ಪುನೀತ್ ರಾಜ್ ಕುಮಾರ್ ಬಹು ಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟ. ಪುನೀತ್ ಅಂದರೆ ಆತ ಕೇವಲ ನಟನಷ್ಟೇ ಅಲ್ಲ. ಬಹುಮುಖ ಪ್ರತಿಭೆ. ಹೌದು ಪುನೀತ್ ಅವರು ತೆರೆ ಮೇಲೆ ಹೇಗೆ ನಾಯಕನಂತೆ ಇರುತ್ತಾರೆಯೋ ಹಾಗೆಯೇ ತೆರೆ ಹಿಂದೆಯೂ ಇರುತ್ತಾರೆ.  ಕೇವಲ ನಟನೆಯಷ್ಟೇ ಅಲ್ಲದೆ ಹಾಡುಗಾರನಾಗಿ ಎಲ್ಲರ ಮನಸೆಳೆದಿರುವ ಪುನೀತ್ ಇದೀಗ ಮತ್ತೊಂದು ಸಿನಿಮಾದ ಹಾಡನ್ನು ಹಾಡಿದ್ದಾರೆ. ಹೌದು ನಟ ಅನೀಶ್ ರ ಹೊಸ ಸಿನಿಮಾದ ಹಾಡೊಂದನ್ನ ಹಾಡಿದ್ದಾರೆ.


ಅನೀಶ್ ಅಭಿನಯದ ‘ಅಕಿರ’ ಮತ್ತು ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಸಿನಿಮಾದ ಹಾಡನ್ನು ಹಾಡಿದ್ದ ಪುನೀತ್ ಈಗ ಅದೇ ನಟನ ಮತ್ತೊಂದು ಸಿನಿಮಾಕ್ಕೆ ಅಪ್ಪು ಹಾಡಿದ್ದಾರೆ. ಅಪ್ಪು ಕಕಂಠ ಯಾವಾಗಲೂ ಅದೊಂತರ ವಿಶೇಷ. ಪವರ್ ಸ್ಟಾರ್ ಅನ್ನೋ ಪಟ್ಟಕಕ್ಕೆ ಹೇಳಿ ಮಾಡಿಸಿದ ಶೈಲಿ ಅವರದ್ದು. ಇದೀಗ ಅವರು ತಮ್ಮ ಚಿತ್ರದ ಒಂದು ಹಾಡನ್ನು ಃಆಡಿರೋದಕ್ಕೆ ಈ ವಿಷಯವನ್ನು ನಟ ಅನೀಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪುನೀತ್ ರೊಡನೆ ಇರುವ ಫೋಟೋವನ್ನು ಹಾಕುವ ಮೂಲಕ ಹಂಚಿಕೊಂಡಿದ್ದಾರೆ. 


ಇದು ಅನೀಶ್ ಮತ್ತು ಪುನೀತ್ ಕಾಂಬಿನೇಶನ್ ನಲ್ಲಿ ಇದು ಎಷ್ಟನೇ ಹಾಡು ಗೊತ್ತಾ? ಯೆಸ್ ಇದು ಇಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವಾ ಮೂರನೇ ಹಾಡಾಗಿದ್ದು, ಈ ಹಿಂದೆ ಹಾಡಿದ್ದ ಎರಡೂ ಹಾಡುಗಳು ಹಿಟ್ ಆಗಿದ್ದವು ಆದ್ದರಿಂದ ಆನಂದ್ ರಾಜವಿಕ್ರಂ ಸಂಗೀತ ನೀಡಿರುವ ‘ರಾಮಾರ್ಜುನ’ ಸಿನಿಮಾದ ಹಾಡಿಗೆ ಅಭಿಮಾನಿಗಳ ನಿರೀಕ್ಷೆ ಹೆಚ್ಚೇ ಇದೆ. ಅಷಟ್ಕ್ಕೂ ಈ ಸಿನಿಮಾದಲ್ಲಿ ಪುನೀತ್ ಹಾಡಿರುವ ಹಾಡು ಯಾವುದು? ಅದು ಹೇಗಿದೆ ಅನ್ನೋ ಕುತೂಹಲ ಪ್ರೇಕ್ಷರನ್ನು ಕೆರಳಿಸಿವೆ ಎಂದರೆ ತಪ್ಪಿಲ್ಲ.
ಇನ್ನು ಅನೀಶ್ ನಟನಾಗಿ, ನಿರ್ದೇಶಕನಾಗಿ ಹಾಗೂ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ರಾಮಾರ್ಜುನ’ ನಾಯಕಿ ನಿಶ್ಮಿತ ನಾಯ್ಡು ಈ ಹಿಂದೆ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಸಿನಿಮಾದಲ್ಲೂ ಅನೀಶ್ ಜೋಡಿಯಾಗಿದ್ದರು.  ಇದೀಗ ಪುನೀತ್ ಹಾಗೂ ಅನಿಶ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಹಾಡಿಗೆ ಎಲ್ಲರೂ  ಕಾತರರಾಗಿದ್ದಾರೆ.


మరింత సమాచారం తెలుసుకోండి: