ಕೊರೋನಾ ವೈರಸ್‌ನಿಂದಾಗಿ ದೇಶವನ್ನು ರಕ್ಷಣೆಯನ್ನು ಮಾಡಿಕೊಳ್ಳುವ ಉದ್ದೇಶದಿಂದ ದೇಶವನ್ನೇ ಲಾಕ್ ಡೌನ್ ಮಾಡಿರುವುದರಿಂದ ದೇಶದಲ್ಲಿ ಎಲ್ಲಾ ಕ್ಷೇತ್ರಗಳು ಬಂದ್ ಆಗಿವೆ ಇದರ ಜೊತೆಗೆ ದೇಶದಲ್ಲಿ ನಡೆಯ ಬೇಕಿದ್ದ ಅದೆಷ್ಟೋ ಪರೀಕ್ಷೆಗಳು ಕೆಲವೊಂದು ಮುಂದೋಗಿದ್ದರೆ ಕೆಲವೊಂದು ರದ್ದಾಗಿದೆ. ಅದೇ ರೀತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹೊರತುಪಡಿಸಿ 1 ರಿಂದ 9 ರತನಕ ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾತ್ರ ಲಾಕ್ ಡೌನ್ ಬಳಿಕ ಮಾಡುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕುರಿತು ಕೆಲವು ಪಸ್ತಾಪಗಳನ್ನು ಮಾಡಲಾಗಿದೆ.. ಅಷ್ಟಕ್ಕೂ ಆ ಪ್ರಸ್ತಾಪ ಏನು ಗೊತ್ತಾ..?
ಕೊರೋನಾ ವೈರಸ್‌ನಿಂದಾಗಿ ನಡೆಯ ಬೇಕಾಗಿದ್ದ ನಡೆಯ ಬೇಕಾಗಿದ್ದ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾತ್ರ ಲಾಕ್ ಡೌನ್ ನಂತರ ನಡೆಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು ಆದರೆ ಈಗ ಕರ್ನಾಟಕ ಸರ್ಕಾರದ ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರದ್ದು ಪಡಿಸುವಂತಹ ಪ್ರಸ್ತಾಪಗಳು ಬಂದಿದೆ.
ಹೌದು ರಾಜ್ಯದಲ್ಲಿ ಕೊರೋನಾ ವೈರಸ್ ರೌದ್ರನರ್ತನ ಮುಂದುವರೆದಿದ್ದು, ಎಸ್‌ಎಸ್‌ಎಲ್’ಸಿ ಪರೀಕ್ಷೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಠಿಣವಾಗಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನೇ ರದ್ದುಪಡಿಸುವಂತೆ ಪ್ರಸ್ತಾಪಗಳು ರಾಜ್ಯ ಸರ್ಕಾರದ ಮುಂದ ಬರುತ್ತಿವೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಪ್ರಾಥಮಿಕ, ಪ್ರೌಢಶಾಲಾ ಕಾರ್ಯದರ್ಶಿಗಳಿಗೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಎಸ್ ಹಿರೇಮಠ್ ಅವರು ಪತ್ರ ಬರೆದಿದ್ದು, ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್’ಸಿ ಪರೀಕ್ಷೆಯನ್ನೇ ರದ್ದು ಪಡಿಸುವಂತೆ ಹಾಗೂ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಬರೆದ ಪರೀಕ್ಷೆಗಳನ್ನು ಆಧರಿಸಿ ಗ್ರೇಡಿಂಗ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ಧಾರವಾಡ ವಿಭಾಗ ಶಿಕ್ಷಣಾಧಿಕಾರಿಗಳು ಈ ಕುರಿತು ಸಭೆ ನಡೆಸಿದ್ದು, ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. 700 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2.6 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈ ವೇಳೆ ಸಾರಿಗೆ ವ್ಯವಸ್ಥೆ ವೇಳೆ ಹಾಗೂ ಪರೀಕ್ಷಾ ಕೇಂದ್ರಗಳ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಠಿಣ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ತಿಳಿದುಬಂದಿದೆ.
ಪ್ರತೀ ಪರೀಕ್ಷಾ ಕೇಂದ್ರದಲ್ಲೂ 350 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆನ್ನಲಾಗುತ್ತಿದೆ.
click and follow Indiaherald WhatsApp channel