಯಿತು. ಚಿತ್ರದ ಇಂಥದೊದ್ದುಂದು ಯಶಸ್ಸಿಗೆ ಕಾರಣ ಆದವರಿಗೆ ಧನ್ಯವಾದ ಎಂದು ಹೇಳಿದರು.
click and follow Indiaherald WhatsApp channel