ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಶತದಿನಗಳನ್ನು ಪೂರೈಸಿದೆ. ಕಳೆದ ಮಾರ್ಚ್ ಒಂದರಂದು ಬಿಡುಗಡೆ ಆಗಿದ್ದ ಯಜಮಾನ ಭರ್ಜರಿಯಾಗಿ ಶತಕ ಭಾರಿಸಿದೆ. ಈ ಸಂದರ್ಭದಲ್ಲಿ ಚಿತ್ರತಂಡ ಸಂತಸವನ್ನು ಭರ್ಜರಿಯಾಗಿ ಸಂಭ್ರಮಿಸಿದೆ.
ಹೌದು, ಈ ವರ್ಷದಲ್ಲಿ ದರ್ಶನ್ ಅಭಿನಯಿಸಿದ್ದ ಮೊದಲ ಚಿತ್ರ ಯಜಮಾನ. ಇದು ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದಲ್ಲಿ ಶತದಿನಗಳನ್ನು ಪೂರೈಸಿದೆ. ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಹೀಗಾಗಿ, ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಆಡಿಟೋರಿಯಂ ನಲ್ಲಿ ಯಜಮಾನ ಶತದೀನೋತ್ಸವ ಸಂಭ್ರಮ ನಡೆಯಿತು. ಇದರಲ್ಲಿ ನಾಯಕ ನಟ ದರ್ಶನ್, ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಇನ್ನಿತರರು ಹಾಜರಿದ್ದರು. ಯಜಮಾನ ಚಿತ್ರದ ಯಶಸ್ಸಿಗೆ ಕಾರಣ ಆದವರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
click and follow Indiaherald WhatsApp channel