ಕೊರೋನಾ ವೈರಸ್ ಅನ್ನು ತಡೆಯುವ ಉದ್ದೇಶದಿಂದ  ಜಗತ್ತಿನ ಹಲವು ರಾಷ್ಟ್ರಗಳು ಕೊರೋನಾಗೆ ಔಷಧಿಯನ್ನು ಸಂಶೋಧಿಸುತ್ತಿದೆ. ಈ ಗಾಗಲೇ ಕೆಲವು ದೇಶಗಳು ಔಷಧಿಯನ್ನು ಸಂಶೋಧಸಿ ಈಗಾಗಲೇ ಕ್ಲಿನಿಕಲ್ ಟೆಸ್ಟ್ ಗೆ ಒಳಗಾಗಿವೆ ಈ ಸಂದರ್ಭದಲ್ಲಿ ಕೊರೋನಗೆ ಔಷಧಿಯನ್ನು ಮಾರುಕಟ್ಟೆಗೆ ಬಿಡಲು ಸ್ಪರ್ಧೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಯಾವ ದೇಶದ ಔಷಧಿಯು ಮೊದಲು ಬರುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಅಷ್ಟಕ್ಕೂ ಕೊರೋನಾ ಔಷಧಿ ಮಾರುಕಟ್ಟೆಗೆ ಎಂದಿಗೆ ಬರುತ್ತೆ ಗೊತ್ತ..?

 

ಕೊರೊನಾ ವೈರಸ್‌ ಸೋಂಕಿಗೆ ಕಡಿವಾಣ ಹಾಕಿ, ವಿಶ್ವವನ್ನು ಮತ್ತೆ ಮುಕ್ತಗೊಳಿಸುವ ಭರವಸೆ ಹುಟ್ಟಿಸಿರುವ ಲಸಿಕೆಗಾಗಿ ಇಡೀ ವಿಶ್ವ ಕಾತರದಿಂದ ಕಾಯುತ್ತಿದೆ. ಸಂಶೋಧನೆಯು ಹಲವು ದೇಶಗಳಲ್ಲಿ ಭರದಿಂದ ಸಾಗಿದೆ. ಸುಮಾರು 165 ಸಂಸ್ಥೆಗಳು ಲಸಿಕೆಯ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಈ ಪೈಕಿ 27 ಲಸಿಕೆಗಳು ಮಾತ್ರ ಮನುಷ್ಯರ ಮೇಲೆ ಪ್ರಯೋಗ ನಡೆಸುವ ಹಂತ ತಲುಪಿವೆ.

 

ಸುರಕ್ಷಿತ ಲಸಿಕೆಯೊಂದು ಸಿದ್ಧವಾಗಲು ಹಲವು ವರ್ಷಗಳ ಸಂಶೋಧನೆ ಅತ್ಯಗತ್ಯ. ಆದರೆ ಈ ಬಾರಿ ಮಾತ್ರ ವಿಜ್ಞಾನಿಗಳು ಒಂದು ವರ್ಷದೊಳಗೆ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಟೊಂಕಕಟ್ಟಿ ನಿಂತಿದ್ದಾರೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಕೊರೊನಾಗೆ ಲಸಿಕೆ ಅಭಿವೃದ್ಧಿಪಡಿಸುವ ಕೆಲಸ ಆರಂಭವಾಗಿದ್ದು ಕಳೆದ ಜನವರಿಯಲ್ಲಿ. SARS-CoV-2 genome ಹೆಸರಿನ ವೈರಾಣುವನ್ನು ಹದ್ದುಬಸ್ತಿನಲ್ಲಿ ಇಡಬಲ್ಲ ಲಸಿಕೆಯ ಮಾನವ ಪ್ರಯೋಗ ಮಾರ್ಚ್‌ನಿಂದ ನಡೆಯುತ್ತಿದೆ. ಆದರೆ ಮುಂದಿನ ಹಾದಿ ಇನ್ನೂ ದೀರ್ಘವಾದುದು. ಈವರೆಗೆ ಭರವಸೆ ಹುಟ್ಟಿಸಿರುವ ಕೆಲ ಪ್ರಯೋಗಗಳು ವಿಫಲವಾಗಬಹುದು, ಕೆಲವೇ ಪ್ರಯೋಗಗಳಲ್ಲಿ ಮಾತ್ರ ನಿರೀಕ್ಷಿತ ಫಲಿತಾಂಶಗಳು ಹೊಮ್ಮಬಹುದು.

 

ಈಗಾಗಲೇ ಪರೀಕ್ಷೆ ಗೆದ್ದಿದೆ ಒಂದು ಲಸಿಕೆ

 

ಚೀನಾದ ಕ್ಯಾನ್ ಸಿನೊ ಬಯೊ ಸಂಸ್ಥೆಯು ಮಿಲಿಟರಿ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಜೊತೆಗೂಡಿ ಅಭಿವೃದ್ಧಿಪಡಿಸಿರುವ ಎಡಿ5 ಲಸಿಕೆ ಎಲ್ಲ ಹಂತದ ಪರೀಕ್ಷೆಗಳನ್ನು ದಾಟಿ, ಜನರ ಬಳಕೆಗೆ ಅನುಮತಿ ಪಡೆದುಕೊಂಡಿದೆ. ಕಳೆದ ಮೇ ಮತ್ತು ಜೂನ್‌ ತಿಂಗಳಲ್ಲಿ ಈ ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಪ್ರಯೋಗಗಳ ಫಲಿತಾಂಶಗಳ ಬಗ್ಗೆ ವರದಿಗಳು ಪ್ರಕಟವಾಗಿದ್ದವು. ಈ ಲಸಿಕೆಯು ಮಾನವ ದೇಹದಲ್ಲಿ ಪ್ರಬಲ ಪ್ರತಿಕಣಗಳನ್ನು ಸೃಜಿಸಿದ ದಾಖಲೆಗಳನ್ನೂ ಸಂಸ್ಥೆ ಬಹಿರಂಗಪಡಿಸಿತ್ತು.

ಚೀನಾದ ಮಿಲಿಟರಿ ಜೂನ್ 25ರಂದು ಈ ಲಸಿಕೆಯ ಬಳಕೆಗೆ ಅನುಮೋದನೆ ನೀಡಿತು. ಈ ಲಸಿಕೆ ಹಾಕಿಸಿಕೊಳ್ಳುವುದು ಚೀನಾದ ಯೋಧರಿಗೆ ಕಡ್ಡಾಯಗೊಳಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಕ್ಯಾನ್‌ಸಿನೊ ಸಂಸ್ಥೆ ಈ ಕುರಿತು ಏನನ್ನೂ ಹೇಳಿಲ್ಲ.

 

మరింత సమాచారం తెలుసుకోండి: