ನಟ ರಾಕಿಂಗ್ ಸ್ಟಾರ್ ಈ ಹಿಂದೆ ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಮನೆಯನ್ನು ಖಾಲಿ ಮಾಡಿದರು. ಆದರೆ, ಈ ಬಾಡಿಗೆ ಮನೆ ವಿವಾದ ಪ್ರಕರಣ ಮತ್ತೆ ಮತ್ತೆ ಸದ್ದು ಮಾಡುತ್ತಲೇ ಇದೆ. ಇದೀಗ ಯಶ್ ಗೆ ಮತ್ತೊಂದು ರಿಲೀಫ್ ಸಿಕ್ಕಿದೆ.
ಹೌದು, ನಟ ರಾಕಿಂಗ್ ಸ್ಟಾರ್ ಯಶ್ ಅವರ ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕರು ಯಶ್ ತಾಯಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಮನೆ ಖಾಲಿ ಮಾಡುವಾಗ ಕೆಲವು ವಸ್ತುಗಳನ್ನು ಹಾಗೂ ಮನೆಯನ್ನು ಕೆಲವು ಭಾಗವನ್ನು ಡ್ಯಾಮೇಜ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಆದರೆ ಈ ದೂರು ಪ್ರಶ್ನಿಸಿ ಯಶ್ ತಾಯಿ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನಾವು ಹೈ ಕೋರ್ಟ್ ಹೇಳಿದಂತೆ ಬಾಡಿಗೆ ಮನೆ ಖಾಲಿ ಮಾಡಿದ್ದೇವೆ. ಕೋರ್ಟ್ ಕೇಳಿದಷ್ಟು ಹಣವನ್ನೂ ಪಾವತಿಸಿದ್ದೇವೆ. ನಮ್ಮ ವಸ್ತುಗಳನ್ನು ತೆಗೆಯುವಾಗ ಮನೆಗೆ ಕೆಲವೊಂದು ಕಡೆ ಡ್ಯಾಮೇಜ್ ಮಾಡಿರಬಹುದು. ಅದಕ್ಕಾಗಿ ಎಫ್ ಐಆರ್ ದಾಖಲಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪುಷ್ಪಾ ವಿರುದ್ಧ ಬೆಂಗಳೂರಿನ ಗಿರಿನಗರದಲ್ಲಿ ದಾಖಲಾದ ಎಫ್ ಐಆರ್ ಅನ್ನು ಹೈ ಕೋರ್ಟ್ ರದ್ದು ಮಾಡಿದೆ. ಈ ಮೂಲಕ ಯಶ್ ಕುಟುಂಬಕ್ಕೆ ಕೊಂಚ ರಿಲೀಫ್ ಸಿಕ್ಕಿದೆ ಎನ್ನಬಹುದು.
click and follow Indiaherald WhatsApp channel