ಕೊರೋನಾ ವೈರಸ್ ಜಗತ್ತಿನಲ್ಲಿ ಹೆಚ್ಚುತ್ತಿದ್ದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಇದರಿಂದಾಗಿ ಅದೆಷ್ಟೊ ದೇಶಗಳ  ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ, ಈ ಒಂದು ಕೊರೊನಾ ವೈರಸ್ ಹರಡಲು ಚೀನಾ ದೇಶ ಕಾರಣ ಎಂದು ಅಮೇರಿಕಾ ಹೇಳುತ್ತಿದ್ದರೆ ವಿಶ್ವ ಸಂಸ್ಥೆ ಮಾತ್ರ ಚೀನಾ ಪರ ಮಾತನಾಡುತ್ತಿದೆ. ಇದಕ್ಕೆ ಅಮೇರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿದೆ. ಅಷ್ಟಕ್ಕೂ ಆ ಎಚ್ಚರಿಕೆ ಏನು ಗೊತ್ತಾ..? ಇಲ್ಲಿದೆ ನೋಡಿ

 

ಮಾರಕ ಕೊರೋನಾ ವೈರಸ್ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ವಿರುದ್ಧ ಕೆಂಡಾಮಂಡಲರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ WHOಗೆ ಅಮೆರಿಕ ನೀಡುತ್ತಿದ್ದ ಅನುದಾನವನ್ನು ಶಾಶ್ವತವಾಗಿ ಕಡಿತ ಮಾಡುವ ಎಚ್ಚರಿಕೆ ನೀಡಿದ್ದಾರೆ.

 

ನಿನ್ನೆಯಷ್ಚೇ ಭಾರತವೂ ಸೇರಿದಂತೆ ವಿಶ್ವದ 122ಕ್ಕೂ ಅಧಿಕ ರಾಷ್ಟ್ರಗಳು ಕೊರೋನಾ ವೈರಸ್ ಹುಟ್ಟು ಮತ್ತು ವೈರಸ್ ಸೋಂಕು ನಿರ್ವಹಣೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ನಡೆ ಕುರಿತು ಕೂಲಂಕುಷ ತನಿಖೆಯಾಗಬೇಕು ಎಂದು ಆಗ್ರಹಿಸಿ ಸಹಿ ಹಾಕಿದ ಮಾರನೆಯೇ ದಿನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವಸಂಸ್ಥೆಗೆ ಅಮೆರಿಕ ನೀಡುತ್ತಿರುವ ಅನುದಾನವನ್ನು ಶಾಶ್ವತವಾಗಿ ಕಡಿತ ಮಾಡುವ ಎಚ್ಚರಿಕೆ ನೀಡಿದ್ದಾರೆ.

 

ಈ ಕುರಿತಂತೆ ಮಾತನಾಡಿರುವ ಟ್ರಂಪ್, 'ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಚೀನಾದ 'ಕೈಗೊಂಬೆ'ಯಂತೆ ವರ್ತಿಸುತ್ತಿದೆ. ಅವರು ಚೀನಾ ಪರವಾಗಿ ಮಾತಾಡುತ್ತಿದ್ದಾರೆ. ಅಮೆರಿಕವು WHOಗೆ ವಾರ್ಷಿಕ 3.4 ಸಾವಿರ ಕೋಟಿ ರೂ (450 ಮಿಲಿಯನ್‌ ಡಾಲರ್‌) ಅನುದಾನ ನೀಡುತ್ತಿದೆ. ಇದು ವಿಶ್ವದ ಯಾವುದೇ ರಾಷ್ಟ್ರ ನೀಡುವುದಕ್ಕಿಂತ ಅಧಿಕ. ಆದರೆ, ಅದು ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿ ಅನುದಾನ ಕಡಿತಗೊಳಿಸಲು ಯೋಜನೆ ರೂಪಿಸಲಾಗಿದೆ. WHOದವರು ನಮಗೆ ಸಾಕಷ್ಟು ಕೆಟ್ಟ ಉಪದೇಶ ನೀಡಿದ್ದಾರೆ. ಚೀನಾ ವಾರ್ಷಿಕ ಕೇವಲ 300 ಕೋಟಿ ರೂ (40 ಮಿಲಿಯನ್‌ ಡಾಲರ್) ನೀಡುತ್ತಿದೆ. ನಾವು ನೀಡುತ್ತಿರುವ ಅನುದಾನವನ್ನು 300 ಕೋಟಿಗೆ ರೂ (40 ಮಿಲಿಯನ್ ಡಾಲರ್‌ಗೆ) ಇಳಿಸುವ ಯೋಜನೆಯಲ್ಲಿದ್ದೇವೆ. ಈ ಕುರಿತಂತೆ ಇನ್ನು 30 ದಿನಗಳೊಳಗೆ ನಿರ್ಧಾರ ಪ್ರಕಟಿಸುವುದಾಗಿಯೂ ಟ್ರಂಪ್ ಹೇಳಿದ್ದಾರೆ.

 

ಅಂತೆಯೇ ಮೊದಲು ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್‌-19 ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದ ನಂತರ WHO ತನ್ನ ಮೊದಲ ವಾರ್ಷಿಕ ಸಭೆ ನಡೆಸಿದೆ. ಸೋಂಕಿನಿಂದಾಗಿ ವಿಶ್ವದಾದ್ಯಂತ 3.16 ಲಕ್ಷ ಜನರು ಮೃತಪಟ್ಟಿದ್ದಾರೆ. ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಅಪಾರ ಆರ್ಥಿಕ ಹಿನ್ನಡೆಯಾಗಿದೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

మరింత సమాచారం తెలుసుకోండి: