ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಿಡುಗಡೆ ಯಾವಾಗ ಅನ್ನೋದು ನಿಮಗೆಲ್ಲ ಗೊತ್ತಿರಬಹುದು. ಹೌದು, ಈ ಚಿತ್ರ ಬಿಡುಗಡೆಗೆ ಕೇವಲ  ೧೧ ದಿನಗಳು ಬಾಕಿ ಇವೆ. ಇನ್ನೊಂದು ಖುಷಿಯಯ ವಿಷ್ಯ ಏನಪ್ಪ ಅಂದರೆ, ಪೈಲ್ವಾನ್ ಚಿತ್ರಕ್ಕೆ ಯಾವುದೇ ಸೆನ್ಸರ್ ಕಟ್ ಆಗಿಲ್ಲ. ಜೊತೆಗೆ ಯು/ಎ ಸರ್ಟಿಫಿಕೆಟ್ ಕೂಡ ದೊರೆತಿದೆ. ಹೀಗಾಗಿ ಇದು ಕೇವಲ ಚಿತ್ರತಂಡವನ್ನಷ್ಟೇ ಅಲ್ಲ, ಇಡೀ ಅಭಿಮಾನಿಗಳ ಖುಷಿಯನ್ನೂ ಹೆಚ್ಚಿಸಿದೆ.ಈ ನಡುವೆ ಪೈಲ್ವಾನ್ ಚಿತ್ರ ಇದೀಗ ದಾಖಲೆ ಬರೆದಿದೆ. ಅದೂ ಕೆಜಿಎಫ್ ಚಿತ್ರವನ್ನು ಮೀರಿ ಮಾಡಿದ ದಾಖಲೆ.


ಪೈಲ್ವಾನ್ ಚಿತ್ರ ಮಾಡಿದ ದಾಖಲೆ ಏನು? ಯಾವ ವಿಷಯದಲ್ಲಿ ಕೆಜಿಎಫ್ ದಾಖಲೆಯನ್ನು ಪೈಲ್ವಾನ್ ಪುಡಿ ಪುಡಿ ಮಾಡಿದ್ದಾನೆ? ಈ ಬಗ್ಗೆ ಮತ್ತಷ್ಟು ವಿವರ ಇಲ್ಲಿದೆ ನೋಡಿ. 'ಪೈಲ್ವಾನ್' ಸಿನಿಮಾ ದೊಡ್ಡ ಮಟ್ಟಿಗಿನ ಹೈಪ್‌ನೊಂದಿಗೆ ತೆರೆಗೆ ಬರುತ್ತಿದೆ. ಅಲ್ಲದೇ ಈ ಚಿತ್ರವನ್ನು ಬಾಲಿವುಡ್ನಲ್ಲೂ ದೊಡ್ಡ ಮಟ್ಟದಲ್ಲೇ ಲಾಂಚ್ ಮಾಡಲಾಗುತ್ತಿದೆ. ಅದಕ್ಕೆ ಕಾರಣ ಏನು ಗೊತ್ತಾ? ಬಾಲಿವುಡ್ ನಲ್ಲಿ ಝೀ ಸ್ಟುಡಿಯೋಸ್  ಚಿತ್ರದ ಹಕ್ಕನನ್ನು ಖರಿದೀ ಮಾಡಿದೆ.


ಇದೇ ಕಾರಣಕ್ಕೆ ಪೈಲ್ವಾನ್ ಚಿತ್ರದ ಮೈಲೇಜ್ ಮತ್ತಷ್ಟು ಹೆಚ್ಚಿದೆ ಎನ್ನಬಹುದು. ಪೈಲ್ವಾನ್ ಚಿತ್ರ ಬಿಡುಗಡೆ ಆಗುವ ಥೀಯಟರ್ ಗಳ ಸಂಖ್ಯೆ ಎಷ್ಟು ಗೊತ್ತಾ? ಬರೋಬ್ಬರಿ 3000 ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಹೌದು ಹಿಂದಿ ಭಾಷೆಯಲ್ಲಿ ಬರೋಬ್ಬರಿ 1500-2000 ಚಿತ್ರಮಂದಿರಗಳಲ್ಲಿ, ಇನ್ನುಳಿದಂತೆ ಪ್ರಾದೇಶಿಕ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ 1000 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಹೀಗೆ ಒಟ್ಟಾರೆ 3000 ಚಿತ್ರಮಂದಿರಗಳಲ್ಲಿ ಪೈಲ್ವಾನ್ ತೆರೆ ಕಾಣುವ ಮೂಲಕ ದಾಖಲೆ ಮಾಡಿದೆ. 


ಈ ಹಿಂದೆ ಕೆಜೆಎಫ್ ಸಿನಿಮಾ 2000 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಪೈಲ್ವಾನ್ ಕೆಜಿಎಫ್ ನ ದಾಖಲೆಯನ್ನು ಮುರಿದು ಹಾಕಿದೆ, ಕೆಜಿಎಫ್‌ ಗಿಂತಹ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪೈಲ್ವಾನ್ ಬಿಡುಗಡೆ ಆಗುತ್ತಿದೆ. ಇನ್ನು ಚಿತ್ರದ ಕತೆಗೆ ಬಂದರೆ, ಕಿಚ್ಚ ಸುದೀಪ್ ಅವರು ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ಖಳನ ಪಾತ್ರದಲ್ಲಿ ಬಾಲಿವುಡ್ ನಟ ಕಬೀರ್ ದುಹಾನ್ ಸಿಂಗ್ ಅಭಿನಯ ಮಾಡಿದ್ದಾರೆ. ಇನ್ನು ಟ್ರೇಲರ್ ನೋಡಿದ್ರೆ, ಕ್ಲೈಮ್ಯಾಕ್ಸ್ನಲ್ಲಿ ಸುದೀಪ್-ಕಬೀರ್ ನಡುವೆ ಫೈಟ್ ನಡೆಯಲಿದೆ ಎಂದು ತಿಳಿದು ಬಂದಿದೆ.


ಈ ಚಿತ್ರದದಲ್ಲಿ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್ ಇರೋದು ವಿಶೇಷ. ಇನ್ನು0 ಆಕಾಂಕ್ಷಾ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಸೆ.12ರಂದು ಈ ಚಿತ್ರ ಐದು ಬಾಷೆಗಳಲ್ಲಿ ತೆರೆಗೆ ಬರುತ್ತಿದೆ.


మరింత సమాచారం తెలుసుకోండి: