ಈಗೇನಿದ್ದರು ಸ್ಯಾಂಡಲ್ ವುಡ್ ನಲ್ಲಿ ಡಿಂಪಲ್ ಕ್ವಿನ್ ರಚಿತಾ ರಾಮ್ ಹವಾ. ನಟಿಯಾಗಿ ಸಾಕಷ್ಟು ಹೆಸರು ಗಳಿಸಿದರು ಸಹ ತುಂಬಾ ಸರಳವಾಗಿ, ನೋಡುಗರ ಕಣ್ಮನ ಸೆಳೆಯುವ ರಚಿತಾ ರಾಮ್ ಇದೀಗ ಕವಲುದಾರಿ ಖ್ಯಾತಿಯ ರಿಷಿ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. 


 ಮೋಹನ್‌ ಸಿಂಗ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾಗೆ ಎನ್‌ಆರ್‌ಐ ಹುಡುಗಿಯಾಗಿ ರಚಿತಾ ಕಾಣಿಸಿಕೊಳ್ಳಲಿದ್ಧಾರಂತೆ. ಅವರ ಎದುರು ನಟ ರಿಷಿ ಲೋಕಲ್‌ ಹುಡುಗನಾಗಿ ಮಿಂಚಲಿದ್ದಾರೆಂದು ತಿಳಿದುಬಂದಿದೆ. ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್‌ ಸ್ಯಾಂಡಲ್‌ವುಡ್‌ನ ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್‌, ಶ್ರೀಮುರಳಿ ಸೇರಿದಂತೆ ಬಹುತೇಕ ಎಲ್ಲ ಸ್ಟಾರ್ ಹೀರೋಗಳ ಜತೆ ತೆರೆಹಂಚಿಕೊಂಡಿದ್ದಾರೆ. ಸ್ಟಾರ್ ನಿರ್ದೇಶಕರ ಸಿನಿಮಾಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಆದರೆ, ನಿರ್ದೇಶಕ ಯೋಗರಾಜ್ ಭಟ್, ಶಶಾಂಕ್‌ ಅವರ ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಅವರಿಗೆ ಸಿಕ್ಕಿರಲಿಲ್ಲ. ಈಗ ಅಂಥದ್ದೊಂದು ಅವಕಾಶ ಒದಗಿಬಂದಿದೆ. ವಿಶೇಷವೆಂದರೆ, ಈ ಸಿನಿಮಾಗೆ ಯೋಗ ರಾಜ್‌ ಭಟ್, ಶಶಾಂಕ್‌ ಮಾಡುತ್ತಿಲ್ಲ. ಬದಲಿಗೆ ನಿರ್ಮಾಣ ಮಾಡುತ್ತಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. 


ಇನ್ನು, ಪ್ರಮುಖ ಪಾತ್ರವೊಂದರಲ್ಲಿ ಅನಂತ್ ನಾಗ್ ಅವರು ಇರಲಿದ್ದಾರಂತೆ. ಡಿಸೆಂಬರ್ ಮಧ್ಯ ಭಾಗದಲ್ಲಿ ಈ ಸಿನಿಮಾ ಶುರುವಾಗುವ ಸಾಧ್ಯತೆಗಳಿವೆ. ಇನ್ನು, ಚಿತ್ರಕ್ಕೆ 'ಸೀರೆ' ಅನ್ನೋ ಟೈಟಲ್‌ ಇಡುವ ಬಗ್ಗೆ ಚರ್ಚೆ ಆಗಿದೆಯಂತೆ. ಇನ್ನು, ರಿಷಿ ಸಿಕ್ಕಾ ಪಟ್ಟೆ ಬ್ಯುಸಿ ಆಗಿದ್ದಾರೆ. ಅವರ ನಟನೆಯ 'ಸಾರ್ವಜನಿಕರಿಗೆ ಸುವರ್ಣಾಕಾಶ' ಚಿತ್ರ ತೆರೆಗೆ ಸಿದ್ಧವಾಗಿದೆ. ಜತೆಗೆ 'ಸಕಲಾವಲ್ಲಭ' ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಿದೆ. ಹ್ಯಾಟ್ರಿಕ್ ಹೀರೋ, ಶಿವ ರಾಜ್‌ಕುಮಾರ್ ಜತೆ ನಟಿಸಿರುವ 'ಆಯುಷ್ಮಾನ್‌ಭವ' ಈ ಕೆಲವೆ ದಿನಗಳಲ್ಲಿ ರಿಲೀಸ್ ಆಗಲಿದೆ. ಆದರ ಜತೆಗೆ ರಮೇಶ್‌ ಅರವಿಂದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ '100' ಹಾಗೂ ಧನಂಜಯ ಜತೆ 'ಡಾಲಿ' ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಚಿತಾ ಗೆ ಪ್ರಸ್ತುತ ಸ್ಯಾಂಡಲ್ ವುಡ್ ನಲ್ಲಿ ಸುವರ್ಣ ದಿನ ಗಳಾಗಿವೆ.


మరింత సమాచారం తెలుసుకోండి: