ನಟ ರಿಷಿ ಅವರು ಸಾರ್ವಜನಿಕರಿಗಾಗಿ ಸುವರ್ಣಾವಕಾಶ ಚಿತ್ರ ಮಾಡುತ್ತಿರೋದು ನಿಮಗೆಲ್ಲ ಗೊತ್ತೇ ಇದೆ. ಅಲ್ಲದೇ ಇಂದು ನಟ ರಿಷಿಯ ಹುಟ್ಟುಹಬ್ಬ. ಹೀಗಾಗಿ ಸಾರ್ವಜನಿಕವಾಗಿ ಸುವರ್ಣಾವಕಾಶ ಚಿತ್ರತಂಡ ರಿಷಿ ಹುಟ್ಟುಹಬ್ಬದ ದಿನದಂದೇ ಟೀಸರ್ ಬಿಡುಗಡೆ ಮಾಡಿ, ಬರ್ಥಡೇ ಗೆ ವಿಶ್ ಮಾಡಿದೆ.
ಈ ಚಿತ್ರದ ಟೀಸರ್ ನೋಡಿದರೆ, ಸಿನಿಮಾ ತುಂಬ ಮನೋರಂಜನೆ ತುಖಬಿದೆ ಎಂದು ತಿಳಿಯುತ್ತದೆ. ಟೀಸರ್ ನಲ್ಲಿ ಕಾಮಿಡಿ ಹೆಚ್ಚಿದೆ. ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗೋ ರೀತಿ ಇದೆ ಎನ್ನಲಾಗುತ್ತಿದೆ . ಇದರಲ್ಲಿ ನಕ್ಕು ನಗಿಸುವ ಅಂಶಗಳಿವೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ರಿಷಿ ಅವರ ಮ್ಯಾನರಿಸಂ ಅನ್ನು ಸಿನಿಮಾದಲ್ಲಿ ಚೆನ್ನಾಗಿ ಬಳಸಿಕೊಳ್ಳಲಾಗಿದೆ. ಜೊತೆಗೆ ರಿಷಿ ಜೊತೆ ನಟಿಸಿದ ಧನ್ಯಾ ಬಾಲಕೃಷ್ಣ ಅವರು ಚಿತ್ರದಲ್ಲಿ ಮುದ್ದಾಗಿ ಕಾಣುತ್ತಾರೆ. ಅಲ್ಲದೇ ಕ್ರಿಕೆಟ್ ಕಾಮೆಂಟ್ರಿ ಮೂಲಕ ಟೀಸರ್ ನಿರೂಪಣೆ ಸಾಗಿದೆ. ಟೀಸರ್ ಕೂಡ ತುಂಬಾನೇ ಹೊಸತನದಿಂದ ಕೂಡಿದೆ.
click and follow Indiaherald WhatsApp channel