ಕೊರೋನಾ ವೈರಸ್‌ಗೆ ಇಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದರೂ ಕೂಡ ದೇಶದಲ್ಲಿ ಕೊರೋನಾ ಸೋಕು ಏರುತ್ತಲೇ ಇತ್ತು. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಎರಡನೇ ಹಂತದ ಲಾಕ್ ಡೌನ್ ಅನ್ನು ಜಾರಿಗೊಳಿಸಲಾಯಿತು. ಇದರ ಜೊತೆಗೆ ಜನರಲ್ಲಿ ಜಾಗೃತಿಯನ್ನು  ಮೂಡಿಸಲಾಗಿತ್ತು. ಹಾಗೂ ಇಂತಹ ಸಮಯದಲ್ಲಿ ಕೆಲವು ನಿರ್ಭಂದಗಳನ್ನು ವಿಧಿಸಲಾಗಿತ್ತು. ಇದೆಲ್ಲದರ ಪರಿಣಾಮದಿಂದ ಇಂದು ಆರೊಗ್ಯ ಸಚಿವಾಲಯದಿಂದ ಗುಡ್ ನ್ಯೂಸ್ ಹೊರಬಿದ್ದಿದೆ. ಅಷ್ಟಕ್ಕೂ ಆರೋಗ್ಯ ಸಚಿವಾಲಯದಿಂದ ಹೊರ ಬಿದ್ದ ಗುಡ್ ನ್ಯೂಸ್ ಏನು ಗೊತ್ತಾ..?

 

ಭಾರತದಲ್ಲಿ ದಿನೇ ದಿನೇ ಮಹಾಮಾರಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಸಾವಿನ ಪ್ರಮಾಣವೂ ಹೆಚ್ಚಾಗುತ್ತಿವೆ. ಕೋವಿಡ್-19 ನ ತಡೆಗಟ್ಟಲು ಲಾಕ್ ಡೌನ್ ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಆಗಾಗ ಸೋಪಿನಿಂದ ಕೈ ತೊಳೆದುಕೊಳ್ಳಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಪದೇ ಪದೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಭಾರತದಲ್ಲಿ ನಡೆಯುತ್ತಿದೆ. ಇದರ ಪರಿಣಾಮವೋ ಏನೋ.. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಇಂದು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

 

ನೀವೆಲ್ಲ ನಿಬ್ಬೆರಗಾಗುವ ಸುದ್ದಿ ಏನಪ್ಪಾ ಅಂದ್ರೆ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಕಳೆದ 14 ದಿನಗಳಿಂದ ದೇಶದ 78 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ.!

 

''ಕಳೆದ 28 ದಿನಗಳಿಂದ ರಾಷ್ಟ್ರದ 12 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣ ದಾಖಲಾಗಿಲ್ಲ. ಹಾಗೇ, ಕಳೆದ 14 ದಿನಗಳಿಂದ ದೇಶದ 78 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿಲ್ಲ'' ಎಂದು ಇಂದಿನ ನ್ಯೂಸ್ ಬ್ರೀಫಿಂಗ್ ವೇಳೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

 

''ಸಕಾರಾತ್ಮಕ ಫಲಿತಾಂಶಗಳನ್ನು ನೀಡುವ ಪರೀಕ್ಷೆಗಳ ಶೇಕಡವಾರು ಪ್ರಮಾಣದಲ್ಲಿ ಇತರೆ ಅಭಿವೃದ್ಧಿ ಹೊಂದಿರುವ ದೇಶಗಳಿಗಿಂತ ಭಾರತ ಉತ್ತಮವಾಗಿ ಕಾರ್ಯನಿರ್ವಹಿಸಿದೆ'' ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

 

''ಲಾಕ್ ಡೌನ್ ನಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಕೋವಿಡ್-19 ಪ್ರಕರಣಗಳು 16 ಪಟ್ಟು ಹೆಚ್ಚಾಗಿದ್ದರೆ, ಅದರ ಟೆಸ್ಟಿಂಗ್ ಪ್ರಮಾಣವನ್ನು 24 ಪಟ್ಟು ಹೆಚ್ಚಿಸಲಾಗಿದೆ'' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

 

ಕಳೆದ ತಿಂಗಳಿಗೆ ಹೋಲಿಸಿದರೆ, ಕೋವಿಡ್-19 ಗಾಗಿ ಮೀಸಲಿಟ್ಟ ಆಸ್ಪತ್ರೆಗಳ ಪ್ರಮಾಣ 3.5 ಪಟ್ಟು ಹೆಚ್ಚಾಗಿದೆ. ಇನ್ನು ಐಸೊಲೇಷನ್ ಬೆಡ್ ಗಳ ಸಂಖ್ಯೆಯೂ 3.6 ಪಟ್ಟು ಹೆಚ್ಚಿಸಲಾಗಿದೆ.

 

30 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಕೋವಿಡ್-19 ಪರೀಕ್ಷೆಗಾಗಿ ಪಿ.ಸಿ.ಆರ್ ಟೆಸ್ಟಿಂಗ್ ವಿಧಾನವನ್ನು ಅನುಸರಿಸಲಾಗಿದೆ. ಏಪ್ರಿಲ್ 22 ರವರೆಗೂ 5 ಲಕ್ಷಕ್ಕೂ ಹೆಚ್ಚು ಟೆಸ್ಟ್ ಗಳನ್ನು ಮಾಡಲಾಗಿದೆ.

 

ಇಲ್ಲಿಯವರೆಗೂ ಭಾರತದಲ್ಲಿ 21,393 ಕೋವಿಡ್-19 ಪ್ರಕರಣಗಳು ದೃಢ ಪಟ್ಟಿವೆ. 4257 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 681 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 388 ಮಂದಿ ಗುಣಮುಖರಾಗಿದ್ದರೆ, 1409 ಹೊಸ ಪ್ರಕರಣಗಳು ಪತ್ತೆಯಾಗಿವೆ.

 

 

మరింత సమాచారం తెలుసుకోండి: