ಕೊರೋನಾ ವೈರಸ್ ಇಂದಾಗಿ ರಾಜ್ಯದಲ್ಲಿ ನಡೆಯಬೇಕಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಪಿಯುಸಿ ಪರೀಕ್ಷೆಯನ್ನು ಮುಂದೂಡಲಾಗುತ್ತಲೇ ಇತ್ತು ಇದರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು . ಆದರೆ ಇಂದು  ವಿದ್ಯಾರ್ಥಿಗಳ ಆತಂಕಕ್ಕೆ ಸರ್ಕಾರ ತೆರೆ ಎಳೆದಿದೆ. ರಾಜ್ಯ ಸರ್ಕಾರದಿಂದ ಇಂದು ಎಸ್ಎಸ್ ಎಲ್ ಸಿ ಪರೀಕ್ಷೆಯ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.

 

ಹೌದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಬಾಕಿ ಉಳಿದಿದ್ದ 10ನೇ ಹಾಗೂ 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.  ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದಿನ ಪತ್ರಿಕಾ ಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಉಮಾಶಂಕರ್ ಅವರು, ಆಯುಕ್ತರಾದ ಜಗದೀಶ್ ಸೇರಿದಂತೆ ಅನೇಕರಿದ್ದಾರೆ. ಮಾರ್ಚ್ 27ರಿಂದ ಏಪ್ರಿಲ್ 9ರವರೆಗೆ ನಡೆಯಬೇಕಿತ್ತು. ಆದರೆ ಲಾಕ್ ಡೌನ್ ಪರಿಣಾಮ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿರಲಿಲ್ಲ. ಈ ಬಗ್ಗೆ ಅನೇಕ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ ಎಂದರು.

 

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರಂತೆ ಜುಲೈ 1ರಿಂದ 15ರವರೆಗೆ ವಿವಿಧ ವಿಷಯಗಳ ಪರೀಕ್ಷೆ ನಡೆಯಲಿವೆ. ಜುಲೈ 1 ರಂದು ಹೋಮ್​ ಸೈನ್ಸ್​, 2ರಂದು ಹಿಂದಿ ಎಲೆಕ್ಟಿವ್​ , ಹಿಂದಿ ಕೋರ್​, 7-ಕಂಪ್ಯೂಟರ್​ ಸೈನ್ಸ್​, ಇನ್​ಫಾರ್ಮೇಶನ್​ ಟೆಕ್​, 9- ಬಿಜಿನೆಸ್​ ಸ್ಟಡೀಸ್​, 10- ಬಯೋಟೆಕ್ನಾಲಜಿ, 11-ಭೂಗೋಳಶಾಸ್ತ್ರ, 13- ಸೋಷಿಯಾಲಜಿ ಪರೀಕ್ಷೆಗಳು ನಡೆಯಲಿವೆ.

 

ಇನ್ನುಳಿದ ದಿನಗಳಂದು 10ನೇ ತರಗತಿ ಪರೀಕ್ಷೆ ನಡೆಯಲಿದ್ದು, ಅವುಗಳು ಈಶಾನ್ಯ ದೆಹಲಿ ಶಾಲೆಗಳಿಗೆ ಸೀಮಿತವಾಗಿರಲಿವೆ ಎಂದು ಮಂಡಳಿ ಹೇಳಿದೆ. ಎಲ್ಲ ವಿದ್ಯಾರ್ಥಿಗಳು ಸ್ಯಾನಿಟೈಸರ್​ನ್ನು ಕೊಂಡೊಯ್ಯಬೇಕು. ಮಾಸ್ಕ್​ ಧರಿಸಿರಬೇಕು. ಕರೊನಾ ವ್ಯಾಪಿಸುವುದನ್ನು ತಡೆಯುವ ಕ್ರಮಗಳ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಿರಬೇಕು. ಪ್ರವೇಶಪತ್ರದಲ್ಲಿ ನೀಡಲಾಗುವ ಎಲ್ಲ ಸೂಚನೆಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.

 

ಕೊರೋನಾ ಭೀತಿ ಹಿನ್ನೆಲೆ ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಜೂನ್ 25ರಿಂದ ಜುಲೈ.4ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

 

8 ಲಕ್ಷದ 48 ಸಾವಿರದ 196 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈಗ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬಹಳಷ್ಟು ಚರ್ಚೆ ಮಾಡಿ, ದಿನಾಂಕವನ್ನು ನಿರ್ಧರಿಸಿದ್ದೇವೆ. ಜೂನ್ 25ರಿಂದ 4 ಜುಲೈವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿರುವುದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.

 

మరింత సమాచారం తెలుసుకోండి: