ಮಂಡ್ಯ: ನನಗೆ ಯಾರು ಹೈಕಮಾಂಡ್ ಇಲ್ಲ. ನಾನು ಯಾವ ಪಕ್ಷದ ಪರವೂ ಅಲ್ಲ, ವಿರುದ್ಧವೂ ಅಲ್ಲ. ಜನರೇ ನನ್ನ ಹೈಕಮಾಂಡ್. ಅವರು ಹೇಳಿದ್ದೇ ಅಂತಿಮ ಎಂದು ಸಂಸದೆ ಸುಮಲತಾ ಅಂಬರೀಶ್ ಅಬ್ಬರಿಸಿದ್ದಾರೆ. ನನ್ನನ್ನು ಇನ್ನೂ ಯಾರು ಭೇಟಿ ಮಾಡಿ ಬೆಂಬಲ ಕೇಳಿಲ್ಲ ಸುಮ್ಮನೆ ಗಾಸಿಪ್ ಗಳನ್ನು ಹಬ್ಬಿಸಲಾಗುತ್ತಿದೆ ಅಷ್ಟೇ ಎಂದಿದ್ದಾರೆ.  ಮಂಡ್ಯ ದಲ್ಲಿ ಶನಿವಾರ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಯಾರಿಗೆ ಬೆಂಬಲ ಎಂಬ ಪ್ರಶ್ನೆಗೆ ಮಂಡ್ಯದಲ್ಲಿ ಸುಮಲತಾ ಪ್ರತಿಕ್ರಿಯೆ ನೀಡಿದ ಅವರು, ಇನ್ನು ಸಮಯ ಇದೆ. ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಬರಬೇಕಿದೆ.

ಯಾವುದು ಸೂಕ್ತ ಎಂಬುದನ್ನು ಜನ ಹೇಳಬೇಕು. ನಾನು ತೀರ್ಮಾನ ತೆಗೆದುಕೊಳ್ಳುವುದಲ್ಲ ಎಂದು ಸುಮತಲಾ ಅಂಬರೀಶ್ ಸರಳವಾಗಿ ಮಾಧ್ಯಮಗಳಿಗೆ ಉತ್ತರ ನೀಡಿದ್ದಾರೆ. ಅವರಿಗೆ ಎಂದಲ್ಲ. ನನಗೆ ಗೌರವ, ಸ್ಥಾನ-ಮಾನ ಕೊಟ್ಪಿದ್ದು ಜನ. ಮತ್ತಾರು ಅಲ್ಲ. ನನಗೆ ಹೈಕಮಾಂಡ್ ಇಲ್ಲ. ನಾನೇ ಹೈಕಮಾಂಡ್, ಜನರೇ ನನ್ನ ಹೈಕಮಾಂಡ್. ನಾನು ಕೇಳಬೇಕಿಲ್ಲ. ಜನರೇ ಬಂದು ಹೇಳುತ್ತಾರೆ. ಆಗಲೇ ಜನ ಏನ್ ಇಷ್ಟಪಡುತ್ತಿದ್ದಾರೆಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. 


ಅಷ್ಟೇ ಅಲ್ಲದೇ ನಾನು ಜನರಿಂದ ಗೆದ್ದು ಬಂದಿದ್ದೇನೆ. ಯಾವುದೇ ಪಕ್ಷಗಳಿಂದ ಲ್ಲ. ನಾನು ಪಕ್ಷೇತರಳು, ಬೆಂಬಲ ಕೊಡಲೇಬೇಕು ಅಂತ ಬಲವಂತ ಇಲ್ಲ, ಯಾರೂ ಬಲವಂತ ಮಾಡಲು ಆಗಲ್ಲ. ನಾನು ತಟಸ್ಥವಾಗಿಯೂ ಇರಬಹುದು. ಬೆಂಬಲ ಕೊಡುವ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅದು ನನ್ನ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಸುಮಲತಾ ಅವರು ವಿವಾದ ಆಗುವುದಾದರೆ ತಟಸ್ಥ ನಿಲುವು ತಾಳುವ ಸುಳಿವು ನೀಡಿದ್ದಾರೆ.


ಸಂಸದೆ ಸುಮಲತಾ ಅವರಿಗೆ ಸಿನಿಮಾ ರಂಗದ ಜೊತೆಗೆ ಜನರ ಬೆಂಬಲವು ಹೆಚ್ಚಿದೆ. ಆದ್ದರಿಂದ ಈ ಉಪಚುನಾವಣೆಯಲ್ಲಿ ಸುಮಲತಾ ಅವರ ಬೆಂಬಲ ಪಡೆದು ನಾವು ಕೆಲವು ಕ್ಷೇತ್ರಗಳನ್ನು ಗೆಲ್ಲಲೇ ಬೇಕೆಂದು ಕಾಂಗ್ರೇಸ್, ಭಾರತೀಯ ಜನತಾ ಪಕ್ಷ ಲೆಕ್ಕಾಚಾರ ಮಾಡಿದ್ದವು. ಇತ್ತ ಸುಮಲತಾ ಅವರು ಒಂದು ಪಕ್ಷಕ್ಕೆ ಬೆಂಬಲ ನೀಡಿದರೆ ಮತ್ತೊಂದು ಪಕ್ಷದವರ ವಿರೋಧಿಯಾಗಬೇಕಾಗುತ್ತದೆ ಎಂದು ಯೋಚಿಸುತ್ತಿದ್ದಾರೆ. ಬೆಂಬಲ ನೀಡುವ ವಿಚಾರಕ್ಕೂ ಜನಾಭಿಪ್ರಾಯ ಕೇಳಲು ಸುಮಲತಾ ಚಿಂತನೆ ನಡೆಸಿದ್ದಾರೆ.


మరింత సమాచారం తెలుసుకోండి: