ಬೆಂಗಳೂರು, ಮಾರ್ಚ್ 11 : ಕರೋನಾ ವೈರಸ್ ಭೀತಿ ದೇಶದೆಲ್ಲೆಡೆ ಹೆಚ್ಚಾಗುತ್ತಿದೆ. ಹೀಗಾಗಿ ಶಾಲೆಗಳಿಗೆ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ರಜೆಯನ್ನು ಘೋಷಿಸಿದೆ. ಆದರೆ ಸರ್ಕಾರದ ಈ ಆದೇಶವನನ್ನು ಮಿರಿ ಕೆಲವು ಶಾಲೆಗಳಲ್ಲಿ ತರಗತಿಗಳು ಮುಂದುವರೆದಿದ್ದು ವರದಿಗಳಿಂದ ತಿಳಿದು ಬಂದಿದೆ, ಹೀಗಾಗಿ ಅಂತಹ ಶಾಲೆಗಳಿಗೆ ಶಿಕ್ಷಣ ಸಚಿವರು ಇದೀಗ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಹಾಗಾದರೆ ಶಿಕ್ಷಣ ಸಚಿವರು ಕೊಟ್ಟಿರುವ ಎಚ್ಚರಿಕೆ ಏನು?
ಹೌದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಪ್ರಿಕೆಜಿ, ಎಲ್‍ಕೆಜಿಯಿಂದ ಐದನೇ ತರಗತಿವರೆಗಿನ ಶಾಲೆಗಳಿಗೆ ರಜೆ ನೀಡಿ ಸರ್ಕಾರ ಆದೇಶಿಸಿದೆ. ಇದನ್ನು ನಿನ್ನೆಯೇ ಶಿಕ್ಷಣ ಸಚಿವರು ತಿಳಿಸಿದ್ದರು. ಇದಕ್ಕೆ ಕಾರಣ ಬೇರೇನೂ ಅಲ್ಲ, ಕರೋನಾ ಹರಡದಂತೆ ತಡೆಯಲು ವಹಿಸಿದ ಮುನ್ನೆಚ್ಚರಿಕೆ ಕ್ರಮ ಅಷ್ಟೇ. ಆದರೆ ಸರ್ಕಾರದ ಈ ಆದೇಶವನ್ನು ಕೆಲವು ಶಾಲೆಗಳು ಗಾಳಿಗೆ ತೂರಿ, ತಮ್ಮ ತರಗತಿಗಳನ್ನು ಮುಂದುವರೆಸಿವೆ. ಇದನ್ನು ಗಮನಿಸಿದ ಶಿಕ್ಷಣ ಸಚಿವರು ಇದೀಗ ಗರಂ ಆಗಿದ್ದಾರೆ.
ಶಿಕ್ಷಣ ಸಚಿವರಾದಂತ ಸುರೇಶ್ ಕುಮಾರ್ ಅವರು ಈ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಹಾಗಾದರೆ ಅವರು ಫೇಸ್ ಬುಕ್ ನಲ್ಲಿ ಬರೆದ ಅಂಶವೇನು ಎಂದರೆ, ಕೆಲ ಖಾಸಗಿ ಶಾಲೆಗಳು ಸರ್ಕಾರದ ಆದೇಶಕ್ಕೆ ಗೌರವ ಕೊಡದೆ ತಮ್ಮದೇ ಬೇರೆ ಸಾಮ್ರಾಜ್ಯ ಎಂದು ತಿಳಿದು ವ್ಯತಿರಿಕ್ತವಾಗಿ ವರ್ತಿಸುತ್ತಿರುವುದು ತಿಳಿದು ಬಂದಿದೆ. ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸದೆ ಇರುವ ಖಾಸಗಿ ಶಾಲೆಗಳಿಗೆ ಈ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದಿದೆ.
ಸರ್ಕಾರದ ಆದೇಶವನ್ನು ಪಾಲಿಸದ ಶಾಲೆಗಳು ಎಷ್ಟೇ ಪ್ರಭಾವಶಾಲಿ ಇದ್ದರೂ ಕೂಡ ಅವಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಅಷ್ಟಕ್ಕೂ ಎಳೆಯ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಹೀಗಾಗಿ ಎಲ್ಲ ಶಾಲೆಗಳು ಸರ್ಕಾರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಇಲ್ಲದಿದ್ದರೆ ಆ ಶಾಲೆಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಿವಿಮಾತು ಹೇಳಿದ್ದಾರೆ.
click and follow Indiaherald WhatsApp channel