ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಆಲೋಚನೆಯಿಂದ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯನ್ನೂ ಕೂಡ ಮಾಡದೆ ರಜೆಯನ್ನು ನೀಡಲಾಗಿತ್ತು. ಆದರೆ ಈಗ ಲಾಕ್ ಡೌನ್ ಸಡಿಲಗೊಳಿಸಲಾಗಿದೆ, ಈ ನಡುವೆ ಶಾಲಾ ಕಾಲೇಜುಗಳು ಆರಂಭಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಇದಕ್ಕೆ ಜನರಿಂದ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಹಾಗಾಗಿ ಸುರೇಶ್ ಕುಮಾರ್ ಶಾಲೆಯ ಆರಂಭಿಸುವ ಕುರಿತಾಗಿ ಒಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಅಷ್ಟಕ್ಕೂ ಆ ಸ್ಪಷ್ಟನೆ ಏನು..?

ಮಾರಕ ಕೊರೋನಾ ವೈರಸ್‌ ಭೀತಿ ಇರುವ ಕಾರಣ ಈ ವರ್ಷ ಯಾವಾಗ ರಾಜ್ಯದಲ್ಲಿ ಶಾಲೆಗಳು ಶುರುವಾಗಲಿವೆ ಎಂಬ ಚರ್ಚೆ ನಡೆಯುತ್ತಲೇ ಇದೆ. ಈ ಮಧ್ಯೆಯೇ ಉಡುಪಿಯಲ್ಲಿ ನಗರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಶಾಲೆಗಳು ಬಹುತೇಕ ಆಗಸ್ಟ್‌ ನಂತರ ಪ್ರಾರಂಭ ಆಗಬಹುದು  ಈ ಕುರಿತು  ಸಚಿವ ಸಂಪುಟದಲ್ಲಿ ಈ ಕುರಿತು ನಾವು ಚರ್ಚೆ ಮಾಡುತ್ತೇವೆ. ಸದ್ಯಕ್ಕಂತೂ ಯಾವುದೇ ಶಾಲೆಯನ್ನು ಆರಂಭ ಮಾಡುವ ಉದ್ದೇಶ ಇಲ್ಲ. ಶಾಲೆ ಆರಂಭವನ್ನು ಹಂತಹಂತವಾಗಿ ಪ್ರಾರಂಭ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು.

ಹೀಗೆ ಮುಂದುವರಿದ ಅವರು, ಮೊದಲು ಹೈಸ್ಕೂಲು ನಂತರ ಶುರು ಮಾಡುತ್ತೇವೆ. ನಂತರ ಮಿಡಲ್ ಸ್ಕೂಲು ಪ್ರಾರಂಭವಾಗಲಿದೆ. ಇದರ ಬೆನ್ನಲ್ಲೇ ಹೈಯರ್ ಪ್ರೈಮರಿ ಸ್ಕೂಲ್ ಆರಂಭಿಸಲಿದ್ದೇವೆ ಎಂದು ತಿಳಿಸಿದರು. ಮಾರ್ಚ್​​ 16ನೇ ತಾರೀಕಿನಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲಾಗಿದೆ. ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಹೀಗೆ ಶಾಲಾ-ಕಾಲೇಜು ಕ್ಲಾಸ್ ರೂಮ್ ಶಟ್​ಡೌನ್ ತಂತ್ರ ಕೇಂದ್ರ ಅನುಸರಿಸಿದೆ.

ದೇಶಾದ್ಯಂತ ಜುಲೈನಿಂದಲೇ ಶಾಲೆಗಳನ್ನು ಪುನಾರಂಭ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಿಕ್ಷಣ ತಜ್ಞರ ಸಮಿತಿಯೊಂದು ಶಿಫಾರಸ್ಸು ಮಾಡಿದೆ. ಕೊರೋನಾ ವೈರಸ್​ ತಡೆಗೆ ಮುಂಜಾಗೃತ ಕ್ರಮವಾಗಿ ಶಾಲಾ- ಕಾಲೇಜುಗಳನ್ನು ಕೇಂದ್ರ ಸರ್ಕಾರವೂ ಬಂದ್​ ಮಾಡಿ ಆದೇಶಿಸಿತ್ತು. ಕ್ಲಾಸ್​ ರೂಮ್​​ಗಳು ಶಟ್​​ಡೌನ್​​ ಆಗಿರುವುದರಿಂದ ಪರೀಕ್ಷೆಗಳು ಯಾವಾಗ ನಡೆಸಬೇಕು? ಶಾಲೆಗಳನ್ನು ಯಾವಾಗ ಆರಂಭಿಸಬೇಕು? ಎನ್ನುವುದರ ಕುರಿತು ಅಧ್ಯಯನ ನಡೆಸುವಂತೆ ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯೂ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ವರದಿ ಆಧಾರದ ಮೇರೆಗೆ ಜುಲೈನಿಂದ ಶಾಲೆಗಳನ್ನು ಪ್ರಾರಂಭಿಸುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ್ದವು.

మరింత సమాచారం తెలుసుకోండి: